Advertisement
ಅವರು ಅರಣ್ಯಭೂಮಿ ಹೋರಾಟಕ್ಕೆ ಮೂರು ದಶಕ ಸಂದ ವೇಳೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
Related Articles
Advertisement
ಅರಣ್ಯ ಭೂಮಿ ಸಾಗವಳಿದಾರರಿಗೆ ಭೂ ಹಕ್ಕು ನೀಡಲು ಎಲ್ಲಾ ರಾಜಕೀಯ ಪಕ್ಷಗಳು ನಿರ್ಲಕ್ಷ್ಯ ಧೋರಣೆ ಅನುಸರಿಸಿದ್ದಾರೆ ಎಂಬುದು ದುಃಖದ ಸಂಗತಿ. ಇಡೀ ರಾಷ್ಟ್ರದಲ್ಲಿಯೇ ಈ ಸಮಸ್ಯೆ ಇರುವುದು ನಮ್ಮ ದುರಂತ ಎಂದರು.
ಈ ಹೋರಾಟಕ್ಕೆ ಇನ್ನೂ ಮುಕ್ತಾಯ ಇಲ್ಲ. ರವೀಂದ್ರ ನಾಯ್ಕ ಅವರ ಜೊತೆ ಸಾಯುವವರೆಗೂ ನಾನು ಹೋರಾಟ ನಡೆಸುತ್ತೇನೆ. 14 ಸಾವಿರ ಅರ್ಜಿಯನ್ನು ಸಹಾಯಕ ಆಯುಕ್ತ ತಿರಸ್ಕರಿಸುತ್ತಾರೆ. ಶೋಷಿತ ವರ್ಗದಿಂದ ಬಂದ ಅಧಿಕಾರಿಯೇ ಶೋಷಿತರ ಬಗ್ಗೆ ಕಾಳಜಿ ವಹಿಸದಿರುವುದು ದುರಂತ ಎಂದರು.
ಶೇ. 62.82 ರಷ್ಟು ಅರ್ಜಿ ತಿರಸ್ಕೃತವಾಗಿದೆ. ಕೇವಲ ಶೇ.3 ಜನರಿಗೆ ಮಾತ್ರ ನ್ಯಾಯ ಸಿಕ್ಕಿದೆ. ಇನ್ನೂ ಸರ್ಕಾರದ ಕಣ್ಣು ತೆರೆಸಲು ಸಾಧ್ಯವಾಗುತ್ತಿಲ್ಲ. ಅರಣ್ಯದ ಒಳಗಡೆ ಬದುಕಿದವರು ಏನು ಮಾಡಬೇಕು ? ಎಂದೂ ಕೇಳಿದರು.
ಹೋರಾಟಗಾರ ಏ. ರವೀಂದ್ರ ಮಾತನಾಡಿ, ಹೋರಾಟಕ್ಕೆ 30 ಆದರೂ ನಮ್ಮ ಉತ್ಸಾಹ ಕುಗ್ಗಿಲ್ಲ. ಹೋರಾಟ ನ್ಯಾಯ ಸಿಗುವ ತನಕ ಹೋರಾಟ ನಡೆಸುವದಾಗಿ ಹೇಳಿದರು. ಇದೇ ವೇಳೆ ಕಾಗೋಡು ತಿಮ್ಮಪ್ಪ ಅವರನ್ನು ಗೌರವಿಸಲಾಯಿತು.