Advertisement

ಸರ್‌.ಎಂ.ವಿಶ್ವೇಶ್ವರಯ್ಯ ಮೋತಿಭಾಗ್‌ ಮೆಟ್ರೋ ನಿಲ್ದಾಣಕ್ಕೆ ಚಾಲನೆ

12:22 PM Aug 08, 2018 | |

ಮುಂಬಯಿ: ದೆಹಲಿ ಕರ್ನಾಟಕ ಸಂಘದ ವಿಶೇಷ ಪ್ರಯತ್ನದಿಂದಾಗಿ ಸಂಘದ ಪಕ್ಕದಲ್ಲಿರುವ ಮೆಟ್ರೋ ನಿಲ್ದಾಣಕ್ಕೆ ಸರ್‌ ಎಂ. ವಿಶ್ವೇಶ್ವರಯ್ಯ ಎಂದು ನಾಮಕರಣ ಮಾಡಲಾಗಿದ್ದು, ಆ. 6 ರಂದು ಬೆಳಗ್ಗೆ  ಸಾರ್ವಜನಿಕರಿಗೆ ದೆಹಲಿಯ ಮಜಿÉಸ್‌ ಪಾರ್ಕ್‌ನಿಂದ ಶಿವವಿಹಾರ್‌ವರೆಗಿನ 59 ಕಿಲೋ ಮೀಟರ್‌ ಉದ್ದದ ಪಿಂಕ್‌ಲೈನ್‌ ಮೆಟ್ರೋಗೆ ಚಾಲನೆ ನೀಡಲಾಯಿತು.

Advertisement

ಈ ರಸ್ತೆಯಲ್ಲಿ ಬರುವ ದೆಹಲಿ ಕರ್ನಾಟಕ ಸಂಘದ ಪಕ್ಕದಲ್ಲಿರುವ ಮೆಟ್ರೋ ಸ್ಟೇಷನ್‌ಗೆ ದೆಹಲಿ ಕರ್ನಾಟಕ ಸಂಘದ ವಿಶೇಷ ಪ್ರಯತ್ನದಿಂದಾಗಿ ಸರ್‌. ಎಂ. ವಿಶ್ವೇಶ್ವರಯ್ಯ ಮೋತಿಭಾಗ್‌ ಮೆಟ್ರೋ ನಿಲ್ದಾಣ ಎಂದು ನಾಮಕರಣ ಮಾಡಲಾಗಿದೆ. ಈ ಸಂತಸದ ಸಂಭ್ರಮವನ್ನು ದೆಹಲಿ ಕರ್ನಾಟಕ ಸಂಘವು ಕರ್ನಾಟಕದ ಜಾನಪದ ಕಲೆ ಯಕ್ಷಗಾನ ಕುಣಿತದೊಂದಿಗೆ ಸಂಭ್ರಮಿಸಿತು. ಸ್ಥಳಕ್ಕೆ  ಭೇಟಿ ನೀಡಿದ ಕೇಂದ್ರ ಸಚಿವರಾದ ಡಿ. ವಿ. ಸದಾನಂದ ಗೌಡ ಅವರು, ಎಂಜಿನಿಯರಿಂಗ್‌ ಕ್ಷೇತ್ರದಲ್ಲಿ  ದೇಶಕ್ಕೆ ವಿಶೇಷ ಕೊಡುಗೆ ನೀಡಿರುವ ಸರ್‌. ಎಂ. ವಿಶ್ವೇಶ್ವರಯ್ಯನವರ ಹೆಸರನ್ನು ಮೆಟ್ರೋ ಸ್ಟೇಷನ್‌ಗೆ ಇರಿಸುವಲ್ಲಿ ದೆಹಲಿ ಕರ್ನಾಟಕ ಸಂಘದ ಈ ಮಹತ್ತರ ಕಾರ್ಯವನ್ನು ಶ್ಲಾಘಿಸಿದರು.

ಸಂಘದ ಅಧ್ಯಕ್ಷರಾದ ವಸಂತ ಶೆಟ್ಟಿ ಬೆಳ್ಳಾರೆ ಅವರು ಮಾತನಾಡಿ, ದೆಹಲಿ ಕರ್ನಾಟಕ ಸಂಘದ ಮನವಿಗೆ ಸ್ಪಂದಿಸಿ ತ್ವರಿತವಾಗಿ ನಾಮಕರಣ ಮಾಡಲು ಕಾರಣಕರ್ತರಾದ ಅಂದಿನ ನಗರಾಭಿವೃದ್ಧಿ ಸಚಿವರಾದ  ವೆಂಕಯ್ಯ ನಾಯ್ಡು, ಕೇಂದ್ರ ಸಚಿವರುಗಳಾದ ಅನಂತ ಕುಮಾರ್‌,  ಡಿ. ವಿ. ಸದಾನಂದ ಗೌಡ ಮತ್ತು ಕರ್ನಾಟಕದ ಎಲ್ಲಾ ಸಂಸದರಿಗೆ ದೆಹಲಿ ಕರ್ನಾಟಕ ಸಂಘದ ಪರವಾಗಿ ಕೃತಜ್ಞತೆಯನ್ನು ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ  ಸಿ. ಎಂ. ನಾಗರಾಜ ಅವರು ಎಲ್ಲರಿಗೂ ಸಿಹಿ ತಿಂಡಿ ಹಂಚಿ ಧನ್ಯವಾದ ಅರ್ಪಿಸಿದರು. ಶ್ರೀ  ಮಹಾಗಣಪತಿ ಯಕ್ಷಗಾನ ಮಂಡಳಿಯ ಕಲಾವಿದರಾದ ಲಕ್ಷ್ಮಿà ನಾರಾಯಣ,  ಜಯಪ್ರಕಾಶ್‌ ಪಿ., ಈಶ್ವರಚಂದ್ರ ಮತ್ತು ವಿನಯ ಕೃಷ್ಣ ಕುಡೊÂàಡು ಅವರಿಂದ ಯಕ್ಷಗಾನ ಕಾರ್ಯಕ್ರಮ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next