Advertisement

ಒಂದೇ ಸ್ಟ್ಯಾಂಪ್‌ ಡ್ಯೂಟಿ ಜಾರಿ?

06:00 AM Oct 14, 2018 | |

ಹೊಸದಿಲ್ಲಿ: ಒಂದೇ ತೆರಿಗೆ; ಒಂದೇ ರಾಷ್ಟ್ರ ಎಂಬ ಕಲ್ಪನೆಯೊಂದಿಗೆ ಜಾರಿಗೆ ಬಂದಿರುವ ಜಿಎಸ್‌ಟಿ ಯಶಸ್ಸು ಪಡೆದಿರುವಂತೆಯೇ ಕೇಂದ್ರ ಸರಕಾರ ಮತ್ತೂಂದು ಬದಲಾವಣೆಗೆ ಕೈಹಾಕಿದೆ. 1899ರಲ್ಲಿ ರಚಿತವಾದ ಸ್ಟಾಂಪ್‌ ಡ್ಯೂಟಿ ಕಾಯಿದೆಯನ್ನು ಬದಲಿಸಲು ಕೇಂದ್ರ ಮತ್ತು ರಾಜ್ಯ ಸರಕಾರಗಳು ಚರ್ಚಿಸಿ ಕರಡು ಸಿದ್ಧಪಡಿಸಿವೆ. ಅದನ್ನು ಸಂಸತ್‌ನ ಚಳಿಗಾಲದ ಅಧಿವೇಶನದಲ್ಲಿ ಮಂಡಿಸಲಾಗುತ್ತದೆ ಎಂದು ಮೂಲಗಳನ್ನು ಉಲ್ಲೇಖೀಸಿ ಆಂಗ್ಲ ಪತ್ರಿಕೆ ವರದಿ ಮಾಡಿದೆ.  “ಉದ್ಯಮ ಸ್ನೇಹಿ ಆಡಳಿತ’ಕ್ಕೆ ಅನುಕೂಲವಾಗಲು ಈ ಬದಲಾವಣೆ ಎನ್ನಲಾಗುತ್ತಿದೆ. ವಿವಿಧ ರಾಜ್ಯಗಳಲ್ಲಿ ಬೇರೆ ಬೇರೆ  ಸ್ಟಾಂಪ್‌ ಡ್ಯೂಟಿ ಇದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next