Advertisement

ಕೆರೆ ಒತುವರಿ ತೆರವಿಗೆ ಏಕಾಂಗಿ ಧರಣಿ

03:03 PM Feb 12, 2022 | Team Udayavani |

ಬೇಲೂರು: ತಾಲೂಕಿನ ಬಿಕ್ಕೋಡು ಹೋಬಳಿ ಕೆಸಗೋಡು ಗ್ರಾಪಂ ವ್ಯಾಪ್ತಿಗೆ ಒಳಪಟ್ಟಂಥ ನೂರಾರು ಎಕರೆ ಕೆರೆಗಳಲ್ಲಿ ಹಲವಾರು ಪ್ರಭಾವಿ ವ್ಯಕ್ತಿಗಳು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಒತ್ತುವರಿ ಮಾಡಿದ್ದು, ಅಧಿಕಾರಿಗಳೂ ಒತ್ತುವರಿ ಪ್ರದೇಶವನ್ನು ತೆರವುಗೊಳಿಸುವಂತೆ ಒತ್ತಾಯಿಸಿ ಸಮಾಜ ಸೇವಕ ತೀರ್ಥಪ್ಪ ಏಕಾಂಗಿ ಪ್ರತಿಭಟನೆ ನಡೆಸಿದರು.

Advertisement

ಇಲ್ಲಿನ ತಾಲೂಕು ಕಚೇರಿ ಮುಂಭಾಗ ಒಬ್ಬಂಟಿಯಾಗಿ ಪ್ರತಿಭಟಸಿ ಮಾತನಾಡಿದ ಅವರು ಸರ್ಕಾರಕ್ಕೆ ಸೇರಿದ ಕೆರೆ ಒತ್ತುವರಿ ಮಾಡಿದ್ದರೂ, ಇದುವರೆಗೂ ತಾಲೂಕು ಆಡಳಿತವಾಗಲಿ, ತಾಪಂ ಅಧಿಕಾರಿಗಳಾಗಲಿ, ಶಾಸಕರರಾಗಲಿ ಯಾವುದೇ ಕ್ರಮವನ್ನು ಕೈಗೊಳ್ಳದೆ ನಿರ್ಲಕ್ಷ್ಯ ತೋರಿದ್ದಾರೆ ಎಂದು ದೂರಿದರು.

ಕೆಸಗೋಡು ಗ್ರಾಪಂ ವ್ಯಾಪ್ತಿಯ ಕೆರೆಗಳಲ್ಲಿ ಸುಮಾರು 11.05 ಎಕರೆ ಇದ್ದು 4.5 ಎಕರೆಗೂ ಅಧಿಕ ಜಾಗವನ್ನು ಒತ್ತುವರಿ ಮಾಡಿದ್ದು, ಬದುಗಳನ್ನು ಮಾಡಿಕೊಂಡು ಸುತ್ತ ಕಾಫಿ ಗಿಡಗಳನ್ನು
ನೆಟ್ಟು ತಂತಿ ಬೇಲಿ ನಿರ್ಮಿಸಿಕೊಂಡಿದ್ದಾರೆ. ಇದರ ಪಕ್ಕದಲ್ಲಿ ಇರುವ ಕೆರೆ 6.50 ಎಕರೆ ಇದ್ದು ಅದರಲ್ಲಿ 2.5 ಎಕರೆಯಲ್ಲಿ ಒತ್ತುವರಿ ಮಾಡಿ ವಾಸದ ಮನೆ ನಿರ್ಮಿಸಿಕೊಂಡಿದ್ದರೂ ಯಾವುದೇ
ಅಧಿಕಾರಿಗಳು ಗಮನ ಹರಿಸಿಲ್ಲ ಎಂದು ಆರೋಪಿಸಿದ್ದಾರೆ.

ಹೊಸಹಳ್ಳಿ ಕೆರೆ, ಹಾಗೂ ಹೊಳಲು ಕೆರೆ ವ್ಯಾಪ್ತಿಯ 7 ಎಕರೆ ಜಮೀನಿನಲ್ಲಿ 6 ಎಕರೆ ಜಾಗವನ್ನು ಅಂಕಿಹಳ್ಳಿ ಗ್ರಾಮದ ಸುತ್ತಮುತ್ತಲಿನ ಗ್ರಾಮಸ್ಥರು ಒತ್ತುವರಿ ಮಾಡಿಕೊಂಡು ಕಾಫಿ ಗಿಡಗಳನ್ನು ನೆಟ್ಟಿದ್ದಾರೆ. ಇದನ್ನು ಪ್ರಶ್ನಿಸಲು ಹೋದರೆ ಕೆರೆಗೆ ಸಂಬಂಧಿಸಿದ ದಾಖಲೆಯಿದ್ದರೆ ತೆಗೆದು ಕೊಂಡು ಬನ್ನಿ ಎಂದು ದರ್ಪದಿಂದ ಹೇಳುತ್ತಾರೆ. ಶಾಸಕರಿಗೆ ಹಲವಾರು ಬಾರಿ ಈ ವಿಚಾರವಾಗಿ ಮನವಿ ಪತ್ರ ನೀಡಿದ್ದರೂ ಇಲ್ಲಿಯವರೆಗೂ ಸ್ಪಂದಿಸಿಲ್ಲ. ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.

ಮುಂದಾದರು ಅಧಿಕಾರಿಗಳು ಸರ್ಕಾರಿ ಜಾಗವನ್ನು ಉಳಿಸಲು ಮುಂದಾಗಬೇಕು ಎಂದು ಒತ್ತಾಯಿಸಿದರು.

Advertisement

ಇದನ್ನೂ ಓದಿ : ಕೆಲಸ ಮಾಡಿದ್ರೂ ವೇತನ ನೀಡಿಲ್ಲ : ಪುರಸಭೆ ಮುಂದೆ ಗುತ್ತಿಗೆ ಪೌರಕಾರ್ಮಿಕರ ಪ್ರತಿಭಟನೆ

Advertisement

Udayavani is now on Telegram. Click here to join our channel and stay updated with the latest news.

Next