Advertisement

ಸಂಗೀತೋತ್ಸವದಲ್ಲಿ ಮನತಣಿಸಿದ ಗಾಯನ 

12:30 AM Feb 22, 2019 | Team Udayavani |

ವಾಗ್ದೇವಿ ಸಂಗೀತ ಶಾಲೆ ಪುತ್ತೂರು ಇದರ ಆಶ್ರಯದಲ್ಲಿ “ಸಂಗೀತೋತ್ಸವ-2018′ ಡಿ.25ರ0ದು ಜಾಲೂÕರಿನಲ್ಲಿ ಸಂಪನ್ನಗೊಂಡಿತು. ಬೆಳಗ್ಗಿನಿಂದ ಸಂಗೀತ ವಿದ್ಯಾರ್ಥಿಗಳಿಂದ ಗಾಯನ ಕಾರ್ಯಕ್ರಮ ನಡೆಯಿತು. ಸಂಜೆ ಅಕ್ಷಯ ನಾರಾಯಣ ಕಾಂಚನ ಇವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ ನಡೆಯಿತು. ವಯಲಿನ್‌ನಲ್ಲಿ ವಿ| ಸಿ. ಎನ್‌. ತ್ಯಾಗರಾಜು ಮೈಸೂರು, ಮೃದಂಗದಲ್ಲಿ ವಿ| ಕಾಂಚನ ಎ. ಈಶ್ವರ ಭಟ್‌, ಮೋರ್ಚಿಂಗ್‌ನಲ್ಲಿ ವಿ| ವಿ. ಎಸ್‌. ರಮೇಶ್‌ ಮೈಸೂರು ಸಹಕರಿಸಿದರು.

Advertisement

    ಸಾರಂಗದ ಇಂತಮೋಡಿ ವರ್ಣದೊಂದಿಗೆ ಕಾರ್ಯಕ್ರಮ ಪ್ರಾರಂಭಿಸಿದ ಕಲಾವಿದರು ನಂತರ ನಾಟ ರಾಗದ “ಮಹಾಗಣಪತಿಂ’ ಕೃತಿಯು ಚುಟುಕಾದ ಸ್ವರ ಪ್ರಸ್ತಾರದೊಂದಿಗೆ ಪ್ರಸ್ತುತಗೊಂಡಿತು. “ಬಿಂದುಮಾಲಿನಿ’ಯ “ಎಂತ ಮುಧ್ದೋ’ ಕೃತಿಯ ಪ್ರಸ್ತುತಿ ಹಿತವೆನಿಸಿತು. ಹಿಂದೋಳ ರಾಗದ ಒಳ-ಹೊರಹುಗಳನ್ನು ಎಳೆಯಾಗಿ ಬಿಚ್ಚಿಟ್ಟ ಆಲಾಪನೆ ಹಾಗೂ ಮಾರಮಣನ್‌ ಕೃತಿಯೊಂದಿಗಿನ ಸುಂದರ ಪೋಣಿಕೆಗಳು ಆಪ್ತವಿನಿಸಿತು. ದ್ರುತ ಗತಿಯಲ್ಲಿ ಮೂಡಿಬಂದ “ತೆಲಿಸಿರಾಮ’ ಕೃತಿಯು ಬಡಿದೆಬ್ಬಿಸಿತು. ಅನಂತರ ಶುಭಪಂತುವರಾಳಿಯ ಸವಿಸ್ತಾರವಾದ ಆಲಾಪನೆ, ಅದರೊಳಗಿನ ಬಿರ್ಕಾಗಳು, ಭಾವಪೂರ್ಣವಾದ, ವಜ್ಯìಸ್ವರ ಸಂಚಾರಗಳು ಆ ರಾಗದ ಇನ್ನೊಂದು ಮಗ್ಗುಲನ್ನು ಪರಿಚಯಿಸಿತು. “ಮನೋನ್ಮಣಿ’ ಕೃತಿಯಲ್ಲಿನ ನೆರವಲ್‌, ಸ್ವರಪ್ರಸ್ತಾರಗಳು ಸುಂದರವಾಗಿ ಮೂಡಿಬಂತು. ಉತ್ತಮ ಲಯವಿನ್ಯಾಸದೊಂದಿನ, ಲಯವಾದ್ಯಗಳ ಸಮ್ಮಿಳನವು ಕಛೇರಿಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡುಹೋಯಿತು. ಅನಂತರ “ಗೋವರ್ಧನ ಗಿರಿಧಾರಿ’, “ಬಾರೋ ಕೃಷ್ಣಯ್ಯ’, “ಶ್ರೀ ರಾಮಚಂದ್ರ’ ರಚನೆಗಳು ಮನತಣಿಸಿತು. 

ವಿ| ಶಿಲ್ಪಾ ಸಿ. ಎಚ್‌. 

Advertisement

Udayavani is now on Telegram. Click here to join our channel and stay updated with the latest news.

Next