ದೋಹಾ: ದಕ್ಷಿಣ ಆಫ್ರಿಕಾದಲ್ಲಿ 2010ರಲ್ಲಿ ನಡೆದಿದ್ದ ಫಿಫಾ ವಿಶ್ವಕಪ್ ರಲ್ಲಿ ಪ್ರಸಿದ್ಧವಾಗಿ ವಾಕಾ ವಾಕಾ ಹಾಡನ್ನು ಹಾಡಿದ ಪಾಪ್ ಸ್ಟಾರ್ ಶಕೀರಾ, 2022ರ ವಿಶ್ವಕಪ್ ನಲ್ಲಿ ಶನಿವಾರ ರಾತ್ರಿ ಕ್ರಿಸ್ಟಿಯಾನೋ ರೊನಾಲ್ಡೊ ಅವರ ಪೋರ್ಚುಗಲ್ ವಿರುದ್ಧ ಮೊರಾಕ್ಕೊದ ಅದ್ಭುತ ವಿಜಯವನ್ನು ಸಂಭ್ರಮಿಸಿದರು.
ಪೋರ್ಚುಗಲ್ ವಿರುದ್ಧ ಕ್ವಾರ್ಟರ್ ಫೈನಲ್ ಪಂದ್ಯವನ್ನು ಮೊರಾಕ್ಕೊ ಜಯಿಸುತ್ತಿದ್ದಂತೆ ಟ್ವೀಟ್ ಮಾಡಿದ ಶಕೀರಾ, ‘ದಿಸ್ ಟೈಮ್ ಫಾರ್ ಆಫ್ರಿಕಾ’ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ:ಮತ್ತೆ ಬಂತು ಟ್ವಿಟ್ಟರ್ ಬ್ಲೂ ಚಂದಾದಾರಿಕೆ; ಆ್ಯಪಲ್ ಬಳಕೆದಾರರಿಗೆ ಹೆಚ್ಚಿನ ಬೆಲೆ
ಕ್ರಿಸ್ಟಿಯಾನೊ ರೊನಾಲ್ಡೊ ಅವರ ಬಲಿಷ್ಠ ಪೋರ್ಚುಗಲ್ ದೇಶವನ್ನು 1-0 ಅಂತರದಿಂದ ಸೋಲಿಸಿದ ಮೊರಾಕ್ಕೊ ಫುಟ್ಬಾಲ್ ವಿಶ್ವಕ್ಕೆ ಅಚ್ಚರಿ ನೀಡಿದೆ. ಈ ಮೂಲಕ ಫಿಫಾ ಫುಟ್ಬಾಲ್ ವಿಶ್ವಕಪ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಆಫ್ರಿಕಾದ ತಂಡವೊಂದು ಸೆಮಿ ಫೈನಲ್ ಗೆ ಎಂಟ್ರಿಯಾಗಿದೆ.
ಸೆಮಿ ಫೈನಲ್ ನಲ್ಲಿ ಮೊರಾಕ್ಕೊ ತಂಡವನ್ನು ಫ್ರಾನ್ಸ್ ತಂಡವನ್ನು ಎದುರಿಸಲಿದೆ. ಮತ್ತೊಂದು ಸೆಮಿ ಫೈನಲ್ ನಲ್ಲಿ ಅರ್ಜೆಂಟೀನಾ ಮತ್ತು ಕ್ರೊವೇಷಿಯಾ ನಡುವೆ ನಡೆಯಲಿದೆ.