Advertisement

ಕೋವಿಡ್ 19 ವೈರಸ್: 2ನೇ ಬಾರಿಯೂ ನೆಗೆಟಿವ್ ವರದಿ, ಆಸ್ಪತ್ರೆಯಿಂದ ಕನಿಕಾ ಕಪೂರ್ ಡಿಸ್ಚಾರ್ಜ್

02:06 PM Apr 06, 2020 | Nagendra Trasi |

ನವದೆಹಲಿ:ಕೋವಿಡ್ 19 ವೈರಸ್ ತಗುಲಿ ಭಾರೀ ಸುದ್ದಿಗೆ ಗ್ರಾಸವಾಗಿದ್ದ ಬಾಲಿವುಡ್ ಗಾಯಕಿ ಕನಿಕಾ ಕಪೂರ್ ಆಸ್ಪತ್ರೆಯಲ್ಲಿ ಐಸೋಲೇಶನ್ ಗೆ ಒಳಗಾಗಿದ್ದು ಇದೀಗ ಎರಡನೇ ಬಾರಿ ಪರೀಕ್ಷೆಯಲ್ಲಿ ನೆಗೆಟಿವ್ ಎಂದು ವರದಿ ಬಂದ ಹಿನ್ನೆಲೆಯಲ್ಲಿ ಆಸ್ಪತ್ರೆಯಿಂದ ಡಿಸ್ ಚಾರ್ಜ್ ಆಗಲಿದ್ದಾರೆ ಎಂದು ವರದಿ ತಿಳಿಸಿದೆ.

Advertisement

ಬಾಲಿವುಡ್ ಖ್ಯಾತ ಗಾಯಕಿ ಕನಿಕಾ ಕಪೂರ್ ಕೋವಿಡ್ 19 ವೈರಸ್ ನಿಂದಾಗಿ ಲಕ್ನೋದ ಸಂಜಯ್ ಗಾಂಧಿ ಮೆಡಿಕಲ್ ಸೈನ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಲಂಡನ್ ನಿಂದ ವಾಪಸ್ ಆಗಿದ್ದ ಕನಿಕಾ ದಿಲ್ಲಿಯಲ್ಲಿ ನಡೆದ ಮೂರು ಪಾರ್ಟಿಗಳಲ್ಲಿ ಭಾಗವಹಿಸಿದ್ದು, ಇದರಲ್ಲಿ ಪ್ರತಿಷ್ಠಿತ ರಾಜಕಾರಣಿಗಳು ಗಣ್ಯರು ಭಾಗವಹಿಸಿದ್ದರು.

ಆಸ್ಪತ್ರೆಯಿಂದ ಡಿಸ್ ಚಾರ್ಜ್ ಆದ ನಂತರ ಕನಿಕಾ ಕಪೂರ್ ಮುಂದಿನ 14 ದಿನಗಳ ಕಾಲ ಮನೆಯಲ್ಲಿಯೇ ಕ್ವಾರಂಟೈನ್ ನಲ್ಲಿ ಇರಲು ಸೂಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಪೂರ್ ಮಾರ್ಚ್ 20ರಂದು ಮೊದಲ ಬಾರಿಗೆ ಪರೀಕ್ಷೆಗೆ ಒಳಗಾದ ನಂತರ ಬಂದ ವರದಿಯಲ್ಲಿ ನೆಗಟಿವ್ ಎಂದು ಬಂದಿದ್ದು, ಇದೀಗ 14 ದಿನಗಳ ಬಳಿಕ ಎರಡನೇ ಬಾರಿ ನಡೆಸಿದ ಪರೀಕ್ಷೆಯಲ್ಲಿಯೂ ನೆಗೆಟಿವ್ ಎಂದು ವರದಿ ಬಂದಿರುವುದಾಗಿ ವರದಿ ವಿವರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next