Advertisement
ಸುಶ್ಮಿತಾ ಸಾವಿಗೆ ಆಕೆಯ ಪತಿ ಶರತ್‌ಕುಮಾರ್ ಹಾಗೂ ಕುಟುಂಬದವರೇ ಕಾರಣ ಎಂದು ಸುಶ್ಮಿತಾ ಪೋಷಕರು ಆರೋಪಿಸಿದ್ದಾರೆ. ಈ ಕುರಿತು ಸುಶ್ಮಿತಾ ತಾಯಿ ಮೀನಾಕ್ಷಿ ಅವರು ನೀಡಿರುವ ದೂರಿನ ಅನ್ವಯ, ಶರತ್‌ಕುಮಾರ್, ಆತನ ಸಹೋದರಿ ಗೀತಾ ಎಂಬವರ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಅನ್ನಪೂರ್ಣೇಶ್ವರಿ ಠಾಣೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಆರೋಪಿಗಳು ತಲೆಮರೆಸಿಕೊಂಡಿದ್ದು ಅವರ ಬಂಧನಕ್ಕೆ ಕ್ರಮ ವಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Related Articles
Advertisement
ಮನೆಯಿಂದ ಹೊರ ಹೋಗು ಎಂದು ಬಲವಂತ ಮಾಡುತ್ತಿದ್ದ. ಮಗಳು ಬೇರೆ ಬೇರೆ ಮ್ಯೂಸಿಕ್ ಶಾಲೆಗಳಲ್ಲಿ ಕೆಲಸ ಮಾಡಿ ಹಣ ಸಂಪಾದನೆ ಮಾಡಿಕೊಡುತ್ತಿದ್ದಳು ಎಂದು ಕಣ್ಣೀರಿಟ್ಟರು. ಸುಶ್ಮಿತಾ ಸಹೋದರ ಯಶವಂತ್ ಮಾತನಾಡಿ ರಾತ್ರಿ ಮಲಗುವಾಗ ಬೆಳಗ್ಗೆ 4 ಗಂಟೆಗೆ ಎಬ್ಬಿಸು ಎಂದು ಅಕ್ಕನಿಗೆ ಹೇಳಿ ಹಾಲ್‌ನಲ್ಲಿ ಮಲಗಿದ್ದೆ. ಮಧ್ಯರಾತ್ರಿ 1.30ಕ್ಕೆ ನನ್ನ ಮೊಬೈಲ್‌ಗೆ ಸಂದೇಶ ಕಳುಹಿಸಿದ್ದು ಬೆಳಗ್ಗೆ ನೋಡಿಕೊಂಡಿದ್ದೇನೆ. ಬೆಳಗ್ಗೆ ಅಲಾರಂ ಸದ್ದು ಕೇಳಿ ಎದ್ದು ಆಕೆಯ ರೂಂ ಬಳಿ ಹೋದಾಗ ಆತ್ಮಹತ್ಯೆ ಮಾಡಿಕೊಂಡಿದ್ದಳು. ಈ ವಿಚಾರ ನಮ್ಮ ಭಾವನಿಗೆ ಹೇಳಿದರೂ ಬಂದಿಲ್ಲ, ಆತ ಓಡಿಹೋಗಿರಬಹುದು ಎಂದರು.
ಸುಶ್ಮಿತಾ ಕಳುಹಿಸಿದ ಸಂದೇಶದಲ್ಲಿ ಏನಿತ್ತು?: ಅಮ್ಮ ನನ್ನನ್ನು ಕ್ಷಮಿಸು ನಾನೇ ಮಾಡಿಕೊಂಡ ತಪ್ಪಿಗೆ ನಾನೇ ಶಿಕ್ಷೆ ಅನುಭವಿಸುತ್ತಿದ್ದೇನೆ. ನನ್ನನ್ನು ದಯವಿಟ್ಟು ಕ್ಷಮಿಸು ನನಗೆ ಅವರ ದೊಡ್ಡಮ್ಮನ ಮಾತು ಕೇಳಿಕೊಂಡು ಚಿತ್ರಹಿಂಸೆ ಕೊಡುತ್ತಿದ್ದರು. ಮಾತೆತ್ತಿದರೆ ಮನೆಬಿಟ್ಟು ಹೋಗೆನ್ನುತ್ತಿದ್ದರು. ಮಾನಸಿಕವಾಗಿ ಹಿಂಸೆ ಆಗುತ್ತಿತ್ತು, ಅವರನ್ನು ಮಾತ್ರ ಸುಮ್ಮನೆ ಬಿಡಬೇಡ. ನನ್ನ ಸಾವಿಗೆ ಶರತ್, ವೈದೇಹಿ, ಗೀತಾ ನೇರ ಕಾರಣ. ಎಷ್ಟು ಬೇಡಿಕೊಂಡರು ಕಾಲು ಹಿಡಿದರು ಅವನ ಮನಸು ಕರಗಲಿಲ್ಲ.
ಅವರ ಮನೆಯಲ್ಲಿ ಸಾಯಲು ನನಗೆ ಇಷ್ಟವಿರಲಿಲ್ಲ. ಮದುವೆ ಆದಾಗಿನಿಂದ ಇದೇ ರೀತಿ ಹಿಂಸೆ ಅಮ್ಮಾ.. ಯಾರ ಹತ್ರಾನೂ ಹೇಳಿಕೊಂಡಿರಲಿಲ್ಲ..ನನ್ನನ್ನು ನಮ್ಮ ಊರಿನಲ್ಲಿ ಮಣ್ಣುಮಾಡು ಅಥವಾ ಸುಡು ನನ್ನ ಕಾರ್ಯವನ್ನು ನನ್ನ ತಮ್ಮನೇ ಮಾಡಲಿ. ಅವರನ್ನು ಮಾತ್ರ ಸುಮ್ಮನೇ ಬಿಡಬೇಡ ಇಲ್ಲವಾದರೆ ನನ್ನ ಆತ್ಮಕ್ಕೆ ಶಾಂತಿ ದೊರೆಯುವುದಿಲ್ಲ. ಅಮ್ಮಾ..ಮಿಸ್ ಯೂ.. ನಿನಗೋಸ್ಕರ ನನ್ನ ತಮ್ಮ ಸಚಿನ್ ಇದಾನೆ ಅವನನ್ನು ಚೆನ್ನಾಗಿ ನೋಡಿಕೋ ಮತ್ತೂಮ್ಮೆ ಕ್ಷಮೆಯಾಚಿಸುತ್ತಿದ್ದೇನೆ.