Advertisement

Little Dragons: ಹೆಚ್ಚು ಮಕ್ಕಳನ್ನು ಹೆರಿ… ಸಿಂಗಾಪುರ ದಂಪತಿಗಳಿಗೆ ಪ್ರಧಾನಿ ಲೀ ಮನವಿ

02:39 PM Feb 09, 2024 | Team Udayavani |

ಸಿಂಗಾಪುರ: ಜಗತ್ತಿನ ಜನಸಂಖ್ಯೆ ೮೦೦ ಕೋಟಿ ಮೀರಿದೆ. ಹಲವಾರು ದೇಶಗಳು ಹೆಚ್ಚುತ್ತಿರುವ ಜನಸಂಖ್ಯೆಯ ಬಗ್ಗೆ ಚಿಂತಿತರಾಗಿದ್ದಾರೆ ಆದರೆ ಇಲ್ಲೊಂದು ದೇಶ ಜನಸಂಖ್ಯೆಯನ್ನು ಹೆಚ್ಚಿಸುವ ಅಭಿಯಾನವನ್ನು ನಡೆಸುತ್ತಿದೆ ಅಂತಹ ದೇಶಗಳಲ್ಲಿ ಸಿಂಗಾಪುರ ಕೂಡ ಒಂದು.

Advertisement

ಈ ವರ್ಷ ಹೆಚ್ಚು ಮಕ್ಕಳನ್ನು ಪಡೆಯುವಂತೆ ಸಿಂಗಾಪುರ ಸರ್ಕಾರವು ಕುಟುಂಬಗಳನ್ನು ಒತ್ತಾಯಿಸಿದೆ. ವಾಸ್ತವವಾಗಿ ಈ ವರ್ಷದ ಫೆಬ್ರವರಿ 10 ರಿಂದ ಹೊಸ ವರ್ಷದ ಪ್ರಾರಂಭವಾಗಲಿದೆ. ಚೀನೀ ಮೂಲದ ಅನೇಕ ಕುಟುಂಬಗಳು ಡ್ರ್ಯಾಗನ್ ವರ್ಷದಲ್ಲಿ ಜನಿಸಿದ ಮಕ್ಕಳನ್ನು ಮಂಗಳಕರವೆಂದು ಪರಿಗಣಿಸಿ, ಮಕ್ಕಳನ್ನು ಪಡೆಯುವಂತೆ ಸರ್ಕಾರ ಒತ್ತಾಯಿಸಿದೆ.

ಅದೃಷ್ಟದ ಸಂಕೇತ:
ವಿವಾಹಿತ ದಂಪತಿಗಳು ವರ್ಷದಲ್ಲಿ ಮಕ್ಕಳನ್ನು ಹೊಂದುವಂತೆ ಪ್ರಧಾನಿ ಲೀ ಸೀನ್ ಲೂಂಗ್ ಶುಕ್ರವಾರ ಒತ್ತಾಯಿಸಿದರು. ಅವರಿಗೆ ತಮ್ಮ ಸರ್ಕಾರದ ಬೆಂಬಲದ ಭರವಸೆಯನ್ನೂ ನೀಡಿದರು. ಡ್ರ್ಯಾಗನ್‌ ವರ್ಷ ಎನ್ನುವುದು ಶಕ್ತಿ ಮತ್ತು ಅದೃಷ್ಟದ ಸಂಕೇತವಾಗಿದೆ ಎಂದು ಲಿ ಹೇಳಿದರು.

ಸಿಂಗಾಪುರದಲ್ಲಿ ಚೀನೀ ಹೊಸ ವರ್ಷವನ್ನು ಫೆಬ್ರವರಿ 10-11 ರಂದು ಆಚರಿಸುತ್ತಿದ್ದಾರೆ. ಚೀನೀ ಜಾತಕದ ಪ್ರಕಾರ, ಈ ವರ್ಷವನ್ನು ‘ಡ್ರ್ಯಾಗನ್ ವರ್ಷ’ ಎಂದು ಕರೆಯಲಾಗುತ್ತದೆ. ಚೀನೀ ಪುರಾಣದಲ್ಲಿ ಡ್ರ್ಯಾಗನ್ ಧೈರ್ಯ, ಸೃಜನಶೀಲತೆ ಮತ್ತು ನಾವೀನ್ಯತೆಯನ್ನು ಪ್ರತಿನಿಧಿಸುವ ಶಕ್ತಿಯುತ ಮತ್ತು ಮಂಗಳಕರ ಸಂಕೇತವೆಂದು ಪರಿಗಣಿಸಲಾಗಿದೆ.

ಫೆಬ್ರವರಿ 10 ರಂದು ಪ್ರಧಾನ ಮಂತ್ರಿ ಲೀ ಅವರ ಜನ್ಮದಿನ, ಅದೇ ದಿನ ಡ್ರ್ಯಾಗನ್ ವರ್ಷ ಪ್ರಾರಂಭವಾಗುತ್ತದೆ. ಅವರು 1952 ರಲ್ಲಿ, ಡ್ರ್ಯಾಗನ್ ವರ್ಷದಲ್ಲಿ ಜನಿಸಿದರು. ಇಂತಹ ಪರಿಸ್ಥಿತಿಯಲ್ಲಿ, ‘ಯುವ ದಂಪತಿಗಳು ತಮ್ಮ ಕುಟುಂಬಕ್ಕೆ ‘ಸಣ್ಣ ಮಗುವನ್ನು’ ಸೇರಿಸಲು ಇದು ಉತ್ತಮ ಸಮಯ’ ಎಂದು ಪ್ರಧಾನಿ ಹೇಳಿದರು.

Advertisement

Advertisement

Udayavani is now on Telegram. Click here to join our channel and stay updated with the latest news.

Next