Advertisement

Singapore; ಹೆಚ್ಚಿದ ಕೋವಿಡ್‌: ಮಾಸ್ಕ್ ಕಡ್ಡಾಯಕ್ಕೆ ಮತ್ತೆ ಆದೇಶ

02:01 AM May 19, 2024 | Team Udayavani |

ಸಿಂಗಾಪುರ: ಸಿಂಗಾಪುರದಲ್ಲಿ ಕೋವಿಡ್‌-19ರ ಹಾವಳಿ ಮತ್ತೆ ಶುರುವಾಗಿದೆ. ಮೇ 5 ರಿಂದ 11ರ ವೇಳೆಗೆ 25,900 ಒಮಿಕ್ರಾನ್‌ನ ಉಪತಳಿಗಳಾಗಿರುವ ಕೆಪಿ.1 ಮತ್ತು ಕೆಪಿ.2 ಪ್ರಕರಣಗಳು ದೃಢಪಟ್ಟಿವೆ ಎಂದು ಅಲ್ಲಿನ ಸರಕಾರ ಹೇಳಿದೆ. ಅದರ ಹಿಂದಿನ ವಾರ 13,700 ಹೊಸ ಕೇಸುಗಳು ದೃಢವಾಗಿದ್ದವು. ಹೀಗಾಗಿ ಪರಿಸ್ಥಿತಿ ಸುಧಾರಿಸಲು ಮಾಸ್ಕ್ ಧರಿಸುವು ದನ್ನು ಕಡ್ಡಾಯಗೊಳಿಸಲಾಗಿದೆ.

Advertisement

ಮುಂದಿನ ತಿಂಗಳ ಮಧ್ಯಭಾಗ ಮತ್ತು ಕೊನೆಯ ವಾರದಲ್ಲಿ ಸೋಂಕು ಸಂಖ್ಯೆ ಹೆಚ್ಚಾಗಲಿದೆ ಎಂದು ಅಲ್ಲಿನ ಸರಕಾರ ಎಚ್ಚರಿಕೆ ನೀಡಿದೆ. ಸದ್ಯ ಹೊಸ ಅಲೆ ಆರಂಭಿಕ ಹಂತದಲ್ಲಿದೆ ಎಂದು ಸರಕಾರ ಹೇಳಿಕೊಂಡಿದೆ. ಆಸ್ಪತ್ರೆಗಳಲ್ಲಿ ಅಗತ್ಯ ಶಸ್ತ್ರಚಿಕಿತ್ಸೆಗಳನ್ನು ಮಾತ್ರ ನಡೆಸಲು ಆದೇಶ ನೀಡಿದೆ. ಕೆಪಿ.1 ಮತ್ತು ಕೆಪಿ.2 ರೂಪಾಂತರಿ ಅಮೆರಿಕದಲ್ಲಿ ಈಗಾಗಲೇ ಹೆಚ್ಚಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next