ಮುಂಬಯಿ: ಬಾಲಿವುಡ್ನಲ್ಲಿ (Bollywood) ಈ ವಾರ ಎರಡು ಬಹುನಿರೀಕ್ಷಿತ ಸಿನಿಮಾಗಳು ರಿಲೀಸ್ ಆಗಿದೆ. ದೀಪಾವಳಿ ಹಬ್ಬದ ವೇಳೆ ರಿಲೀಸ್ ಆಗಿರುವ ಈ ಸಿನಿಮಾಗಳು ಬಾಕ್ಸಾಫೀಸ್ ನಲ್ಲೂ ಪಾಸಿಟಿವ್ ಓಪನಿಂಗ್ ಪಡೆದುಕೊಂಡಿದೆ.
ಕಾರ್ತಿಕ್ ಆರ್ಯನ್ (Kartik Aaryan) ಅಭಿನಯದ ʼಭೂಲ್ ಭುಲೈಯಾ 3ʼ(Bhool Bhulaiyaa 3) ಜತೆ ಅಜಯ್ ದೇವಗನ್(Ajay Devgn) ಅವರ ʼಸಿಂಗಂ ಅಗೇನ್ʼ (Singham Again) ರಿಲೀಸ್ ಆಗಿದೆ.
ಎರಡು ಸಿನಿಮಾಗಳಿಗೂ ಪ್ರೇಕ್ಷಕರಿಂದ ಪಾಸಿಟಿವ್ ರೆಸ್ಪಾನ್ಸ್ ವ್ಯಕ್ತವಾಗುತ್ತಿದೆ. ಹಾರಾರ್ ಕಾಮಿಡಿ ಕಥಾಹಂದರದ ಸಿನಿಮಾವಾದರೆ, ಇನ್ನೊಂದು ಕಡೆ ಆ್ಯಕ್ಷನ್ ಸ್ಟೋರಿಯ ಸಿನಿಮಾ ತೆರೆಕಂಡಿದೆ.
ಇದನ್ನೂ ಓದಿ: BBK11: ತಾಯಿಯನ್ನು ನೆನೆದು ಬಿಗ್ ಬಾಸ್ ವೇದಿಕೆಯಲ್ಲೇ ಕಣ್ಣೀರಿಟ್ಟ ಕಿಚ್ಚ ಸುದೀಪ್
ಅನೀಸ್ ಬಾಜ್ಮಿ ನಿರ್ದೇಶನದ ʼಭೂಲ್ ಭುಲೈಯಾ 3ʼ ಮೊದಲ ದಿನವೇ 35.50 ಕೋಟಿ ರೂ. ಗಳಿಸಿದೆ. ಇದು ಕಾರ್ತಿಕ್ ವೃತ್ತಿ ಜೀವನದ ದೊಡ್ಡ ಓಪನಿಂಗ್ ಪಡೆದ ಸಿನಿಮಾವಾಗಿದೆ. ಈ ಹಿಂದೆ ಅವರ ʼಭೂಲ್ ಭುಲೈಯಾ 2ʼ ಮೊದಲ ದಿನ 14.11 ಕೋಟಿ ರೂ.ಗಳಿಸಿತು.
ಕಾರ್ತಿಕ್ ಆರ್ಯನ್, ವಿದ್ಯಾ ಬಾಲನ್ ಮತ್ತು ಮಾಧುರಿ ದೀಕ್ಷಿತ್ , ತೃಪ್ತಿ ದಿಮ್ರಿ ,ರಾಜ್ಪಾಲ್ ಯಾದವ್ ಮುಂತಾದವರು ಸಿನಿಮಾದಲ್ಲಿ ನಟಿಸಿದ್ದಾರೆ.
ಇನ್ನೊಂದು ಕಡೆ ರೋಹಿತ್ ಶೆಟ್ಟಿ (Rohit Shetty) ಕಾಪ್ ಥ್ರಿಲ್ಲರ್ ʼಸಿಂಗಂ ಅಗೇನ್ʼ(Singam Again) ರಿಲೀಸ್ ಆಗಿದೆ. ಮಲ್ಟಿಸ್ಟಾರ್ಸ್ ವುಳ್ಳ ಈ ಸಿನಿಮಾ ನೋಡಲು ಪ್ರೇಕ್ಷಕರು ಹರಿದುಬಂದಿದ್ದಾರೆ. ಹಬ್ಬದ ದಿನದಲ್ಲಿ ಒಂದೊಳ್ಳೆ ಮಾಸ್ ಕಾಪ್ ಸಿನಿಮಾ ತೆರೆಕಂಡಿದೆ ಎಂದು ಸಿನಿಮಾ ನೋಡಿದ ಬಳಿಕ ಪ್ರೇಕ್ಷಕರು ಹೇಳುತ್ತಿದ್ದಾರೆ.
ರಾಮಾಯಣದ ಹಿನ್ನೆಲೆಯನ್ನಿಟ್ಟುಕೊಂಡು ರೋಹಿತ್ ಶೆಟ್ಟಿ ಪೊಲೀಸ್ ಸೈನ್ಯದ ಕಥೆಯನ್ನು ಹಣೆದಿದ್ದಾರೆ. ಜಬರ್ ದಸ್ತ್ ಆ್ಯಕ್ಷನ್ ಸೀನ್ಸ್ ನಲ್ಲಿ ಅಜಯ್ ದೇವಗನ್ ಮಿಂಚಿದ್ದಾರೆ.
ಬಾಕ್ಸ್ ಆಫೀಸ್ನಲ್ಲಿ ʼಸಿಂಗಂ ಅಗೇನ್ʼ ಗೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಮೊದಲ ದಿನ ʼಸಿಂಗಂ ಅಗೇನ್ʼ 43.50 ಕೋಟಿ ರೂ. ಗಳಿಸಿದೆ. ಇದು ಅಜಯ್ ದೇವಗನ್ ತಮ್ಮ ವೃತ್ತಿಜೀವನದಲ್ಲಿ ಅತಿದೊಡ್ಡ ಓಪನಿಂಗ್ ಪಡೆದುಕೊಂಡ ಸಿನಿಮಾವಾಗಿದೆ.
ಸಿನಿಮಾದಲ್ಲಿ ಅಜಯ್ ದೇವಗನ್ ಜತೆ ಕರೀನಾ ಕಪೂರ್, ಟೈಗರ್ ಶ್ರಾಫ್, ದೀಪಿಕಾ ಪಡುಕೋಣೆ, ಅರ್ಜುನ್ ಕಪೂರ್, ಅಕ್ಷಯ್ ಕುಮಾರ್, ರಣ್ವೀರ್ ಸಿಂಗ್ ಮುಂತಾದವರು ನಟಿಸಿದ್ದಾರೆ.