Advertisement

PV Sindhu: ಮಲೇಷ್ಯಾ ಬ್ಯಾಡ್ಮಿಂಟನ್‌; ಸಿಂಧು-ವಾಂಗ್‌ ನಡುವೆ ಇಂದು ಫೈನಲ್‌

10:43 PM May 25, 2024 | Team Udayavani |

ಕೌಲಾಲಂಪುರ: ಪ್ರಶಸ್ತಿ ಬರಗಾಲವನ್ನು ನೀಗಿಸುವ ಉತ್ತಮ ಅವಕಾಶವೊಂದು ಪಿ.ವಿ.ಸಿಂಧು ಅವರಿಗೆ ಎದುರಾಗಿದೆ. ಅವರು “ಮಲೇಷ್ಯಾ ಮಾಸ್ಟರ್ ಸೂಪರ್‌ 500′ ಬ್ಯಾಡ್ಮಿಂಟನ್‌ ಪಂದ್ಯಾವಳಿಯ ಫೈನಲ್‌ಗೆ ಲಗ್ಗೆ ಇರಿಸಿದ್ದು, ಪ್ರಶಸ್ತಿಯಿಂದ ಒಂದೇ ಮೆಟ್ಟಿಲು ದೂರವಿದ್ದಾರೆ.

Advertisement

ಭಾನುವಾರದ ಫೈನಲ್‌ನಲ್ಲಿ ಚೀನಾದ ದ್ವಿತೀಯ ಶ್ರೇಯಾಂಕದ ಹಾಗೂ 7ನೇ ರ್‍ಯಾಂಕ್‌ನ ವಾಂಗ್‌ ಝಿ ಯಿ ಅವರನ್ನು ಸಿಂಧು ಎದುರಿಸಲಿದ್ದಾರೆ. ಇವರೆದುರು ಆಡಿರುವ 3 ಪಂದ್ಯಗಳಲ್ಲಿ ಸಿಂಧು ಎರಡನ್ನು ಗೆದ್ದಿದ್ದಾರೆ.

5ನೇ ಶ್ರೇಯಾಂಕದ, 15ನೇ ರ್‍ಯಾಂಕ್‌ನ ಸಿಂಧು ಶನಿವಾರ ನಡೆದ ಮ್ಯಾರಥಾನ್‌ ಸೆಮಿಫೈನಲ್‌ ಸೆಣಸಾಟದಲ್ಲಿ ಥಾಯ್ಲೆಂಡ್‌ನ‌ 20ನೇ ರ್‍ಯಾಂಕ್‌ ಆಟಗಾರ್ತಿ ಬುಸಾನನ್‌ ಒನಗ್ಗ ಬಾಮ್ರುಂಗ್ಹಾನ್‌ ವಿರುದ್ಧ ಮೊದಲ ಗೇಮ್‌ ಕಳೆದುಕೊಂಡೂ ಜಯ ಸಾಧಿಸಿದರು. ಅಂತರ 13-21, 21-16, 21-12. ಈ ಪಂದ್ಯ 88 ನಿಮಿಷಗಳ ತನಕ ಸಾಗಿತು. ಇದು ಬುಸಾನನ್‌ ವಿರುದ್ಧ ಆಡಿದ 19 ಪಂದ್ಯಗಳಲ್ಲಿ ಸಿಂಧು ಸಾಧಿಸಿದ 18ನೇ ಗೆಲುವು. ಏಕೈಕ ಸೋಲು 2019ರ ಹಾಂಕಾಂಗ್‌ ಓಪನ್‌ನಲ್ಲಿ ಎದುರಾಗಿತ್ತು.

2022ರ ಸಿಂಗಾಪುರ್‌ ಓಪನ್‌ ಪ್ರಶಸ್ತಿ ಗೆದ್ದ ಬಳಿಕ ಸಿಂಧು ಯಾವುದೇ ಬ್ಯಾಡ್ಮಿಂಟನ್‌ ಸೂಪರ್‌ ಪಂದ್ಯಾವಳಿಗಳಲ್ಲಿ ಚಾಂಪಿಯನ್‌ ಆಗಿಲ್ಲ. ಕಳೆದ ವರ್ಷ ಮ್ಯಾಡ್ರಿಡ್‌ ಸ್ಪೇನ್‌ ಮಾಸ್ಟರ್ ಕೂಟದ ಫೈನಲ್‌ ಪ್ರವೇಶಿಸಿದರೂ ರನ್ನರ್ ಅಪ್‌ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು.

Advertisement

Udayavani is now on Telegram. Click here to join our channel and stay updated with the latest news.

Next