Advertisement

Instagram: ಸಿಂಧು-ನೀರಜ್‌ ಇನ್‌ಸ್ಟಾ ಪೋಸ್ಟ್‌  ರಹಸ್ಯ!

11:01 PM Feb 06, 2024 | Team Udayavani |

ಹೊಸದಿಲ್ಲಿ: ಒಲಿಂಪಿಯನ್‌ ಪದಕ ವಿಜೇತ ಕ್ರೀಡಾಪಟುಗಳಾದ ನೀರಜ್‌ ಚೋಪ್ರಾ ಮತ್ತು ಪಿ.ವಿ. ಸಿಂಧು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಅಪ್‌ಲೋಡ್‌ ಮಾಡಿರುವ ಪೋಸ್ಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದೆ.

Advertisement

ಜಾವೆಲಿನ್‌ ಎಸೆತಗಾರ ನೀರಜ್‌ ಚೋಪ್ರಾ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಬ್ಯಾಡ್ಮಿಂಟನ್‌ ಬ್ಯಾಟ್‌ ಮತ್ತು ಕಾಕ್‌ನ ಫೋಟೋ ಹಂಚಿಕೊಂಡು, “ಇದರರ್ಥವೇನು ಊಹೆ ಮಾಡುವಿರಾ’ ಎಂದು ಪ್ರಶ್ನಿಸಿದ್ಧಾರೆ. ಜತೆಗೆ ಈ ಪೋಸ್ಟ್‌ ಅನ್ನು ಪಿ.ವಿ. ಸಿಂಧು ಅವರಿಗೆ ಟ್ಯಾಗ್‌ ಮಾಡಿದ್ಧಾರೆ.

ಇದೇ ವೇಳೆ ಬ್ಯಾಡ್ಮಿಂಟನ್‌ ಆಟಗಾರ್ತಿ ಪಿ.ವಿ. ಸಿಂಧು ಕೂಡ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಜಾವೆಲಿನ್‌ ಫೋಟೋ ಹಂಚಿಕೊಂಡು, “ಅರೇ ಇದು ಹೇಗೆ ನನ್ನ ಬಳಿ ಬಂತು? ಊಹೆ ಮಾಡ್ತೀರಾ’ ಎಂದು ಬರೆದುಕೊಂಡಿದ್ಧಾರೆ. ಜತೆಗೆ ನೀರಜ್‌ ಚೋಪ್ರಾ ಅವರಿಗೆ ಈ ಪೋಸ್ಟ್‌ ಅನ್ನು ಟ್ಯಾಗ್‌ ಮಾಡಿದ್ದಾರೆ.

ಅಚ್ಚರಿಯೆಂದರೆ ಇಬ್ಬರು ಕೂಡ ಒಂದೇ ಸಮಯಕ್ಕೆ ಈ ಪೋಸ್ಟ್‌ ಮಾಡಿದ್ಧಾರೆ. “ಇವರಿಬ್ಬರ ನಡುವೆ ಪ್ರೇಮಾಂಕುರ ವಾಗಿದ್ದು, ಶೀಘ್ರದಲ್ಲೇ ವಿವಾಹವಾಗಲಿದ್ದಾರೆ” ಎಂದು ಹಲವು ನೆಟ್ಟಿಗರು ಇವರ ಪೋಸ್ಟ್‌ಗೆ ಕಮೆಂಟ್‌ ಮಾಡಿದ್ಧಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next