Advertisement

ಖಿನ್ನತೆ ಎಂದವರಿಗೆ ಸಿಂಧೂ ಖಡಕ್ ಉತ್ತರ

04:23 AM Jul 05, 2020 | Lakshmi GovindaRaj |

ನಟಿ ಸಿಂಧೂ ಲೋಕನಾಥ್ ಇತ್ತೀಚೆಗೆ ಬಾಯ್ ಹೇರ್ ಕಟ್ ಮಾಡಿಸಿಕೊಂಡು ಫೇಸ್ ಬುಕ್ ನಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದರು. ಜತೆಗೆ ಕೆಲ ಭಾವನಾತ್ಮಕ ಸಾಲುಗಳನ್ನು ಸಹ ಬರೆದುಕೊಂಡಿದ್ದರು. ಆದರೆ ಇದನ್ನ ನೋಡಿದ ಕೆಲವರು ನಟಿ ಸಿಂಧು ಖಿನ್ನತೆಯಿಂದ ಬಳಲುತ್ತಿದ್ದಾರೆ ಎಂದು ಕೆಲವರು ಸೋಶಿಯಲ್ ಮೀಡಿಯಾಗಳಲ್ಲಿ ಸುದ್ದಿ ಹಬ್ಬಿಸಿದ್ದರು.

Advertisement

ಆದರೆ ಈಗ ಇದೆಲ್ಲದಕ್ಕೂ ಸಿಂಧೂ ಖಡಕ್ ಆಗಿ ಉತ್ತರಿಸಿದ್ದಾರೆ. ನಾನು ಹುಡುಗರ ಸ್ಟೈಲ್ ನಲ್ಲಿ ಹೇರ್ ಕಟ್ ಮಾಡಿಸಿದ್ದೇನೆ, ಖಿನ್ನತೆಯಿಂದಲ್ಲ ಎಂದು ನಟಿ ಸಿಂಧು ಲೋಕನಾಥ್ ಹೇಳಿದ್ದಾರೆ. ತಲೆ ಕೂದಲು ಕತ್ತರಿಸಿದ್ದೇನೆ ಎಂದ ಮಾತ್ರಕ್ಕೆ ಅನಾರೋಗ್ಯಕ್ಕೆ ಈಡಾಗಿದ್ದೇನೆ ಎಂದಲ್ಲ, ಖಿನ್ನತೆಗೆ ಒಳಗಾಗಿದ್ದೇನೆ ಎಂದಲ್ಲ, ಲಿಂಗ ತಾರತಮ್ಯ ಮಾಡಿದ್ದೇನೆ ಎಂದಲ್ಲ. ನನ್ನ ಕೂದಲು ಮುಂಚೆಗಿಂತಲೂ ತುಂಬ ಚೆನ್ನಾಗಿ ಬೆಳೆಯಬಲ್ಲದು.

ನನ್ನ ಹಿಂದಿನ ಪೋಸ್ಟ್ ಅನ್ನು ಹತ್ತು ಬಾರಿ ಚೆನ್ನಾಗಿ ಓದಿಕೊಳ್ಳಿ. ಇನ್ನೊಬ್ಬರ ವೈಯುಕ್ತಿಕ ಜೀವನದಲ್ಲಿ ತಲೆ ಹಾಕಬೇಡಿ. ಸುಳ್ಳು ಸುದ್ದಿ ಹಬ್ಬಿಸಬೇಡಿ. ಸುಳ್ಳು ಸುದ್ದಿ ನಂಬಿ ನನ್ನ ಆರೋಗ್ಯ ವಿಚಾರಿಸಿದವರಿಗೆ ನನ್ನ ಧನ್ಯವಾದ. ನಾನು ಆರೋಗ್ಯವಾಗಿದ್ದೇನೆ ಎಂದು ಸಿಂಧೂ ತಿರುಗೇಟು ನೀಡಿದ್ದಾರೆ. ಒಟ್ಟಾರೆ ಸಿಂಧೂ ನೀಡಿರುವ ಸ್ಪಷ್ಟತೆಯಿಂದ ಅವರ ಬಗ್ಗೆ ಹರಿದಾಡುತ್ತಿದ್ದ ಒಂದಷ್ಟು ಅಂತೆಕಂತೆಗಳಿಗೆ ತೆರೆ ಬಿದ್ದಿದೆ.

Advertisement

Udayavani is now on Telegram. Click here to join our channel and stay updated with the latest news.

Next