Advertisement

18ರಿಂದ ಸೋಮನಾಥ ಶ್ರೀ ದ್ವಾದಶ ಗುರು ಪಟ್ಟಾಧಿಕಾರ ಮಹೋತ್ಸವ

10:59 AM Jul 11, 2019 | Naveen |

ಸಿಂಧನೂರು: ನಗರದ ರಂಭಾಪುರಿ ಶಾಖಾಮಠದ ಪೀಠಾಧಿಪತಿ ಶ್ರೀ ಸೋಮನಾಥ ಶಿವಾಚಾರ್ಯರ 12ನೇ ವರ್ಷದ ದ್ವಾದಶ ಗುರು ಪಟ್ಟಾಧಿಕಾರ ಮಹೋತ್ಸವ ಸಮಾರಂಭ ಜು.18, 19ರಂದು ಹಮ್ಮಿಕೊಳ್ಳಲಾಗಿದೆ. ರಂಭಾಪುರಿ ಶ್ರೀಗಳ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿವೆ ಎಂದು ಪಂಪಯ್ಯಸ್ವಾಮಿ ಸಾಲಿಮಠ ಹೇಳಿದರು

Advertisement

ನಗರದ ರಂಭಾಪುರಿ ಶಾಖಾ ಮಠದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರಳ, ಸಜ್ಜನಿಕೆಯ ವ್ಯಕ್ತಿತ್ವ ಹೊಂದಿರುವ ಶ್ರೀ ಸೋಮನಾಥ ಶಿವಾಚಾರ್ಯರು ಮಠದ ಪೀಠಾಧಿಪತಿಗಳಾಗಿ 12 ವರ್ಷವಾಯಿತು. ಈ ಹಿನ್ನೆಲೆಯಲ್ಲಿ ಭಕ್ತಾದಿಗಳಿಂದ ದ್ವಾದಶ ಗುರು ಪಟ್ಟಾಧಿಕಾರ ಮಹೋತ್ಸವ ಹಮ್ಮಿಕೊಳ್ಳಲಾಗಿದೆ. 12 ವರ್ಷದ ಹಿಂದೆ ಜಾಲಿ ಮರವಾಗಿದ್ದ ಈ ನಗರ ಒಂದು ಶಕ್ತಿ ಕೇಂದ್ರವಾಗಿ, ದೊಡ್ಡ ಮರವಾಗಿ ರೇಣುಕಾಚಾರ್ಯರ ಮಂಟಪ ಬೆಳೆದಿದೆ. ಅನೇಕರಿಗೆ ಶಿಕ್ಷ‌ಣ ನೀಡುವ ಕೆಲಸವೂ ಮಠದಿಂದ ಆಗುತ್ತಿದೆ. ಸಾರ್ವಜನಿಕರು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಮಾರಂಭ ಯಶಸ್ವಿಗೊಳಿಸಬೇಕು ಎಂದರು.

ಶಾಖಾ ಮಠದ ಪೀಠಾಧಿಪತಿ ಶ್ರೀ ಸೋಮನಾಥ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ರಂಭಾಪುರಿ ಜಗದ್ಗುರುಗಳ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ. ನನ್ನ ಹನ್ನೆರಡು ವರ್ಷದ ಕಾರ್ಯ ತೃಪ್ತಿ ತಂದಿದೆ. ಮುಂದೆಯೂ ಸಮಾಜ ಸೇವೆ ಹಾಗೂ ವೀರಶೈವ ಧರ್ಮ ಪರಂಪರೆ ಬೆಳೆಸು ಭಕ್ತರು ಸಹಕರಿಸಬೇಕು ಎಂದರು.

ಜು.18, 19ರಂದು ನಡೆಯಲಿರುವ ದ್ವಾದಶ ಪಟ್ಟಾಧಿಕಾರ ಮಹೋತ್ಸವ ನಿಮಿತ್ತ ಜು.11ರಿಂದ ಶ್ರೀಮಠದ ಆವರಣದಲ್ಲಿ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪ್ರಮುಖವಾಗಿ ಗಿಡ ಮರಗಳನ್ನು ಬೆಳೆಸುವ ಬಗ್ಗೆ ಜಾಗೃತಿ ಮೂಡಿಸಲಾಗುವುದು. ನಗರದ ವಿವಿಧ ವಾರ್ಡ್‌ಗಳಲ್ಲಿ ಸಭೆ ನಡೆಸಿ ಪರಿಸರ ಜಾಗೃತಿ ಹಾಗೂ ದುಶ್ಚಟಗಳಿಂದ ಆಗುವ ದುಷ್ಪರಿಣಾಮ ಕುರಿತು ಅರಿವು ಮೂಡಿಸಲಾಗುವುದು. ದುಶ್ಚಟಗಳನ್ನು ನಮ್ಮ ಜೋಳಿಗೆಗೆ ಹಾಕಿಸಿಕೊಳ್ಳುವ ಕಾರ್ಯಕ್ರಮ ನಡೆಯುತ್ತದೆ. ನಾಡಿನ ಮಠಾಧೀಶರು ಹಾಗೂ ವಿವಿಧ ರಾಜಕೀಯ ಗಣ್ಯ ವ್ಯಕ್ತಿಗಳು ಭಾಗವಹಿಸಲಿದ್ದಾರೆ. 12ಕ್ಕೂ ಹೆಚ್ಚು ಸಾಧಕರಿಗೆ ಸನ್ಮಾನ ಸಮಾರಂಭ, ಜಂಗಮ ವಟುಗಳಿಗೆ ಅಯ್ನಾಚಾರ, ಸುಮಂಗಲೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಲಿದೆ ಎಂದು ವಿವರಿಸಿದರು. ಅಮರಗುಂಡಯ್ಯ ಸ್ವಾಮೀಜಿ ತುರ್ವಿಹಾಳ, ಅಮರಯ್ಯಸ್ವಾಮಿ ಅಲಬನೂರು, ಕಂಟೆಪ್ಪ ಮೆಟಗೇರಿ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next