Advertisement

ಕುಡಿಯುವ ನೀರಿಗಾಗಿ ಜನರ ತತ್ವಾರ

11:51 AM Mar 09, 2020 | |

ಸಿಂಧನೂರು: ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಅಳವಡಿಸಲಾಗಿರುವ ಶುದ್ಧ ಕುಡಿಯುವ ನೀರಿನ ಘಟಕಗಳು ಸರಿಯಾಗಿ ನಿರ್ವಹಣೆ ಇಲ್ಲದೆ ಸಮಸ್ಯೆಗಳಿಗೆ ಕಾರಣವಾಗಿವೆ.

Advertisement

2014ರಲ್ಲಿ ವಿವಿಧ ಏಜೆನ್ಸಿ ಮೂಲಕ ಗ್ರಾಮಗಳಲ್ಲಿ ಸರಕಾರದಿಂದ ಸ್ಥಾಪಿಸಲಾಗಿರುವ ಶುದ್ಧ ನೀರಿನ ಘಟಕಗಳು ಬರೀ ನೆಪಕ್ಕೆ ಎನ್ನುವಂತಾಗಿದೆ. ಕಾಣಬಹುದಾಗಿದೆ. ಇನ್ನೂ ಕೆಲ ಗ್ರಾಮಗಳಲ್ಲಿ ಕ್ಲೋರೈಡ್‌, ಪ್ಲೋರೈಡ್‌ ಅಂಶವುಳ್ಳ ನೀರು ಸೇವಿಸುತ್ತಿರುವುದು ಕಂಡು ಬರುತ್ತಿದೆ. ಇದರಿಂದ ಕೆಲ ಗ್ರಾಮನಗಳಲ್ಲಿ ವಿದ್ಯಾರ್ಥಿಗಳು ಸೇರಿದಂತೆ ವೃದ್ಧರಿಗೆ ಮೈ ಕೈ ನೋವು, ತಲೆ ನೋವುಗಳು ಕಾಣಿಸಿಕೊಳ್ಳುತ್ತಿದೆ. ತಾಲೂಕಿನಲ್ಲಿ ಒಟ್ಟು 170 ಗ್ರಾಮಗಳಲ್ಲಿ 136 ಆರ್‌ಒ ಪ್ಲಾಂಟ್‌ ನಿರ್ಮಿಸಲಾಗಿದೆ. ಇದರಲ್ಲಿ 101 ಆರ್‌ಒ ಪ್ಲಾಂಟ್‌ ಚಾಲ್ತಿಯಲ್ಲಿವೆ. 26 ಘಟಕಗಳು ದುರಸ್ತಿಯಲ್ಲಿವೆ. ಜಿಪಂ ಖಾಸಗಿ ಕಂಪನಿಗಳಿಗೆ ನಿರ್ವಹಣೆಗೆ ನೀಡಿದೆ.

ಕಳೆದ 5-6 ವರ್ಷಗಳಿಂದ ನಾಲ್ಕೈದು ಕಂಪನಿಗಳು ಬದಲಾವಣೆಯಾದರೂ ಗ್ರಾಮಗಳಲ್ಲಿ ಆರ್‌ಒ ಪ್ಲಾಂಟ್‌ಗಳು ಮಾತ್ರ ದುರಸ್ತಿಯಲ್ಲಿರುವುದನ್ನು ಕಾಣಬಹುದಾಗಿದೆ. ಈಗ ಎಂ.ಎಸ್‌. ಸ್ಟೇಟ್‌ಪಿಕ್‌ ಕಂಪನಿ ನಿರ್ವಹಣೆ ಜವಾಬ್ದಾರಿ ವಹಿಸಿಕೊಂಡಿದೆ. ಕಳೆದ ವರ್ಷದಿಂದ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಟೆಂಡರ್‌ ಕರೆದರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈಗಾಗಲೇ ಇರುವ ಆರ್‌ಒ ಪ್ಲಾಂಟ್‌ ಗಳಿಗೆ ತಲಾ 10ಲಕ್ಷ ರೂ. ವೆಚ್ಚ ಮಾಡಲಾಗಿದೆ. ಇನ್ನೂ ಮುಖ್ಯವಾದ ಗ್ರಾಮಗಳಾದ ಹಟ್ಟಿ, ಲಕ್ಷ್ಮೀಕ್ಯಾಂಪ್‌, ಸಾಸಲಮರಿಕ್ಯಾಂಪ್‌, ಮಲ್ಕಾಪುರ, ಅಂಬಾಮಠ ಸೇರಿದಂತೆ ಇತರ ಗ್ರಾಮಿಣ ಪ್ರದೇಶಗಳಲ್ಲಿ ಆರ್‌ಒ ಪ್ಲಾಂಟ್‌ಗಳನ್ನು ನಿರ್ಮಿಸುವಂತೆ ಗ್ರಾಮಸ್ಥರ ಬೇಡಿಕೆ ಇದ್ದರೂ ಅಧಿಕಾರಿಗಳು ಮಾತ್ರ ತಲೆ ಕೆಡಿಸಿಕೊಳ್ಳದೆ ಮೌನವಾಗಿದ್ದಾರೆ. ಇನ್ನು ಶಾಸಕ ವೆಂಕಟರಾವ್‌ ನಾಡಗೌಡ ಅವರ ಸ್ವಗ್ರಾಮ ಜವಳಗೇರಾ ಹಾಗೂ ಸಾಲಗುಂದದಲ್ಲಿ ಹೆಚ್ಚುವರಿಯಾಗಿ ಆರ್‌ಒ ಪ್ಲಾಂಟ್‌ ನೀಡುವಂತೆ ಜನರು ಒತ್ತಾಯಿಸಿದ್ದರೂ ಯಾವುದೆ ಪ್ರಯೋಜನವಾಗಿಲ್ಲ. ಜಿಪಂ 16 ಗ್ರಾಪಂಗಳಿಗೆ ಮಾತ್ರ ಆರ್‌ಒ ಪ್ಲಾಂಟ್‌ ನಿರ್ವಹಣೆ ಜವಾಬ್ದಾರಿ ವಹಿಸಿದೆ. ಇನ್ನುಳಿದ ಆರ್‌ಒ ಪ್ಲಾಂಟ್‌ಗಳನ್ನು ಗ್ರಾಪಂಗೆ ವಹಿಸದೆ ಇರುವುದು ಸಮಸ್ಯೆಯಾಗಿದೆ ಎಂದು ತಿಳಿದು ಬಂದಿದೆ.

7ಮೈಲ್‌ ಕ್ಯಾಂಪ್‌, ತುರ್ವಿಕಟ್ಟಿ ಕ್ಯಾಂಪ್‌, ಕೆ. ಹೊಸಳ್ಳಿ, ತಿಮ್ಮಾಪುರ ಸೇರಿದಂತೆ ಇತರ ಗ್ರಾಮೀಣ ಪ್ರದೇಶಗಳಲ್ಲಿ ನಿರ್ಮಿಸಲಾದ ಆರ್‌ಒ ಪ್ಲಾಂಟ್‌ಗಳು ಸ್ಥಗಿತಗೊಂಡಿವೆ. ಬೇಸಿಗೆ ಆರಂಭಕ್ಕೂ ಮುಂಚೆ ಕುಡಿಯುವ ನೀರಿನ ಬಗ್ಗೆ ಸಂಬಂಧಿಸಿದ ಇಲಾಖೆ ಹಾಗೂ ಪಿಡಿಒಗಳೊಂದಿಗೆ ಶಾಸಕರಾಗಲಿ ಅಥವಾ ತಾಲೂಕು ಮಟ್ಟದ ಅಧಿಕಾರಿಗಳಾಗಲಿ ಚರ್ಚಿಸಿಲ್ಲ. ಹಾಗಾಗಿ ಜನರು ಶುದ್ಧ ಕುಡಿಯುವ ನೀರಿನಿಂದ ವಂಚಿತವಾಗುವಂತಾಗಿದೆ.

Advertisement

ಈಗಾಗಲೇ ಬೇಸಿಗೆ ಪ್ರಾರಂಭವಾಗಿದೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕುಡಿಯುವ ನೀರಿನ ಘಟಕಗಳ ಬಗ್ಗೆ ಕಾಳಜಿ ವಹಿಸಿ ಗ್ರಾಮೀಣ ಜನರ ಆರೋಗ್ಯದ ಬಗ್ಗೆ ನಿಗಾ ವಹಿಸುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಆರ್‌ಒ ಪ್ಲಾಂಟ್‌ಗಳು ಆರಂಭವಾದ ಕಾರ್ಯನಿರ್ವಾಹಕ ಅಧಿಕಾರಿ ಸಿಂಧನೂರು ದಿನದಿಂದ ಇಲ್ಲಿಯವರೆಗೂ ಕೆ.ಹೊಸಳ್ಳಿ ಹಾಗೂ 7ಮೈಲ್‌ ಕ್ಯಾಂಪ್‌ ಜನರು ಶುದ್ಧ ಕುಡಿಯುವ ನೀರನ್ನೆ ಕಂಡಿಲ್ಲ. ಅಧಿಕಾರಿಗಳ ಬೇಜವ್ದಾರಿಯಿಂದಾಗಿ ಈ ಕಾರ್ಯ ವಿಫಲವಾಗಿದೆ.
ರವಿಗೌಡ ಮಲ್ಲದಗುಡ್ಡ,
ರೈತ ಯುವ ಮುಖಂಡ

ಈಗಾಗಲೇ ಟೆಂಡರ್‌ ಕರೆದರೂ ಯಾರು ಬರುತ್ತಿಲ್ಲ. ಕೆಲವು ಕಡೆ ನೀರಿನ ಘಟಕಗಳು
ಕಾರ್ಯನಿರ್ವಹಿಸದೇ ಬಂದ್‌ ಆಗಿವೆ. ಈಗಾಗಲೇ 16 ಆರ್‌ಒ ಪ್ಲಾಂಟ್‌ಗಳನ್ನು ಆಯಾ ಗ್ರಾಪಂಗಳಿಗೆ ನೀಡಲಾಗಿದೆ ಶೀಘ್ರದಲ್ಲೆ ಎಲ್ಲ ಕೆಲಸ ಮುಗಿಸುತ್ತೇವೆ.
ಶ್ರೀನಿವಾಸ,
ಎಇಇ ಸಿಂಧನೂರು

ಇನ್ನೂ ಕೆಲವು ಕಡೆ ಆರ್‌ಒ ಪ್ಲಾಂಟ್‌ಗಳು ಬೇಕು ಎಂಬುದು ಗ್ರಾಮಸ್ಥರ ಒತ್ತಾಯವಿದೆ. ಈಗಾಗಲೇ ಇರುವ ಆರ್‌ಒ ಪ್ಲಾಂಟ್‌ ಗಳಲ್ಲಿ ಸಮಸ್ಯೆವಿದೆ. ಯಾವುದೇ ರೀತಿಯಲ್ಲಿ ಸಾರ್ವಜನಿಕರಿಗೆ ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಜವಾಬ್ದಾರಿಯನ್ನು ಇಲಾಖೆಯಿಂದ ನೋಡಿಕೊಳ್ಳಲಾಗುತ್ತದೆ.
ಬಾಬು ರಾಠೊಡ, ತಾಪಂ
ಕಾರ್ಯನಿರ್ವಾಹಕ ಅಧಿಕಾರಿ ಸಿಂಧನೂರು

ಚಂದ್ರಶೇಖರ್‌ ಯರದಿಹಾಳ

Advertisement

Udayavani is now on Telegram. Click here to join our channel and stay updated with the latest news.

Next