Advertisement

ರಾಸಲೀಲೆ ವಿಡಿಯೋ ವೈರಲ್; ತಲೆ ಮರೆಸಿಕೊಂಡ ಸಿಂಧನೂರಿನ ಶಿಕ್ಷಕ

02:16 PM Jul 02, 2022 | Team Udayavani |

ಸಿಂಧನೂರು: ತಾಲೂಕಿನ ಸಿಂಗಾಪುರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರೊಬ್ಬರು ನಡೆಸಿರುವ ರಾಸಲೀಲೆಯ ವಿಡಿಯೋ ವೈರಲ್ ಆಗಿದ್ದು, ಶಿಕ್ಷಕ ತಲೆಮರೆಸಿಕೊಂಡಿದ್ದಾನೆ.

Advertisement

ಮಹ್ಮದ್ ಹಜರುದ್ದೀನ್ ಎನ್ನುವ ಶಿಕ್ಷಕ‌ ಮಹಿಳೆಯೊಂದಿಗೆ ರಾಸಲೀಲೆ ನಡೆಸಿ, ತಾನೇ ವಿಡಿಯೋ‌ ಮಾಡಿಕೊಂಡಿದ್ದಾನೆ. ಎರಡು ದಿನದ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ‌ ಹರಿದಾಡುತ್ತಿದ್ದಂತೆ ಶಿಕ್ಷಕ ತಲೆಮರೆಸಿಕೊಂಡಿದ್ದಾನೆ. ಸಿಂಗಾಪುರದಲ್ಲಿ ಕೆಲಸ ಮಾಡುತ್ತಿದ್ದ ಶಿಕ್ಷಕ, ಕೊಪ್ಪಳ ಜಿಲ್ಲೆಯ ಕಾರಟಗಿ ಪಟ್ಟಣದಲ್ಲಿ ಮನೆ ಮಾಡಿಕೊಂಡಿದ್ದ. ಅಲ್ಲಿಯೇ ಟ್ಯೂಷನ್ ಕೂಡ ನಡೆಸುತ್ತಿದ್ದ. ಗೃಹಿಣಿಯೊಬ್ಬರನ್ನು‌ ಕಾರಟಗಿಯ ತನ್ನ ನಿವಾಸಕ್ಕೆ ಕರೆಯಿಸಿಕೊಂಡು ಅನೈತಿಕ ಚಟುವಟಿಕೆ ನಡೆಸಿದ್ದಾನೆ. ಟ್ಯೂಷನ್ ಗೆ ಬರುವ ಮಕ್ಕಳಿಗೂ ಕಿರುಕುಳ ನೀಡುತ್ತಿದ್ದ ಆರೋಪ ಕೇಳಿಬಂದಿದೆ.

ಇಂತಹ ಶಿಕ್ಷಕನನ್ನು ಕರ್ತವ್ಯದಿಂದ ಬಿಡುಗಡೆ ಮಾಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಬಿಇಒ ಹಾಗೂ ಡಿಡಿಪಿಐ ಅವರಿಗೂ ದೂರು ಸಲ್ಲಿಕೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next