Advertisement

ಜಾಗ ಒತ್ತುವರಿ ವಿರೋಧಿಸಿ ಪ್ರತಿಭಟನೆ

01:55 PM Feb 01, 2020 | Team Udayavani |

ಸಿಂಧನೂರು: ವ್ಯಕ್ತಿಯೊಬ್ಬರು ಜಾಗ ಒತ್ತುವರಿ ಮಾಡಿಕೊಂಡಿರುವುದನ್ನು ವಿರೋಧಿಸಿ ಅಮರಾಪುರ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಶುಕ್ರವಾರ ಪ್ರತಿಭಟನೆ ನಡೆಸಿದರು.

Advertisement

4.01 ಗುಂಟೆ ಜಾಗೆ ಶಾಲೆಗೆ ಸೇರಿದೆ. ಅಲ್ಲದೇ ಶಾಲೆ ಹೆಸರಿನಲ್ಲಿಯೇ ಎಲ್ಲ ದಾಖಲಾತಿ ಇವೆ. ಖಾಸಗಿ ವ್ಯಕ್ತಿ 100 ಅಡಿ ಜಾಗೆಯಲ್ಲಿ ಸುಮಾರು ವರ್ಷಗಳಿಂದ ಗುಡಿಸಲು ಹಾಕಿಕೊಂಡಿದ್ದಾನೆ. ಈ ಜಾಗೆ ಆ ವ್ಯಕ್ತಿಗೆ ಸೇರಿದ್ದಲ್ಲ. ಇದು ಸರಕಾರಿ ಜಾಗೆಯಾಗಿದ್ದು, ಸಂಬಂಧಿಸಿದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕಾನೂನು ಕ್ರಮಕ್ಕೆ ಮುಂದಾಗಬೇಕು
ಹಾಗೂ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಹೆಚ್ಚುವರಿ ಕೊಠಡಿಗಳ ನಿರ್ಮಾಣಕ್ಕೆ ಸಹಕರಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಕ್ಷೇತ್ರ ಶಿಕ್ಷಣ ಕಚೇರಿ ಎದುರು ಪ್ರತಿಭಟಿಸಲಾಗುವುದು ಎಂದು ಎಚ್ಚರಿಸಿದರು.

ಎಸ್‌ಡಿಎಂಸಿ ಅಧ್ಯಕ್ಷ ನಾಗರಾಜ ಅಮರಾಪುರ ಮಾತನಾಡಿ, ಜಾಗೆ ತೆರವುಗೊಳಿಸುವಂತೆ 5 ತಿಂಗಳ ಹಿಂದೆ ಸಂಬಂಧಿಸಿದ ಅಧಿಕಾರಿಗಳಿಗೆ ದೂರು ನೀಡಲಾಗಿತ್ತು. ಈ ದೂರು ನೀಡಿ
ಸುಮಾರು 5 ತಿಂಗಳಾದರು ಯಾವುದೇ ಪ್ರಯೋಜನವಾಗಿಲ್ಲ. ಅದಕ್ಕಾಗಿ ಶಾಲೆ ವಿದ್ಯಾರ್ಥಿಗಳು ಧರಣಿ ಕೂಡುವಂತಾಗಿದೆ. ಕೂಡಲೆ ಸಂಬಂಧಿಸಿದ ಅಧಿಕಾರಿಗಳು ಜಾಗೆ
ತೆರವು ಗೊಳಿಸಲು ಕ್ರಮ ತೆಗೆದುಕೊಳ್ಳಬೇಕು. ಇದರಲ್ಲಿ ಯಾವುದೇ ರಾಜಕೀಯ ಬಣ್ಣ
ತೋರಿಸುವ ಕೆಲಸವಾಗಬಾರದು. ಈ ಹಿಂದೆ ಹಲವಾರು ಜನರು ಶಾಲೆ ಅಕ್ಕಪಕ್ಕದಲ್ಲಿ ಗುಡಿಸಲುಗಳನ್ನು ಹಾಕಿದ್ದರು. ಅವರೀಗ ಸ್ವ ಇಚ್ಛೆಯಿಂದ ಸರಕಾರಿ ಜಾಗೆ ಬಿಟ್ಟು ಹೋಗಿದ್ದಾರೆ. ಆದರೆ ಈ ವ್ಯಕ್ತಿ ಮಾತ್ರ ಜಾಗೆ ತೆರವುಗೊಳುತ್ತಿಲ್ಲ. ಅನೇಕ ಬಾರಿ ಎಚ್ಚರಿಸಿದರು.

ಯಾವುದೇ ಪ್ರಯೋಜನವಾಗಿಲ್ಲ. ಶಾಲೆ ವಿದ್ಯಾರ್ಥಿಗಳೊಂದಿಗೆ ಗ್ರಾಮದ
ಹಲವು ಮುಖಂಡರು ಸೇರಿ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು. ಎಸ್‌ಡಿಎಂಸಿ ಉಪಾಧ್ಯಕ್ಷ ದ್ಯಾವಣ್ಣ, ಸದಸ್ಯರಾದ ಪಿ. ನಾಗರಾಜ ಕನಕಪ್ಪ, ಸಂಗಪ್ಪ, ಗ್ರಾಮದ ಮುಖಂಡರಾದ ಬಸವರಾಜ ಮಾಲಿಪಾಟೀಲ, ಬಸವರಾಜ ಬಡಿಗೇರ, ಶರಣಪ್ಪ, ನಂದಿಹಳ್ಳಿ ಮಲ್ಲಯ್ಯ, ಲಕ್ಷ್ಮಣ ಯತ್ಮಾರಿ, ಅಂಬಣ್ಣ, ಕನಕಪ್ಪ, ಶಿಕ್ಷಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next