Advertisement

ಯಜ್ಞದಿಂದ ಲೋಕ ಕಲ್ಯಾಣ

03:18 PM Jul 19, 2019 | Naveen |

ಸಿಂಧನೂರು: ಕೋಟಿ ಜಪ ಯಜ್ಞ, ಯಾಗಾದಿಗಳಂತಹ ಧಾರ್ಮಿಕ ಕಾರ್ಯಕ್ರಮಗಳಿಂದ ಲೋಕ ಕಲ್ಯಾಣವಾಗುತ್ತದೆ ಎಂದು ಇಲ್ಲಿನ ಬಾಳೆಹೊನ್ನೂರು ರಂಭಾಪುರಿ ಖಾಸಾ ಶಾಖಾ ಮಠದ ಶ್ರೀ ಸೋಮನಾಥ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

Advertisement

ಸ್ಥಳೀಯ ಕರಿಬಸವ ನಗರದ ಶ್ರೀಮಠದಲ್ಲಿ ದ್ವಾದಶ ಗುರು ಪಟ್ಟಾಧಿಕಾರ ಮಹೋತ್ಸವ ಅಂಗವಾಗಿ ಗುರುವಾರ ವಿಶ್ವಶಾಂತಿ, ಲೋಕ ಕಲ್ಯಾಣಾರ್ಥ ಮತ್ತು ಮಳೆ ಬೆಳೆ ಸಮೃದ್ಧಿಗಾಗಿ ಹಮ್ಮಿಕೊಂಡ ದಂಪತಿಗಳಿಂದ ಪಂಚಾಕ್ಷರಿ ಮಂತ್ರ, ಕೋಟಿ ಜಪಯಜ್ಞ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ವಿವಿಧ ರೀತಿಯ ಯಜ್ಞಗಳನ್ನು ಮಾಡುವುದರಿಂದ ಮನುಷ್ಯನ ಮನಸ್ಸು ಸರಳತೆ ಕಡೆಗೆ ಹೋಗುತ್ತದೆ. ಮಳೆ, ಬೆಳೆ ಸಮೃದ್ಧಿ ಆಗುತ್ತದೆ. ದಂಪತಿಗಳು ಸುಖಕರ ಜೀವನ ಸಾಗಿಸಲು, ಯುವಕರಲ್ಲಿ ಬುದ್ಧಿಶಕ್ತಿ ಹೆಚ್ಚಿಸುವ ಕೆಲಸ ಆಗುತ್ತದೆ. ಸಮಾಜದಲ್ಲಿ ಶಾಂತಿ, ಸೌಹಾರ್ದ ನೆಲೆಸುತ್ತದೆ ಎಂದರು.

ರೌಡಕುಂದದ ಶ್ರೀ ಮರಿ ಸಿದ್ಧಲಿಂಗ ಶಿವಾಚಾರ್ಯರು ಮಾತನಾಡಿ, ದೇಶದ ಸಂಸ್ಕೃತಿ ಉಳಿಸಿ ಬೆಳೆಸುವ ಕೆಲಸ ಪ್ರತಿಯೊಬ್ಬರಿಂದ ಆಗಬೇಕು. ಆಗ ಮಾತ್ರ ಸುಂದರ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ. ಆ ನಿಟ್ಟಿನಲ್ಲಿ ಸೋಮನಾಥ ಶಿವಾಚಾರ್ಯರು ಸಾಗುತ್ತಿದ್ದಾರೆ. ಅವರ ದ್ವಾದಶ ಗುರು ಪಟ್ಟಾಧಿಕಾರ ಮಹೋತ್ಸವ ಭಕ್ತರಿಂದ ಅದ್ಧೂರಿಯಾಗಿ ನಡೆಯುತ್ತಿದೆ. ಪ್ರತಿಯೊಬ್ಬರು ಗುರುಗಳನ್ನು ಗೌರವದಿಂದ ಕಾಣಬೇಕು. ಆಗ ಮಾತ್ರ ಜೀವನದಲ್ಲಿ ಬೆಳವಣಿಗೆ ಹಂತ ಮುಟ್ಟಲು ಸಾಧ್ಯವಾಗುತ್ತದೆ ಎಂದರು.

ಜೆಡಿಎಸ್‌ ವಕ್ತಾರ ಬಸವರಾಜ ನಾಡಗೌಡ ಮಾತನಾಡಿ, ಈ ಭಾಗದ ಎಲ್ಲ ಮಠಾಧಿಧೀಶರು ಭಾರತೀಯ ಸಂಸ್ಕೃತಿಯನ್ನು ಉಳಿಸುವ ಕೆಲಸ ಮಾಡುತ್ತಿದ್ದಾರೆ. ಇಂದಿನ ದಿನಗಳಲ್ಲಿ ಹಣವಿದ್ದೆಡೆಗೆ ಮಠಗಳು, ಮಠಾಧೀಶರು ಹೋಗುವವರೇ ಹೆಚ್ಚಾಗಿದ್ದಾರೆ. ಯಾವುದೇ ಆಸ್ತಿ ಆಕಾಂಕ್ಷೆ ಇಲ್ಲದ ಕಡೆಗೆ ಬರುವವರ ಸಂಖ್ಯೆ ಇಳಿಮುಖವಾಗಿದೆ. ಆದರೆ ಶ್ರೀ ಸೋಮನಾಥ ಶಿವಾಚಾರ್ಯರು ಸಮಾಜಮುಖೀ ಕಾರ್ಯ ಮಾಡುತ್ತ ಸಮಾಜದ ಆಸ್ತಿಯಾಗಿದ್ದಾರೆ ಎಂದು ಹೇಳಿದರು.

Advertisement

ನಂದಿಹಳ್ಳಿ ಶ್ರೀ ರೇವಣಸಿದ್ದೇಶ್ವರ ಶಿವಾಚಾರ್ಯರು, ಮಸ್ಕಿ ಗಚ್ಚಿನಮಠದ ಶ್ರೀ ವರರುದ್ರಮುನಿ ಸ್ವಾಮೀಜಿ, ತುರ್ವಿಹಾಳ ಅಮರಗುಂಡಯ್ಯ, ಕೆಂಬಾವಿಯ ಚನ್ನಬಸವ ಶಿವಾಚಾರ್ಯರು, ಕೊಪ್ಪಳ ಗವಿಮಠದ ಶ್ರೀ ಸಿದ್ಧಲಿಂಗ ದೇವರು, ಅನ್ನದಾನೇಶ್ವರ ಶಾಸ್ತ್ರಿಗಳು, ಜಮಖಂಡಿಯ ಶಿವಲಿಂಗ ಶಿವಾಚಾರ್ಯರು, ಮಂಜುನಾಥ ಸ್ವಾಮಿ, ಶಿವಮಣಿ ಶಿವಯೋಗಿ ಶಿವಾಚಾರ್ಯ, ಸಂಗಯ್ಯಸ್ವಾಮಿ, ಹಂಪಯ್ಯಸ್ವಾಮಿ ರಾವಿಹಾಳ ಇತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next