Advertisement

ಸಾಹಿತ್ಯ ಸಮ್ಮೇಳನ ಸಿದ್ಧತೆ ಪೂರ್ಣ

07:33 PM Oct 21, 2019 | Team Udayavani |

ಸಿಂಧನೂರು: ನಗರದ ಯಲಿಮಂಚಾಲಿ ವಾಸುದೇವರಾವ್‌ ಕಮ್ಮವಾರಿ ಕಲ್ಯಾಣ ಮಂಟಪದಲ್ಲಿ ಆ.22, 23ರಂದು ನಡೆಯಲಿರುವ ರಾಯಚೂರು ಜಿಲ್ಲಾ 10ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಿದ್ಧತಾ ಕಾರ್ಯಗಳು ಪೂರ್ಣಗೊಂಡಿವೆ ಎಂದು ಸ್ವಾಗತ ಸಮಿತಿ ಅಧ್ಯಕ್ಷ, ಶಾಸಕ ವೆಂಕಟರಾವ್‌ ನಾಡಗೌಡ ಹೇಳಿದರು.

Advertisement

ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ನಡೆದ ವಿವಿಧ ಉಪ ಸಮಿತಿಗಳ ಕಾರ್ಯ ಪ್ರಗತಿ ಪರಿಶೀಲನೆ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಮ್ಮೇಳನ ವೇದಿಕೆ, ಆಹಾರ, ಸಾಂಸ್ಕೃತಿಕ, ಮೆರವಣಿಗೆ, ವಸತಿ, ಪ್ರಚಾರ, ಶಿಸ್ತು, ಸಂಪರ್ಕ ಮತ್ತಿತರ ಸಮಿತಿಗಳ ಅಧ್ಯಕ್ಷರು ತಮ್ಮ ತಮ್ಮ ಕಾರ್ಯದ ಪ್ರಗತಿಯನ್ನು ಸಭೆಗೆ ವಿವರಿಸಿದರು.

ತಾಲೂಕು ಕಸಾಪ ಅಧ್ಯಕ್ಷೆ ಸರಸ್ವತಿ ಪಾಟೀಲ ಮಾತನಾಡಿ, ಈಗಾಗಲೇ ಜಿಲ್ಲಾದ್ಯಂತ ಸಮ್ಮೇಳನದ ಕುರಿತು ಪ್ರಚಾರ ಮಾಡಲಾಗಿದೆ. ಹಾಗೆಯೇ ಸಿಂಧನೂರು ತಾಲೂಕಿನ ಹಲವಾರು ಹಳ್ಳಿಗಳಿಗೆ ಸಮ್ಮೇಳನಕ್ಕೆ ಸಿದ್ಧಪಡಿಸಲಾದ ಪ್ರಚಾರ ರಥದ ಮೂಲಕ ಸಾರ್ವಜನಿಕರಿಗೆ ಮಾಹಿತಿ ನೀಡಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸಾಹಿತ್ಯ ಪರಿಷತ್ತಿನ ಜಿಲ್ಲಾ ಮತ್ತು ತಾಲೂಕು ಘಟಕಗಳ ಅಧ್ಯಕ್ಷರಿಂದ ಸಮ್ಮೇಳನಕ್ಕೆ ಆಗಮಿಸುವಂತೆ ಸಾಹಿತ್ಯಾಸಕ್ತರಲ್ಲಿ ಮನವಿ ಮಾಡಿಕೊಳ್ಳಲಾಗಿದೆ ಎಂದು ವಿವರಿಸಿದರು.

ಕಸಾಪ ಜಿಲ್ಲಾಧ್ಯಕ್ಷ ಬಸವಪ್ರಭು ಪಾಟೀಲ ಬೆಟ್ಟದೂರು ಮಾತನಾಡಿ, ಬೆಳಗ್ಗೆ 11 ಗಂಟೆಯೊಳಗೆ ಮೆರವಣಿಗೆ ಮುಗಿಸಿದರೆ, ಸಮ್ಮೇಳನ ಗೋಷ್ಠಿಗಳಿಗೆ ಸಮಯಾವಕಾಶ ಸಿಗುತ್ತದೆ. ಆದ್ದರಿಂದ ಮೆರವಣಿಗೆ ಸಮಿತಿ ಪದಾ ಧಿಕಾರಿಗಳು ಮುಂಜಾಗ್ರತೆ ವಹಿಸಬೇಕು ಎಂದು ಹೇಳಿದರು.

ಸ್ವಾಗತ ಸಮಿತಿ ಸಂಚಾಲಕ ದೇವೇಂದ್ರಗೌಡ ಮಾತನಾಡಿ, ಜಿಲ್ಲೆಯ ಭಾಷೆ, ಸಂಸ್ಕೃತಿ ಮತ್ತು ಸಮಾಜ ಸೇವೆ ಸಲ್ಲಿಸಿ ಮಡಿದ ಮಹನೀಯರ ಹೆಸರಿನಲ್ಲಿ ವೇದಿಕೆ ಬಳಿ ಸುಮಾರು 23 ದ್ವಾರಗಳನ್ನು ನಿರ್ಮಿಸಲಾಗಿದೆ ಎಂದು ವಿವರಿಸಿದರು. ವೇದಿಕೆ ಸಿದ್ಧತೆ ಕುರಿತು ಶಿವಕುಮಾರ ಜವಳಿ ಸಭೆ ಗಮನ ಸೆಳೆದರು. ಆಹಾರ ಸಮಿತಿ ಸತ್ಯಪ್ಪಗೌಡ ವಳಬಳ್ಳಾರಿ ಮಾತನಾಡಿ, ಊಟಕ್ಕೆ ರೊಟ್ಟಿ, ಚಪಾತಿ, ಗೋ ದಿ ಹುಗ್ಗಿ, ಪಾಯಸ, ಹೆಸರು ಬೇಳೆ ಪಾಯಸ, ಮುಳ್ಳಗಾಯಿ ಪಲ್ಯ, ಹೆಸರು ಕಾಳು, ಗುರೆಳ್ಳು ಚಟ್ನಿ, ಕೆಂಪು ಮೆಣಸಿನಕಾಯಿ ಚೆಟ್ನಿ, ಚಿತ್ರಾನ್ನ, ಮಜ್ಜಿಗೆ ವ್ಯವಸ್ಥೆ ಮಾಡಲಾಗಿದೆ. 22, 23ರಂದು ಬೆಳಗ್ಗೆ ಉಪಹಾರ ನೀಡಲಾಗುತ್ತಿದೆ ಎಂದು ಸಭೆ ಗಮನಕ್ಕೆ ತಂದರು.

Advertisement

ಊಟ, ಉಪಹಾರ ನೀಡಲು ಕೌಂಟರ್‌ ತೆರೆಯಲಾಗಿದ್ದು, ಎನ್‌ಎಸ್‌ಎಸ್‌ ವಿದ್ಯಾರ್ಥಿಗಳಿಗೆ ಜವಾಬ್ದಾರಿ ನೀಡಲಾಗಿದೆ. ಸರ್ಕಾರಿ ಪದವಿ ಪೂರ್ವ ಕಾಲೇಜ್‌ ಪ್ರಾಚಾರ್ಯ ಶಿವರಾಜ, ವನಸಿರಿ ಪೌಂಢೇಶನ್‌ ಅಧ್ಯಕ್ಷ ಅಮರೇಗೌಡ ಅವರಿಗೆ ಮೇಲ್ವಿಚಾರಣೆ ಮಾಡುವಂತೆ ತಿಳಿಸಲಾಯಿತು.

ಮಹಿಳೆಯರಿಗೆ ಊಟ, ಉಪಹಾರ ನೀಡಲು ಅಕ್ಕಮಹಾದೇವಿ ವಸತಿ ನಿಲಯದ ವಿದ್ಯಾರ್ಥಿಗಳಿಗೆ ಮತ್ತು ದುದ್ದುಪುಡಿ ಕಾಲೇಜ್‌ ವಿದ್ಯಾರ್ಥಿನಿಯರಿಗೆ ಜವಾಬ್ದಾರಿ ವಹಿಸಿದ್ದು, ಆರ್‌.ಸಿ. ಪಾಟೀಲ ಅವರಿಗೆ ಮೇಲ್ವಿಚಾರಣೆ ಮಾಡುವಂತೆ ತಿಳಿಸಲಾಯಿತು. ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಒಕ್ಕೂಟ ಅಧ್ಯಕ್ಷ ನರೇಂದ್ರನಾಥ ಅವರು ಪ್ರವಾಸಿ ಮಂದಿರದಿಂದ ಕಲ್ಯಾಣ ಮಂಟಪಕ್ಕೆ ಸಾರ್ವಜನಿಕರನ್ನು ಕರೆದೊಯ್ಯಲು 20 ಬಸ್‌ಗಳನ್ನು ಬಿಡುವುದಾಗಿ ಭರವಸೆ ನೀಡಿದರು. ಆಟೋ, ಟ್ಯಾಕ್ಸಿ ಸಂಘದವರು ಸಾರ್ವಜನಿಕರನ್ನು ಉಚಿತವಾಗಿ ಸಮ್ಮೇಳನದ ಸಭಾಂಗಣಕ್ಕೆ ಕರೆತರಲು ಒಪ್ಪಿಕೊಂಡರು.

ಮಾಜಿ ಶಾಸಕ ಹಂಪನಗೌಡ ಬಾದರ್ಲಿ, ಕೃಷಿ ಬೆಲೆ ಆಯೋಗ ರಾಜ್ಯ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ, ಸಂಚಾಲಕ ಎಂ.ಲಿಂಗಪ್ಪ, ಕಾರ್ಯದರ್ಶಿ ಭೀಮನಗೌಡ ಇಟಗಿ, ಜೆ.ಎಲ್‌. ಈರಣ್ಣ, ಸೌಹಾರ್ದ ಸಹಕಾರಿಗಳ ಒಕ್ಕೂಟ ಅಧ್ಯಕ್ಷ ಲೋಕನಗೌಡ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಚಂದ್ರಶೇಖರ ಹಿರೇಮಠ, ಉಪಾಧ್ಯಕ್ಷ ಜಗದೀಶ ಓತೂರು, ಪ್ರಾಚಾರ್ಯ ವಿರುಪನಗೌಡ, ಬಸವರಾಜ ನಾಡಗೌಡ, ಹುಸೇನಪ್ಪ ಅಮರಾಪುರ, ಅರುಣಕುಮಾರ ಬೇರಿY,
ಗಿರಿಜಮ್ಮ ದಢೇಸುಗೂರು, ಬಸವರಾಜ ಯಲಬುರ್ಗಿ, ವೆಂಕನಗೌಡ ವಟಗಲ್‌, ಯಮನಪ್ಪ ಮಲ್ಲಾಪುರ ಇತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next