Advertisement

ಕಾಯಕ ಮಹತ್ವ ಸಾರಿದವರು ಹಡಪದ ಅಪ್ಪಣ್ಣ

03:52 PM Jul 17, 2019 | Naveen |

ಸಿಂಧನೂರು: 12ನೇ ಶತಮಾನದಲ್ಲಿ ಬಸವಣ್ಣನವರ ಸಮಾನಕಾಲೀನರಾದ ಶಿವಶರಣ ಹಡಪದ ಅಪ್ಪಣ್ಣನವರು ಕಾಯಕಕ್ಕೆ ಹೆಚ್ಚು ಮಹತ್ವ ಕೊಟ್ಟಿದ್ದರು. ನುಡಿದಂತೆ ನಡೆದ ಅವರು ಕಾಯಕದ ಮಹತ್ವ ಸಾರಿದ್ದಾರೆ ಎಂದು ಸಾಹಿತಿ ಸಿ.ಎಚ್.ನಾರನಾಳ ಹೇಳಿದರು.

Advertisement

ತಾಲೂಕು ಆಡಳಿತದಿಂದ ಮಂಗಳವಾರ ನಗರದ ಸ್ತ್ರೀಶಕ್ತಿ ಭವನದಲ್ಲಿ ನಡೆದ ಹಡಪದ ಅಪ್ಪಣ್ಣ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಅಪ್ಪಣ್ಣನವರು ಬಸವಣ್ಣನವರ ಆತ್ಮೀಯ ಶರಣರಾಗಿದ್ದರು. ಅವರ ಕಾಯಕ ನಿಷ್ಠೆಯೇ ಅವರ ಬೆಳವಣಿಗೆಗೆ ಪೂರಕವಾಗಿತ್ತು. ಅಂತಹ ಮಹಾನ್‌ ಶರಣರ ಸಮುದಾಯದವರಾದ ಹಡಪದ ಸಮಾಜ ಅವರ ಮಾರ್ಗದಲ್ಲಿ ಸಾಗಬೇಕು. ಕಾಯಕದ ಬಗ್ಗೆ ಗೌರವ ಬೆಳೆಸಿಕೊಳ್ಳಬೇಕು. ಮಕ್ಕಳನ್ನು ಶಿಕ್ಷಣವಂತರನ್ನಾಗಿ ಮಾಡಿದಾಗ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ ಎಂದರು.

ತಹಶೀಲ್ದಾರ್‌ ಶಿವಾನಂದ ಸಾಗರ ಮಾತನಾಡಿ, ಪ್ರತಿಯೊಬ್ಬರು ಹಡಪದ ಅಪ್ಪಣ್ಣನವರ ವಚನಗಳನ್ನು ಓದಿ ಅದರಲ್ಲಿ ತತ್ವ, ಸಂದೇಶ ಪಾಲಿಸಬೇಕು. 12ನೇ ಶತಮಾನದ ಶರಣ, ಶರಣೆಯರು ತೋರಿದ ಮಾರ್ಗದಲ್ಲಿ ಇಂದಿನ ಯುವ ಪೀಳಿಗೆ ಸಾಗಬೇಕಿದೆ ಎಂದರು.

ಬಸವಕೇಂದ್ರದ ಗೌರವ ಸಲಹೆಗಾರ ಪಿ.ವೀರಭದ್ರಪ್ಪ ಕುರುಕುಂದಿ, ಹಡಪದ ಸಮಾಜ ಅಧ್ಯಕ್ಷ ಮರಿಯಪ್ಪ ಉಪ್ಪಲದೊಡ್ಡಿ ಮಾತನಾಡಿದರು

ಬಸವಕೇಂದ್ರದ ಅಧ್ಯಕ್ಷ ನಾಗಭೂಷಪ್ಪ ನವಲಿ, ದುರುಗಪ್ಪ ಹಸಮಕಲ್, ಶಿರಸ್ತೇದಾರ ಅಂಬಾದಾಸ್‌, ಅಂಬರೀಷ, ವೀರೇಶ ಸಾಲಿಮಠ ಮತ್ತಿತರರು ಇದ್ದರು. ನಂತರ ಹಡಪದ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

Advertisement

ಮೆರವಣಿಗೆ: ಕಾರ್ಯಕ್ರಮಕ್ಕೂ ಮುನ್ನ ಇಂದಿರಾ ನಗರದಿಂದ ಸ್ತ್ರೀಶಕ್ತಿ ಭವನದವರೆಗೆ ಹಡಪದ ಅಪ್ಪಣ್ಣನವರ ಭಾವಚಿತ್ರ ಮೆರವಣಿಗೆ ನಡೆಸಲಾಯಿತು

Advertisement

Udayavani is now on Telegram. Click here to join our channel and stay updated with the latest news.

Next