ಸಿಂಧನೂರು: ನಗರದ ಚನ್ನಮ್ಮ ಸರ್ಕಲ್ ಬಳಿ ಇರುವ ಆದಿಶೇಷನ ದೇವಸ್ಥಾನದಲ್ಲಿನ ದೇವರ ಹುಂಡಿ ಶನಿವಾರ ಮಧ್ಯರಾತ್ರಿ ಕಳವಾಗಿದ್ದು, ದೇವಸ್ಥಾನ ಮುಂಭಾಗದಲ್ಲಿನ ಹೂವಿನ ಬಂಡಿಯಲ್ಲಿ ಹುಂಡಿ ಇಟ್ಟುಕೊಂಡು ಖದೀಮರು ಪರಾರಿಯಾಗಿದ್ದಾರೆ.
ಗಂಗಾವತಿ- ರಾಯಚೂರು ಮುಖ್ಯ ರಸ್ತೆಯಲ್ಲಿ ಬರುವ ದೇಗುಲ ಪಕ್ಕದ ಗೇಟ್ ಮುರಿದ ಕಳ್ಳರು ಒಳನುಗ್ಗಿದ್ದಾರೆ. ಗುಡಿಯಲ್ಲಿ ಹುಂಡಿಯನ್ನು ಕಿತ್ತುಕೊಂಡ ನಂತರ ದೇಗುಲ ಮುಂಭಾಗದಲ್ಲಿದ್ದ ಹೂವಿನ ಬಂಡಿಯಲ್ಲಿಟ್ಟುಕೊಂಡು ಪರಾರಿಯಾಗಿದ್ದಾರೆ.
ಶ್ರಾವಣ ಕೊನೆಯ ಸೋಮವಾರ ಹುಂಡಿಯ ಎಣಿಕೆ ನಡೆಯಬೇಕಿತ್ತು. 1.50 ಲಕ್ಷ ರೂ.ನಷ್ಟು ಕಾಣಿಕೆ ಸಂಗ್ರಹವಾಗಿರಬಹುದು ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿ :ಪ್ರವಾಹ ಸ್ಥಿತಿ, ಪರಿಹಾರ ಕಾರ್ಯಗಳ ಕುರಿತಾಗಿ ಬಸವರಾಜ ಬೊಮ್ಮಾಯಿ ತುರ್ತು ಸಭೆ
ದೇವಸ್ಥಾನ ಅಕ್ಕ- ಪಕ್ಕದವರು ಕಳ್ಳತನವಾಗಿರುವುದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ದೇವಸ್ಥಾನ ಆಡಳಿತ ಮಂಡಳಿ ಸದಸ್ಯರ ಸಮಕ್ಷಮದಲ್ಲಿ ಮಹಜರು ನಡೆಸಿದ ಸ್ಥಳೀಯ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.