Advertisement

ವಿದೇಶದಿಂದ ಸಹಾಯ ಮಾಡಿದ ಯುವಕರು

05:07 PM Apr 23, 2020 | Naveen |

ಸಿಂದಗಿ: ಲಾಕ್‌ಡೌನ್‌ ಹಿನ್ನಲೆ ತಮ್ಮ ಗ್ರಾಮಗಳ ಜನರಿಗೆ ನೆರವಿನ ಹಸ್ತ ಚಾಚಿ ವಿದೇಶದಲ್ಲಿರುವ ಸ್ಥಳೀಯ ಯುವಕರು ಮಾದರಿಯಾಗಿದ್ದಾರೆ. ದೇವರಹಿಪ್ಪರಗಿ ತಾಲೂಕಿನ ಕೊಂಡಗೂಳಿ ಗ್ರಾಪಂ ವ್ಯಾಪ್ತಿ ನಿವಾಸಿಗಳಾದ ಸದ್ಯ ಇಂಗ್ಲೆಂಡ್‌ನ‌ಲ್ಲಿ ವಾಸವಾಗಿರುವ ಬಸು ಪಾಟೀಲ, ಬೆಂಗಳೂರಿನಲ್ಲಿರುವ ಚಂದ್ರಕಾಂತ ಸೊನ್ನದ ಹಾಗೂ ಜರ್ಮನಿ ದೇಶದಲ್ಲಿರುವ ಶಂಕರಲಿಂಗ ಸೊನ್ನದ ಅವರು ಮೊಬೈಲ್‌ ಮೂಲಕ ಸಮಾಲೋಚಿಸಿ ತಮ್ಮ ಗ್ರಾಮಗಳಿಗೆ ಆರೂರ ಗೆಳೆಯರ ಬಳಗದ ಮೂಲಕ ಸಹಾಯ ಮಾಡಿದ್ದಾರೆ.

Advertisement

ಅವರು ಅಲ್ಲಿದ್ದುಕೊಂಡೇ ತಮ್ಮ ಹಣದಿಂದ ಕೊಂಡಗೂಳಿ ಗ್ರಾಪಂ ವ್ಯಾಪ್ತಿಯ ಹಂಚಲಿ, ಕೊಂಡಗೂಳಿ, ಬಿ.ಬಿ.ಇಂಗಳಗಿ, ನಾಗರಾಳ, ಅಂಬಳನೂರ, ಕೆಸರಟ್ಟಿ ಗ್ರಾಮಗಲ್ಲಿರುವ ಗರ್ಭಿಣಿಯರಿಗೆ, ಭಾಣಂತಿಯರಿಗೆ ಪೌಷ್ಟಿಕ ಆಹಾರದ ಕಿಟ್‌ ಮಾಡಿಸಿ 53 ಫಲಾನುಭವಿಗಳಿಗೆ ಆಶಾ ಕಾರ್ಯಕರ್ತೆಯರಿಂದ ಉಚಿತವಾಗಿ ತಲುಪಿಸಿದ್ದಾರೆ. ಅಲ್ಲದೇ 150 ಬಿಪಿ ಮತ್ತು ಶುಗರ್‌ ರೋಗಿಗಳಿಗೆ ಉಚಿತ ಔಷಧ ವಿತರಣೆ ಮಾಡಿದ್ದಾರೆ. ನಂತರ ಅವರು ವ್ಯಾಟ್ಸ್‌ಆ್ಯಪ್‌ ಗ್ರೂಪ್‌ ಮೂಲಕ ಸಹಾಯ ಮಾಡುವ ವಿಚಾರ ರವಾನಿಸಿದ್ದಾರೆ.

ಅವರ ಸಂದೇಶಕ್ಕೆ ಸ್ಪಂದಿ ಸಿದ ಗೆಳೆಯರು ಒಂದೇ ದಿನದಲ್ಲಿ 50 ಸಾವಿರ ರೂ. ಸಂಗ್ರಹಿಸಿದ್ದಾರೆ. ಈ ಹಣದಿಂದ ನಿರ್ಗತಿಕ, ಬಡ ಕೂಲಿಕಾರರ ಒಟ್ಟು 150 ಕುಟುಂಬಗಳಿಗೆ ಆಹಾರ ಧಾನ್ಯ ವಿತರಿಸಲು ಸಿದ್ದತೆಗಳು ನಡೆದಿದೆ. ವಿತರಣೆ ಜವಾಬ್ದಾರಿ ಆರೂರ ಗೆಳೆಯರ ಬಳಗದ ಅಧ್ಯಕ್ಷ ಮಡು ಕರದಾಳಿ ಹೊತ್ತಿದ್ದಾರೆ .

Advertisement

Udayavani is now on Telegram. Click here to join our channel and stay updated with the latest news.

Next