Advertisement

ಸಾಮಾಜಿಕ ಸೇವೆಯಲ್ಲಿ ತೊಡಗಲು ಬಿಜ್ಜರಗಿ ಸಲಹೆ

04:27 PM Jul 31, 2019 | Naveen |

ಸಿಂದಗಿ: ಗ್ರಾಮೀಣ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಅವುಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಿದಾಗ ಮಾತ್ರ ರೋಟರಿ ಸಂಸ್ಥೆ ಉದ್ದೇಶ-ಗುರಿ ತಲುಪಿದಂತಾಗುತ್ತದೆ ಎಂದು ಜಿಲ್ಲಾ ಅಸಿಸ್ಟಂಟ್ ಗವರ್ನರ ರಾಜು ಬಿಜ್ಜರಗಿ ಹೇಳಿದರು.

Advertisement

ಪಟ್ಟಣದ ರಾಜರಾಜೇಶ್ವರಿ ಕಲ್ಯಾಣ ಮಂಟಪದಲ್ಲಿ ರೋಟರಿ ಕ್ಲಬ್‌ ಕಲ್ಯಾಣ ನಗರ ಹಮ್ಮಿಕೊಂಡ 2019-20ನೇ ಸಾಲಿನ ಪದಗ್ರಹಣ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಗಳಾಗಿ ಮಾತನಾಡಿದ ಅವರು, ರೋಟರಿ ಸಂಸ್ಥೆ ಸದಸ್ಯರಾಗಿ ಕಾರ್ಯ ನಿರ್ವಹಿಸುವುದು ಒಂದು ಹೆಮ್ಮೆ ಹಾಗೂ ಸಂತೋಷದ ವಿಷಯ. ಈ ಸಂಸ್ಥೆ ಮೂಲಕ ಸಾಮಾಜಿಕ ಕಾರ್ಯ ಮಾಡಲು ಅವಕಾಶ ಸಿಗುತ್ತದೆ ಎಂದರು.

ರೋಟರಿ ಕ್ಲಬ್‌ ಕಲ್ಯಾಣ ನಗರದ 2019-20ನೇ ಸಾಲಿನ ಅಧ್ಯಕ್ಷರಾಗಿ ಕೃಷ್ಣಾ ಈಳಗೇರ, ಕಾರ್ಯದರ್ಶಿಯಾಗಿ ಬಸವರಾಜ ಹಳ್ಳಿ ಅವರು ಅಧಿಕಾರ ವಹಿಸಿಕೊಂಡರು.

ನೂತನ ಅಧ್ಯಕ್ಷ ಕೃಷ್ಣಾ ಈಳಗೇರ ಮಾತನಾಡಿ, ತಾಲೂಕಿನಲ್ಲಿ ರೋಟರಿ ಕ್ಲಬ್‌ ಅಸ್ತಿತ್ವಕ್ಕೆ ಬಂದು 12 ವರ್ಷಗಳು ಕಳೆದಿವೆ. ಅನಾಥ ಮಕ್ಕಳಿಗೆ, ಶೈಕ್ಷಣಿಕ ಕಿಟ್, ಶಾಲಾ ವಿದ್ಯಾರ್ಥಿಗಳಿಗೆ ಶುದ್ಧ ಕುಡಿಯುವ ನೀರಿನ ಕಿಟ್, ಉಚಿತ ಆರೋಗ್ಯ ತಪಾಸಣೆ, ಸಾರಿಗೆ ಸಂಸ್ಥೆ ಸಿಬ್ಬಂದಿಗೆ ಉಚಿತ ನೇತ್ರ ತಪಾಸಣೆ ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ಈ ಸಂಸ್ಥೆ ಮೂಲಕ ಜರುಗಿವೆ. ಅದರಂತೆ ಪ್ರಸ್ತುತ ವರ್ಷದಲ್ಲಿರೂ ಎಲ್ಲ ಪದಾಧಿಕಾರಿಗಳ ಹಾಗೂ ಸದಸ್ಯರ ಸಹಯೋಗದೊಂದಿಗೆ ಸಾಮಾಜಿಕ ಕಾರ್ಯಕ್ರಮಗಳನ್ನು ಮಾಡಲಾಗುವುದು ಎಂದು ಹೇಳಿದರು.

ಜಿಲ್ಲಾ ನಿಕಟಪೂರ್ವ ಅಸಿಸ್ಟಂಟ್ ಗವರ್ನರ್‌ ಪ್ರಸಾದ ನಾಯ್ಡು, ರೋಟರಿ ಕ್ಲಬ್‌ ಕಲ್ಯಾಣ ನಗರದ ನಿಕಟಪೂರ್ವ ಅಧ್ಯಕ್ಷ ಡಾ| ಮಹೇಶ ಕುಲಕರ್ಣಿ, ಡಾ| ಶಾರದಾ ನಾಡಗೌಡ, ಇನ್ನರ್‌ವ್ಹಿಲ್ ಅಧ್ಯಕ್ಷೆ ನಾಗರತ್ನಾ ನಾಗೂರ, ಕಾರ್ಯದರ್ಶಿ ರೇಣುಕಾ ಹಿರೇಮಠ ಮಾತನಾಡಿದರು.

Advertisement

ಅರ್ಬನ್‌ ಬ್ಯಾಂಕ್‌ ಅಧ್ಯಕ್ಷ ಶರಣಪ್ಪ ವಾರದ, ಸಣ್ಣ ಕೈಗಾರಿಕಾ ಸಂಘದ ತಾಲೂಕಾಧ್ಯಕ್ಷ ತಮ್ಮಣ್ಣ ಈಳಗೇರ, ಅಶೋಕ ಅಲ್ಲಾಪುರ, ಡಾ| ಸಂಗಮೇಶ ಪಾಟೀಲ, ಡಾ| ಚಂದ್ರಶೇಖರ ಹಿರೇಗೌಡರ, ಡಾ| ಗಿರೀಶ ಕುಲಕರ್ಣಿ, ಡಾ| ಅಶೋಕ ಪೂಜಾರಿ, ಡಾ| ಮಹಾಂತೇಶ ಹಿರೇಮಠ, ಡಾ| ಸುನೀಲ ಪಾಟೀಲ, ಅಭಿಯಂತರ ಲಿಂಗರಾಜ, ಶಿವಜಾತ ಹಿರೇಮಠ, ರಮೇಶ ಜೋಗುರ, ಅಪ್ಪು ಕಮತಗಿ, ಸಂತೋಷ ಹೂನಳ್ಳಿ, ಶಿವರಾಜ್‌ ವಾರದ, ಅಭಿಯಂತರ ಸಿ.ಕೆ. ಹರಿಹರ, ಆರ್‌.ಎಸ್‌. ನಿರಲಗಿ, ಬಿ.ಜಿ. ನೆಲ್ಲಗಿ, ಎಸ್‌.ಎಸ್‌. ಸೋಮಯಾಜಿ, ಡಾ| ಪ್ರಶಾಂತ ಬಮ್ಮಣ್ಣಿ, ಸಂತೋಷ ಹೂವಿನಳ್ಳಿ, ಮಂಜುನಾಥ ಬಿಜಾಪುರ, ಸಚಿನ ಈಳಗೇರ, ಗೀತಾ ಹರಿಹರ, ಡಾ| ಸರೋಜಿನಿ ಕುಲಕರ್ಣಿ, ಡಾ| ಸುನೀತಾ ಹಿರೇಗೌಡರ, ಕವಿತಾ ಕುಲಕರ್ಣಿ, ಸುಮನ್‌ ಹಿರೇಮಠ, ಜ್ಯೋತಿ ಸೋಮಯಾಜಿ, ಮೌನಾ ಪತ್ತಾರ, ಶಿಲ್ಪಾ ಪತ್ತಾರ, ರೂಪಾ ಉಪ್ಪಿನ, ಶಿಲ್ಪಾ ಶಹಾಪುರ, ಪದ್ಮಪ್ರೀಯಾ ಸರಡಗಿ ಸೇರಿದಂತೆ ಇನ್ನುಳಿದ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next