Advertisement
ಪಟ್ಟಣದ ಪದ್ಮರಾಜ ಶಿಕ್ಷಣ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಆಶ್ರಯದಲ್ಲಿ ಕಾರ್ಗಿಲ್ ವಿಜಯೋತ್ಸವ ನಿಮಿತ್ತ ಹಮ್ಮಿಕೊಂಡಿದ್ದ ಶ್ರಮದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ದೇಶಕ್ಕೆ ಬಲಿದಾನ ಮಾಡಿದ ಸೈನಿಕರ ಸೇವೆ ಮತ್ತು ತ್ಯಾಗ ಸ್ಮರಿಸುವುದು ಎಲ್ಲರ ಕರ್ತವ್ಯ ಎಂದರು.
Related Articles
Advertisement
ವಾಣಿಜ್ಯ ಶಾಸ್ತ್ರ ಪ್ರಾಧ್ಯಾಪಕ ಡಾ| ಆರ್.ಎಂ. ಪಾಟೀಲ ಮಾತನಾಡಿದರು. ಎಬಿವಿಪಿ ಸಂಚಾಲಕ ಭಾಗಣ್ಣ ಹೂಗಾರ, ಡಿ.ಎಂ. ಪಾಟೀಲ, ಡಾ| ಸುಮಾ ನಿರ್ಣಿ ವೇದಿಕೆಯಲ್ಲಿದ್ದರು. ಪಟ್ಟಣದ ಗುರುಕುಲ ಶಿಕ್ಷಣ ಸಂಸ್ಥೆಯಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಕಾರ್ಗಿಲ್ ವಿಜಯೋತ್ಸವ ಆಚರಿಸಲಾಯಿತು.
ಪುರಸಭೆ ಮುಖ್ಯಾಧಿಕಾರಿ ಸಯೀದ್ ಅಹ್ಮದ್ ದಖನಿ, ಮಾಜಿ ಯೋಧ ಎಸ್.ಎಂ. ಯಳಮೇಲಿ, ಕಸಾಪ ಅಧ್ಯಕ್ಷ ಸಿದ್ದಲಿಂಗ ಚೌಧರಿ, ಕಾನಿಪ ಅಧ್ಯಕ್ಷ ಆನಂದ ಶಾಬಾದಿ ಮಾತನಾಡಿದರು. ಮಾಜಿ ಯೋಧರಾದ ಶಬ್ಬಿರಪಟೇಲ್ ಬಿರಾದಾರ, ಬಸವರಾಜ ಕೋಟರಗಸ್ತಿ, ಗುರುಕುಲ ಶಿಕ್ಷಣ ಸಂಸ್ಥೆ ಅಧ್ಯಕ್ಷ ಚಂದ್ರಶೇಖರ ಪೂಜಾರಿ, ಪ್ರಾಚಾರ್ಯ ಸತೀಶ ಚೌಧರಿ ಹಾಗೂ ಮಲ್ಲಿಕಾರ್ಜುನ ಅಲ್ಲಾಪುರ ವೇದಿಕೆಯಲ್ಲಿದ್ದರು.
ಮುತ್ತುರಾಜ ಬ್ಯಾಕೋಡ, ಜ್ಞಾನೇಶ ಗುರವ, ಚಂದ್ರಶೇಖರ ಮಾವೂರ, ಆಸ್ಪಾಕ ಕರ್ಜಗಿ, ಸಿದ್ದು ಪೂಜಾರಿ, ರಾಹುಲ್ ಯಂಪುರೆ, ಶಾಂತು ರಾಣಾಗೋಳ, ಮಹಾಂತೇಶ ಕಲಶೆಟ್ಟಿ, ಶಿವಕುಮಾರ ಕುಕನೂರ ಇದ್ದರು. ಅಶೋಕ ಬಿರಾದಾರ ನಿರೂಪಿಸಿದರು. ಪಂಡಿತ್ ಯಂಪುರೆ ವಂದಿಸಿದರು