Advertisement

ಶರಣ ಸಂಸ್ಕೃತಿಗೆ ಜಾನಪದ ಪೂರಕ

04:15 PM Mar 08, 2020 | Naveen |

ಸಿಂದಗಿ: ಗ್ರಂಥಸ್ಥ ಸಾಹಿತ್ಯಕ್ಕಿಂತ ಮೊದಲು ಹುಟ್ಟಿದ್ದು ಜಾನಪದ ಸಾಹಿತ್ಯ. ಜಾನಪದ ಸಾಹಿತ್ಯ ಸಾಮೂಹಿಕ ಸೃಷ್ಟಿ, ಅದು ಅನಕ್ಷರಸ್ಥ ಜಾನಪದರ ನಾಲಗೆಯ ಮೇಲೆ ಜೀವಂತವಾಗಿರುವ ಕಂಠಸ್ಥ ಸಾಹಿತ್ಯ ಎಂದು ಸ್ಥಳೀಯ ಎಚ್‌ಜಿಪಿಯು ಕಾಲೇಜಿನ ಕನ್ನಡ ಉಪನ್ಯಾಸಕಿ ಮುಕ್ತಾಯಕ್ಕ ಕತ್ತಿ ಹೇಳಿದರು.

Advertisement

ಪಟ್ಟಣದ ಪೀಪಲ್ಸ್‌ ಎಜ್ಯುಕೇಶನ್‌ ಸೊಸೈಟಿಯ ಪಿಇಎಸ್‌ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಪಪೂ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ತಾಲೂಕು ಕಜಾಪ ಸಹಯೋಗದಲ್ಲಿ ಕಜಾಪ ಸಂಸ್ಥಾಪನಾ ದಿನಾಚರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಜಾನಪದ ಸಂಸ್ಕೃತಿ ಅಭಿವ್ಯಕ್ತಿ ಪ್ರಕಾರಗಳಲ್ಲಿ ಜಾನಪದ ಸಾಹಿತ್ಯ ಬಹುಮುಖ್ಯವಾದದ್ದು. ಈ ಸಾಹಿತ್ಯ ಸೃಷ್ಟಿಯಲ್ಲಿ ಪುರುಷರಂತೆಯೇ ಸ್ತ್ರೀಯರೂ ಸಹ ತಲೆಮಾರುಗಳಿಂದ ಸಮಾನವಾಗಿ ಭಾಗವಹಿಸುತ್ತಾ ಬಂದಿದ್ದಾರೆ. ಜಾನಪದ ಸಾಹಿತ್ಯದಲ್ಲಿನ ಮಹಿಳೆಯನ್ನು ತಿಳಿದುಕೊಳ್ಳಲು ನಮಗಿರುವ ಪ್ರಮುಖ ಆಕರವೆಂದರೆ ತ್ರಿಪದಿ. ಯತ್ರ ನಾರ್ಯಂತು ಪೂಜ್ಯತೇ ರಮಂತೇ ತಂತ್ರ ಅಂದರೆ, ಎಲ್ಲಿ ಸ್ತ್ರೀ ಕುಲವನ್ನು ಪೂಜ್ಯಭಾವದಿಂದ ಕಂಡು ಗೌರವಿಸಲಾಗಿದೆಯೋ ಅಲ್ಲಿ ದೇವತೆಗಳು ನೆಲೆಸಿರುತ್ತಾರೆ ಎಂದು ಹಿಂದೂ ಸಂಸ್ಕೃತಿಯ ಹೇಳುತ್ತದೆ ಎಂದರು.

ಎಲ್ಲ ಸಾಹಿತ್ಯದ ಮೂಲ ಬೇರು ಜಾನಪದ ಸಾಹಿತ್ಯ ಎಂದು ಹೇಳಬಹುದು. ಜಾನಪದರ ಜೀವನ ರೀತಿ ನೀತಿ ಶರಣ ಸಂಸ್ಕೃತಿಗೆ ಪೂರಕವಾದರೆ ಅವರ ನೇರ ನುಡಿಗಳು ದಾಸರನ್ನು ನೆನೆಯುವಂತೆ ಮಾಡುತ್ತದೆ. ಮಹಿಳೆ ಎಂಬ ಅಂಶ ಜಾನಪದ ಸಾಹಿತ್ಯದಿಂದ ತಿಳಿದು ಬರುತ್ತದೆ. ಸಂಸ್ಕೃತ ಸಾಹಿತ್ಯ ತನ್ನ ಶ್ಲೋಕದಲ್ಲಿ ಸ್ತ್ರೀಯನ್ನು ದೇವರ ಕುರುಹನ್ನು ಅರುಹಿದ ದೇವರಿಗಿಂತ ಅಧಿಕವಾದ ಗುರುವಿಗೆ ಜಾನಪದ ತಾಯಿ ಸಮಾನಳು ಎಂದು ಜಾನಪದ ಸಾಹಿತ್ಯ ಹೇಳುತ್ತದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಪ್ರಾಚಾರ್ಯ ಆರ್‌.ವಿ. ಭಿಂಗೆ ಮಾತನಾಡಿ, ಜಗತ್ತಿನಲ್ಲಿ ಎಲ್ಲಿಲ್ಲದ ಲಿಖೀತ ಸಾಹಿತ್ಯವಲ್ಲ ಮೌಖೀಕ ಸಾಹಿತ್ಯ ಜಾನಪದ. ಜಾನಪದರರು ಹಾಡಿದ ಪ್ರತಿಯೊಂದು ಗೀಗೀ ಪದ, ಕಂಸಾಳೆ, ಡೊಳ್ಳು ಕುಣಿತ, ಇವೆಲ್ಲವುಗಳು ಆರೋಗ್ಯ ವೃದ್ಧಿಸುವ ಔಷಧಗಳಂತೆ ಕಾರ್ಯ ಮಾಡುತ್ತಿವೆ. ಜಾನಪದರರು ವಾಣಿಯಂತಿದ್ದರೇ ಕವಿವಾಣಿ ಹೂವಂತೆ ಜಾನಪದ ಸಾಹಿತ್ಯ ಇಲ್ಲದೇ ಹೋದರೆ ಈ ಸಾಹಿತ್ಯ ಹುಟ್ಟುತ್ತಿರಲಿಲ್ಲ ಎಂದು ಹೇಳಿದರು.

Advertisement

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆ ಗೌರವ ಕಾರ್ಯದರ್ಶಿ ಬಿ.ಪಿ. ಕರ್ಜಗಿ ಮಾತನಾಡಿ, ಭಾವನೆಯಲ್ಲಿ ವ್ಯಕ್ತಿ ವಿಚಾರಗಳು ಬಹಳ ಮುಖ್ಯ. ಆಕಾಶವೇ ಮೇಲೆ ಬದುಕೇ ಸಾಹಿತ್ಯವೆಂಬಂತೆ ಆಗಿನ ಜನರು ಕಲಿಯದೇ ಇದ್ದರು ಜಾನಪದ ಹಾಡುಗಳನ್ನು ತಮ್ಮದೇಯಾದ ಶೈಲಿಯಲ್ಲಿ ಹಾಡುತ್ತಿದ್ದರು ಎಂದರು.

ಕಜಾಪ ಅಧ್ಯಕ್ಷ ಪಿ.ಜಿ.ಅವಜಿ ಪ್ರಾಸ್ತಾವಿಕ ಮಾತನಾಡಿದರು. ಉಪನ್ಯಾಸಕ ಬಿ.ಡಿ. ಅಂಜುಟಗಿ, ಮಹಾಂತೇಶ ನೂಲಾನವರ್‌, ಶಿವಾನಂದ ಕರಿಗೊಂಡ, ಆರ್‌.ಎಸ್‌. ಗಾಯಕವಾಡ, ಬಸವರಾಜ ಬಿರಾದಾರ, ಕೆ.ಎಚ್‌. ಸೋಮಾಪುರ ವೇದಿಕೆಯಲ್ಲಿದ್ದರು. ಅಮೋಘಸಿದ್ಧ ಕೆರಿಗೊಂಡ ಪ್ರಾರ್ಥಿಸಿದರು. ಕಜಾಪ ಅಧ್ಯಕ್ಷ ಪಿ.ಜಿ.ಅವಜಿ ಸ್ವಾಗತಿಸಿದರು. ಉಪನ್ಯಾಸಕ ಗುರು ಕಡಣಿ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next