Advertisement

ಇಂದು ಸಿಂದಗಿ-ಹಾನಗಲ್ ಉಪಚುನಾವಣೆ ಫಲಿತಾಂಶ : ಇಲ್ಲಿದೆ 2 ಕ್ಷೇತ್ರಗಳ ಮತದಾನದ ಲೆಕ್ಕ

07:57 AM Nov 02, 2021 | Team Udayavani |

ಬೆಂಗಳೂರು :  ಜಿದ್ದಾಜಿದ್ದಿಗೆ ಸಾಕ್ಷಿಯಾಗರುವ ಹಾನಗಲ್​ ಹಾಗೂ ಸಿಂದಗಿ ಉಪ ಚುನಾವಣೆ ಫಲಿತಾಂಶ ಇಂದು ಹೊರ ಬೀಳಲಿದೆ. ಮೂರು ಪಕ್ಷಗಳ ಸರ್ಕಸ್ ನೋಡಿದ್ದ ಮತದಾರರು ಯಾರಿಗೆ ಜೈ ಎಂದಿದ್ದಾರೆ ಎಂಬುದು ಇಂದು ಗೊತ್ತಾಗಲಿದೆ.

Advertisement

ಇನ್ನು ಸಿಂದಗಿ ಹಾಗೂ ಹಾನಗಲ್​ ವಿಧಾನಸಭಾ ಕ್ಷೇತ್ರಗಳಿಗೆ ಅಕ್ಟೋಬರ್​ 29ರಂದು ಚುನಾವಣೆ ನಡೆದಿತ್ತು. ಇಂದು ಮತಎಣಿಕೆ ನಡೆಯುತ್ತಿದ್ದು, ಘಟಾನುಘಟಿ ನಾಯಕರ ಜೊತೆ ಅಭ್ಯರ್ಥಿಗಳಿಗೂ ಢವಢವ ಶುರುವಾಗಿದೆ.

ಹಾನಗಲ್ ಉಪಚುನಾವಣೆಯು ಮಾಜಿ ಸಚಿವ ಸಿಎಂ ಉದಾಸಿ ಅಕಾಲಿಕ ನಿಧನವಾಧ ಕಾರಣ ನಡೆದಿತ್ತು. ಮತ್ತೊಂದು ವಿಶೇಷ ಅಂದ್ರೆ ಸಿಎಂ ಬೊಮ್ಮಾಯಿ ತವರು ಜಿಲ್ಲೆಯಲ್ಲಿ ಈ ಬೈಎಲೆಕ್ಷನ್ ನಡೆದಿರೋದು. ಹಾಗೂ ಬಿಜೆಪಿಯಿಂದ ಶಿವರಾಜ್ ಸಜ್ಜನರ್, ಕಾಂಗ್ರೆಸ್​ನಿಂದ ಶ್ರೀನಿವಾಸ್ ಮಾನೆ ಹಾಗೂ ಜೆಡಿಎಸ್​ನಿಂದ ನಿಯಾಜ್ ಶೇಕ್ ಸೇರಿದಂತೆ ಒಟ್ಟು 19 ಅಭ್ಯರ್ಥಿಗಳಿದ್ದಾರೆ.

ಹಾನಗಲ್ ​ನಲ್ಲಿ ಮತದಾನದ ಲೆಕ್ಕ

  • ಕ್ಷೇತ್ರದಲ್ಲಿನ ಒಟ್ಟು ಮತದಾರರು – 2,04,481
  • ಒಟ್ಟು ಮತದಾನದ ಸಂಖ್ಯೆ -1,71,264
  • ಮತದಾನದ ಶೇಕಡ ಪ್ರಮಾಣ- 83.76%

ಮತ್ತೊಂದೆಡೆ ಸಿಂದಗಿಯಲ್ಲಿ ಮಾಜಿ ಸಚಿವ ಎಂ.ಸಿ.ಮನಗೂಳಿ ನಿಧನದ ಕಾರಣ ಕ್ಷೇತ್ರ ತೆರವಾಗಿತ್ತು. ಈ ಹಿನ್ನೆಲೆಯಲ್ಲಿ ಉಪಚುನಾವಣೆ ನಡೆದಿದೆ. ಸಿಂದಗಿ ಅಖಾಡದಲ್ಲಿ ಕಾಂಗ್ರೆಸ್​ನಿಂದ ಮನಗೂಳಿ ಪುತ್ರ ಅಶೋಕ್ ಮನಗೂಳಿ ಸ್ಪರ್ಧೆ ನಡೆಸಿದ್ದಾರೆ. ಬಿಜೆಪಿಯಿಂದ ರಮೇಶ್ ಭೂಸನೂರ್ ಹಾಗೂ ಜೆಡಿಎಸ್​​ನಿಂದ ನಾಜಿಯಾ ಶಕೀಲಾ ಅಂಗಡಿ ಸೇರಿದಂತೆ ಒಟ್ಟು 6 ಅಭ್ಯರ್ಥಿಗಳು ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.

Advertisement

ಸಿಂದಗಿಯಲ್ಲಿ ಮತದಾನದ ಲೆಕ್ಕ

ಕ್ಷೇತ್ರದಲ್ಲಿನ ಒಟ್ಟು ಮತದಾರರು – 2,34,437
ಪುರುಷ ಮತದಾರರ ಸಂಖ್ಯೆ – 1,20,939
ಒಟ್ಟು ಮತದಾನದ ಸಂಖ್ಯೆ -1,62,852
ಮತದಾನದ ಶೇಕಡ ಪ್ರಮಾಣ- 69.47 %

ಇದಿಷ್ಟು ಎರಡು ಉಪ ಚುನಾವಣಾ ಕ್ಷೇತ್ರದ ಮಾಹಿತಿ. ಯಾರು ಏನೇ ಲೆಕ್ಕ ಹಾಕಿದ್ರೂ ಕೂಡ ಮತದಾರ ಪ್ರಭು ಯಾರಿಗೆ ಜೈ ಎಂದಿದ್ದಾನೆ ಎಂಬುದು ಇಂದು ತಿಳಿಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next