Advertisement

2024ರಲ್ಲೂ ನರೇಂದ್ರ ಮೋದಿಯೇ ಪ್ರಧಾನಿ: ಜಿಗಜಿಣಗಿ

11:33 AM Jun 10, 2019 | Team Udayavani |

ಸಿಂದಗಿ: ದೇಶದ ಭದ್ರತೆ ಮತ್ತು ಅಭಿವೃದ್ಧಿಗಾಗಿ ನರೇಂದ್ರ ಮೋದಿ ಅವರು 2024ರಲ್ಲೂ ಮತ್ತೆ ಪ್ರಧಾನಿಯಾಗಬೇಕು ಎಂದು ನೂತನ ಸಂಸದ ರಮೇಶ ಜಿಗಜಿಣಗಿ ಹೇಳಿದರು.

Advertisement

ಪಟ್ಟಣದ ಜ್ಯೋತಿ ಕಲ್ಯಾಣ ಮಂಟಪದಲ್ಲಿ ಭಾರತೀಯ ಜನತಾ ಪಾರ್ಟಿ ಮಂಡಲ ವತಿಯಿಂದ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನೋತ್ತರವಾಗಿ ಅವರು ಮಾತನಾಡಿದರು.

ಪ್ರಧಾನಿ ನರೇಂದ್ರ ಮೋದಿ ಅವರು ತೆಗೆದುಕೊಳ್ಳುತ್ತಿರುವ ದೃಢ ನಿರ್ಧಾರಗಳಿಂದ ಮತ್ತೇ ದೇಶದ ಚುಕ್ಕಾಣಿ ಸಿಕ್ಕಿದೆ. ಒಬ್ಬ ವ್ಯಕ್ತಿ-ಜಾತಿಯಿಂದ ಗೆಲ್ಲಲು ಸಾಧ್ಯವಿಲ್ಲ. ಎಲ್ಲ ಜಾತಿಯವರ ವಿಶ್ವಾಸ ಹೊಂದಿರಬೇಕು. ಆಗ ರಾಜಕೀಯದಲ್ಲಿ ಯಶಸ್ವಿ ಕಾಣಲು ಸಾಧ್ಯ ಎಂದರು.

ತಾಲೂಕಿನ ಎಲ್ಲ ಗ್ರಾಮ ಪಂಚಾಯತ್‌ಗಳಿಗೆ ಹಾಗೂ ದೊಡ್ಡ ಹಳ್ಳಿಗಳಿಗೆ ಭೇಟಿ ನೀಡುತ್ತೇನೆ. ಅಭಿವೃದ್ಧಿಯ ಕಾರ್ಯದ ಬಗ್ಗೆ ಚರ್ಚೆ ಮಾಡೋಣ. ಪಕ್ಷದ ಬಲವರ್ಧನೆಗೆ ಶ್ರಮಿಸೋಣ. ಹ್ಯಾಟ್ರಿಕ್‌ ಗೆಲುವಿಗೆ ಕಾರಣರಾದ ಕಾರ್ಯರ್ತರಿಗೆ ಅಭಿನಂದಿಸಿ ಈ ಗೆಲುವು ನನ್ನದಲ್ಲ ಪಕ್ಷದ ಕಾರ್ಯಕರ್ತರದ್ದು ಎಂದು ಹೇಳಿದರು.

ಮಾಜಿ ಶಾಸಕ ರಮೇಶ ಭೂಸನೂರ ಮಾತನಾಡಿ, ಲೋಕಸಭಾ ಚುನಾವಣೆ ಭಾರತ ದೇಶದಕ್ಕೆ ಧರ್ಮ ಯುದ್ಧವಾಗಿತ್ತು. ದೇಶದ ಭದ್ರತೆಗಾಗಿ ಮೋದಿ ಬೇಕಾಗಿತ್ತು ಎಂದು ಜಾಗೃತ ಮತದಾರರು ನರೇಂದ್ರ ಮೋದಿ ಅವರರನ್ನು ಮತ್ತೇ ದೇಶದ ಪ್ರಧಾನಿಯನ್ನಾಗಿ ಮಾಡಿದ್ದಾರೆ. ಮತದಾರರು ಜಾಗೃತರಾಗಿದ್ದಾರೆ. ತಾಲೂಕಿನಲ್ಲಿ ರಮೇಶ ಜಿಗಜಿಣಗಿ ಅವರಿಗೆ 35,749 ಮತಗಳ ಮುನ್ನಡೆ ಸಿಕ್ಕಿದೆ. ತಾಲೂಕಿನ ಬಗಲೂರ, ಕೆರೂರ, ಬಂಟನೂರ, ಗುಬ್ಬೇವಾಡ ಹಾಗೂ ಕನ್ನೋಳ್ಳಿ ಗ್ರಾಮಳ ಬೂತ್‌ಗಳಲ್ಲಿ ಬಿಜೆಪಿಗೆ ಹೆಚ್ಚು ಮತಗಳು ಬಿದ್ದಿವೆ ಎಂದರು.

Advertisement

ವಿಧಾನ ಪರಿಷತ್‌ ಸದಸ್ಯ ಅರುಣ ಶಹಾಪುರ ಮಾತನಾಡಿ, ರಮೇಶ ಜಿಗಜಿಣಿಯವರ ಗೆಲುವಿಗೆ ಕಾರ್ಯಕರ್ತರು ಕಾರಣರಾಗಿದ್ದು ಜಿಲ್ಲೆಯ ಕಾರ್ಯಕರ್ತರನ್ನು ಭೇಟಿಯಾಗುತ್ತಿದ್ದಾರೆ. ಅವರ ಈ ಗೆಲುವು ಚುನಾವಣೆಯಲ್ಲಿ ಅಪಪ್ರಚಾರ ಮಾಡಿದವರಿಗೆ ಕಪಾಳಮೋಕ್ಷ ಮಾಡಿದಂತಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಪಕ್ಷದೆ ಜಿಲ್ಲಾಧ್ಯಕ್ಷ ಚಂದ್ರಕಾಂತ ಕವಟಗಿ ಮಾತನಾಡಿ, ಭಾರತ ಜಗದ್ಗುರು ಆಗಬೇಕು ಮತ್ತೇ ನರೇಂದ್ರ ಮೋದಿ ಅವರು ದೇಶದ ಪ್ರಧಾನಿಯಾಗಬೇಕು, ದೇಶದ ಭದ್ರತೆ ಅಭಿವೃದ್ಧಿಯಾಗಬೇಕು ಎಂದು ಬಿಜೆಪಿಗೆ ಮತ ನೀಡಿ ಗೆಲ್ಲಿಸಿದ್ದಾರೆ ಎಂದರು.

ಜಿಪಂ ಸದಸ್ಯ ಬಿ.ಆರ್‌.ಯಂಟಮನ, ಅಶೋಕ ಅಲ್ಲಾಪುರ, ಸಂತೋಷ ಪಾಟೀಲ ಡಂಬಳ, ವಿವೇಕ್‌ ಡಬ್ಬಿ ಮಾತನಾಡಿದರು. ಚಂದ್ರಶೇಖರ ನಾಗೂರ, ಜಿಪಂ ಸದಸ್ಯ ಬಿಂದುರಾಯಗೌಡ ಪಾಟೀಲ, ಶ್ರೀಮಂತ ಬಗಲಿ, ಸಿದ್ದು ಬುಳ್ಳಾ, ತಾಪಂ ಸದಸ್ಯ ಎಂ.ಎನ್‌.ಕಿರಣರಾಜ, ಬಿ.ಎಚ್. ಬಿರಾದಾರ, ಎಂ.ಎಸ್‌. ಮಠ, ಬಸವಂತ್ರಾಯಗೌಡ ಬಿರದಾರ, ಶ್ರೀಶೈಲಗೌಡ ಬಿರಾದಾರ, ಮಲ್ಲಪ್ಪಣ್ಣ ನಾಸಿ, ಸುರೇಶ ಕಿರಣಗಿ, ಶ್ರೀಕಾಂತ ಸೋಮಜಾಳ, ಶಿಲ್ಪಾ ಕುದರಗೊಂಡ ವೇದಿಕೆಯಲ್ಲಿದ್ದರು.

ಮಂಡಲ ಪ್ರಧಾನ ಕಾರ್ಯದರ್ಶಿ ಈರಣ್ಣ ರಾವೂರ, ಗುರು ಅಗಸರ, ಪ್ರಕಾಶ ನಂದಿಕೊಲ, ಶಿವು ನಾಟಿಕಾರ, ಶಿವಾನಂದ ಆಲಮೇಲ, ಈರಣ್ಣ ಬೂದಿಹಾಳ, ರುದ್ರಗೌಡ ಬಿರಾದಾರ, ಗುರು ತಳವಾರ, ಪುರಸಭೆ ಸದಸ್ಯ ಚಂದ್ರಶೇಖರ ಅಮಲಿಹಾಳ, ಪ್ರದೀಪ ದೇಶಪಾಂಡೆ ಸೇರಿದಂತೆ ಪಕ್ಷದ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ವಿಶೇಷ: ಪಕ್ಷದ ಕಾರ್ಯಕರ್ತರು ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ನಂತರ ಹೆಚ್ಚು ಮತ ಬಿದ್ದ ಗ್ರಾಮಗಳ ಕಾರ್ಯಕರ್ತರು ಹಾಗೂ ಹಿರಿಯ ಕಾರ್ಯಕರ್ತರನ್ನು ಸಂಸದ ರಮೇಶ ಜಿಗಜಿಣಗಿಯವರೆ ಸನ್ಮಾನಿಸಿದ್ದು ವಿಶೇಷವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next