Advertisement

ಅವ್ಯವಸ್ಥೆಯಲ್ಲಿಯೇ ಕಲಿಕೆ

11:46 AM Oct 10, 2019 | Naveen |

ಸಿಂದಗಿ: ದೇವರನಾವದಗಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅವ್ಯವಸ್ಥೆಗಳ ಆಗರವಾಗಿದ್ದು ಅನೈತಿಕ ಚಟುವಟಿಕೆ ಕೇಂದ್ರವಾಗಿ ಮಾರ್ಪಡುತ್ತಿದೆ.

Advertisement

ತಾಲೂಕಿನ ಅನೇಕ ಹಳ್ಳಿಗಳಲ್ಲಿನ ಶಾಲೆಗಳ ಸ್ಥಿತಿ ಹೀಗಿದ್ದು ದೇವರನಾವದಗಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಒಂದು ಉದಾಹರಣೆಯಾಗಿದೆ.

ಸಿಂದಗಿ ತಾಲೂಕಿನ ಹಳ್ಳಿಗಳಲ್ಲಿ ನಡೆಯುತ್ತಿರುವ ಸರಕಾರಿ ಪ್ರಾಥಮಿಕ ಶಾಲೆಗಳ ರಕ್ಷಣೆ ಹಿತಾಸಕ್ತಿ ಕೊರತೆಗೆ ಇದು ಸಾಕ್ಷಿಯಾಗಿದೆ. ಶಾಲೆಯಲ್ಲಿ 14 ಕೊಣೆಗಳಿದ್ದು ಅವುಗಳಲ್ಲಿ 3 ಸಂಪೂರ್ಣ ಹಾಳಾಗಿವೆ. ಒಂದು ಶಿಥಿಲಾವಸ್ಥೆಯಲ್ಲಿದ್ದು, ಒಂದು ಬಿಸಿಯೂಟದ ಅಡುಗೆ ಮಾಡಲು ಇನ್ನೊಂದು ಮುಖ್ಯಗುರುಗಳ ಕೊಠಡಿ. ಒಂದು ಗ್ರಂಥಾಲಯ ಇನ್ನುಳಿದ 7 ಕೊಠಡಿಗಳಲ್ಲಿ 1ರಿಂದ 7ನೇ ವರ್ಗಗಳವರೆಗೆ ಪಾಠ ನಡೆಯುತ್ತವೆ. ಈ ಶಾಲೆಯಲ್ಲಿ 200ಕ್ಕಿಂತ ಹೆಚ್ಚು ಮಕ್ಕಳು ಕಲಿಯುತ್ತಾರೆ.

ಇಲ್ಲಿ ಶೌಚಾಲಯವಿಲ್ಲ, ಕುಡಿಯುವ ನೀರಿನ ವ್ಯವಸ್ಥೆಯಿಲ್ಲ, ಶಾಲೆಗೆ ಕಾಂಪೌಂಡ್‌ ಇಲ್ಲ. ಜನಪ್ರತಿನಿಧಿಗಳ ಮತ್ತು ಶಿಕ್ಷಣ ಇಲಾಖೆ ನಿರ್ಲಕ್ಷ್ಯವೇ ಶಾಲೆ ದುಸ್ಥಿತಿಗೆ ಕಾರಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next