ಸಿಂದಗಿ : ವಿಷಪೂರಿತ ನೀರು ಕುಡಿದು ಹತ್ತು ಕುರಿಗಳು ಸಾವನ್ನಪ್ಪಿದ ಘಟನೆ ತಾಲೂಕಿನ ಡಂಬಳ ತಾಂಡಾದ ಹೊಲದಲ್ಲಿ ಶನಿವಾರ ನಡೆದಿದೆ.
ತಾಂಡಾದ ರೈತ ಮಹಿಳೆ ಕಾಂತಾಬಾಯಿ ಮೋತಿಲಾಲ ರಾಠೋಡ ಅವರಿಗೆ ಸೇರಿದ ಹತ್ತು ಕುರಿಗಳು ಸಾವನ್ನಪ್ಪಿವೆ. ಹೊಲದ ಕಾವಲಿಯಲ್ಲಿ ರಸಗೊಬ್ಬರದ ಚಿಲ ಬಿದ್ದಿದ್ದು ಅಲ್ಲಿಂದ ಹರಿಯುತ್ತಿರುವ ನೀರು ಕುಡಿದ ಕುರಿಗಳಲ್ಲಿ ಹತ್ತು ಕುರಿಗಳು ಸಾವನ್ನಪ್ಪಿದ್ದು ಇನ್ನುಳಿದ ಎಂಟು ಕುರಿಗಳ ಸ್ಥಿತಿ ಚಿಂತಾಜನಕವಾಗಿದೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಬಿಜೆಪಿ ಯುವ ಮುಖಂಡ ಸಂತೋಷ ಪಾಟೀಲ ಡಂಬಳ ಅವರು ರೈತ ಮಹಿಳೆ ಕಾಂತಾಬಾಯಿ ಮೋತಿಲಾಲ ರಾಠೋಡ ಅವರಿಗೆ ಸಾಂತ್ವಾನ ಹೇಳಿದರು. ಬಡವರಾಗಿದ್ದ ಅವರಿಗೆ 10 ಸಾವಿರ ರೂ. ಸಹಾಯಧನ ನೀಡಿದರು. ಸರಕಾರದಿಂದ ಬರುವ ಸಹಾಯಧನವನ್ನು ಕೊಡಿಸುವಲ್ಲಿ ಪ್ರಾಮಾಣಿಕ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಶಿವಣ್ಣ ಮಾರಲಬಾವಿ, ಗೌಡಣ್ಣ ಆಲಮೇಲ, ರಮೇಶ ವಂದಾಲ, ಸೈಪೋನ ಬಾಗವಾನ, ಅಮ್ಮೋಗಿ ಜೈನಾಪುರ, ಕಾಮಣ್ಣ ನಾಯ್ಕೋಡಿ ಇದ್ದರು.
ಇದನ್ನೂ ಓದಿ : ಅತಿ ಹೆಚ್ಚು ಗಳಿಕೆಯತ್ತ ಕಮಲ್ ಹಾಸನ್ ನಟನೆಯ “ವಿಕ್ರಮ್’ ಸಿನಿಮಾ