ಸಿಂದಗಿ: ಮಾಜಿ ಪ್ರಧಾನಿ ದೇವೇಗೌಡರ ಕಟ್ಟಾ ಆಭಿಮಾನಿಯಾಗಿದ್ದ ದಿ| ಶಾಸಕ ಎಂ.ಸಿ. ಮನಗೂಳಿ ಅವರ ನಿಧನದ ನಂತರ ಅವರ ಪುತ್ರ ಅಶೋಕ ಮನಗೂಳಿ ಜೆಡಿಎಸ್ ಪಕ್ಷ ತೊರೆದು ಕಾಂಗ್ರೆಸ್ ಪಕ್ಷ ಸೇರ್ಪಡೆಯಾದರು. ಈ ರಾಜಕೀಯ ಬೆಳವಣಿಗೆಯಿಂದ ಕ್ಷೇತ್ರದಲ್ಲಿ ಪ್ರಾದೇಶಿಕ ಪಕ್ಷ ಜೆಡಿಎಸ್ ಪಕ್ಷ ಎಲ್ಲಿ ಮರೆಯಾಯಿತು ಎಂದು ಕಾರ್ಯಕರ್ತರಲ್ಲಿ ದುಗುಡು ತುಂಬಿಕೊಂಡಿತ್ತು.
ಸಿಂದಗಿ ಉಪ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಅಭ್ಯರ್ಥಿಯನ್ನು ಕಣದಲ್ಲಿ ಇಳಿಸಬೇಕು ಎಂದು ನಿರ್ಧರಿಸಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಜಿಲ್ಲಾ ಜೆಡಿಎಸ್ ಮುಖಂಡರೊಂದಿಗೆ ಚರ್ಚಿಸಿ ಯೋಗ್ಯ ಅಭ್ಯರ್ಥಿಯನ್ನು ಹುಡುಕಾಟ ಮಾಡುವ ಸಂದರ್ಭದಲ್ಲಿ ಅವರಿಗೆ ಕಂಡದ್ದು ತಾಲೂಕಿನ ಚಾಂದಕವಠೆ ಜಿಪಂ ಸದಸ್ಯ ಗುರುರಾಜಗೌಡ ದೇವಪ್ಪಗೌಡ ಪಾಟೀಲ. ಗುರುರಾಜಗೌಡ ಪಾಟೀಲ ಅವರು ಜೆಡಿಎಸ್ ಪಕ್ಷದಿಂದ ಸ್ಪ ರ್ಧಿಸಿದಲ್ಲಿ ಉಪ ಚುನಾವಣೆಯಲ್ಲಿ ತ್ರಿಕೋನ ಸ್ಪಧೆ ನಡೆಯುತ್ತದೆ. ಜೆಡಿಎಸ್ ಕಾರ್ಯಕರ್ತರು ಉತ್ಸುಕರಾಗಿದ್ದಾರೆ.
ಜಿಪಂ ಅಭ್ಯರ್ಥಿ ಗುರುರಾಜಗೌಡ ದೇವಪ್ಪಗೌಡ ಪಾಟೀಲ ಅವರನ್ನು ಮಾ. 11ರಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಕರೆಸಿಕೊಂಡು ಸಿಂದಗಿ ಉಪ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಸ್ಪ ರ್ಧಿಸಲು ಆಹ್ವಾನ ನೀಡಿದ್ದಾರೆ. ಗುರುರಾಜಗೌಡರು ಎರಡು ದಿನ ಕಾಲಾವಕಾಶ ಕೇಳಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
2016ರಲ್ಲಿ ಚಾಂದಕವಠೆ ಜಿಪಂ ಕ್ಷೇತ್ರದಲ್ಲಿ ರಾಷ್ಟ್ರೀಯ ಪಕ್ಷಗಳ ಪೈಪೋಟಿ ಮಧ್ಯದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಗೆಲುವು ಸಾಧಿ ಸಿದ ಕಂಪ್ಯೂಟರ್ ವಿಷಯದಲ್ಲಿ ಬಿಇ ಪದವಿ ಪಡೆದ ಗುರುರಾಜಗೌಡ ದೇವಪ್ಪಗೌಡ ಪಾಟೀಲ ಇತಿಹಾಸ ಸೃಷ್ಟಿಸಿದ್ದಾರೆ. ಗುರುರಾಜಗೌಡ ಅವರ ಅಜ್ಜ ಗುರುಲಿಂಗಪ್ಪಗೌಡ ಪಾಟೀಲ ಅವರು 1962ರಲ್ಲಿ ಇಂಡಿ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರರಾಗಿ ಸ್ಪರ್ಧಿಸಿ ಗೆಲುವು ಸಾಧಿಸಿ ಶಾಸಕರಾಗಿ, 1967ರಲ್ಲಿ ಸ್ವತಂತ್ರ ಪಕ್ಷದಿಂದ ಸಂಸದರಾಗಿ ಆಯ್ಕೆಯಾಗಿದ್ದರು.
ಗುರುರಾಜಗೌಡರ ತಂದೆ ದೇವಪ್ಪಗೌಡ ಅವರು 1987ರಲ್ಲಿ ದೇವಪ್ಪಗೌಡ ಅವರು ಜಿಪಂ ಸದಸ್ಯರಾಗಿ ಆಯ್ಕೆಯಾಗಿದ್ದರು. ಅವರು ಸದಾ ಸಾಮಾಜಿಕ ಸೇವೆಯಲ್ಲಿರುವುದರಿಂದ 2013ರ ವಿಧಾನಸಭಾ ಚುನಾವಣೆಯಲ್ಲಿ ಸಂಯುಕ್ತ ಜನತಾದಳದಿಂದ ಸ್ಪ ರ್ಧಿಸಲು ಬಯಸಿದರು. ಆದರೆ ಟಿಕೆಟ್ ಸಿಗಲಿಲ್ಲ. ಆದರೂ ಅಭಿಮಾನಿಗಳ ಒತ್ತಾಯದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆಗಿಳಿದರು. ಚುನಾವಣೆ ಹತ್ತಿರವಾದಾಗ ಅವರು ಹೃದಯಾಘಾತದಿಂದ ನಿಧನರಾದರು. ನಂತರ ಅವರ ಮಗ ಗುರುರಾಜಗೌಡ ಪಾಟೀಲ 2016ರಲ್ಲಿ ಚಾಂದಕವಠೆ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಗೆಲುವು ಸಾಧಿ ಸಿದರು. 2021ರ ಸಿಂದಗಿ ಉಪ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಚುನಾವಣೆಗೆ ಸ್ಪ ರ್ಧಿಸಿ ಗೆಲುವು ಸಾಧಿ ಸುವ ಮೂಲಕ ತಂದೆಯ ಕನಸು ನನಸು ಮಾಡಲು ಜೆಡಿಎಸ್ ಪಕ್ಷದ ನಾಯಕ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವಕಾಶ ನೀಡಿದ್ದಾರೆ.
ಜಿಪಂ ಅಭ್ಯರ್ಥಿ ಗುರುರಾಜಗೌಡ ಪಾಟೀಲ ಅವರು ಜೆಡಿಎಸ್ ಪಕ್ಷದಿಂದ ಸ್ಪ ರ್ಧಿಸಿದಲ್ಲಿ ಸಿಂದಗಿ ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರಿಗೆ ಮರು ಜೀವ ಬಂದಂತಾಗುತ್ತದೆ ಎಂದು ಹಳೆ ಜೆಡಿಎಸ್ ಕಾರ್ಯಕರ್ತರು ಅಭಿಪ್ರಾಯ ಹಂಚಿಕೊಂಡರು.
ರಮೇಶ ಪೂಜಾರ