ಸಿಂದಗಿ: ಕ್ಷೇತ್ರದ ಅಭಿವೃದ್ಧಿಗೆ ಸುಮಾರು 500 ಕೋಟಿ ರೂ.ಗಿಂತಲೂ ಅಧಿಕ ಅನುದಾನ ತಂದು ಕಾಮಗಾರಿಗಳು ಪ್ರಾರಂಭಿಸಲಾಗಿದೆ ಎಂದು ಶಾಸಕ ಎಂ.ಸಿ. ಮನಗೂಳಿ ಹೇಳಿದರು.
ತಾಲೂಕಿನ ಬಂದಾಳ ಗ್ರಾಮದಲ್ಲಿ ಸಣ್ಣ ನೀರಾವರಿ ಹಾಗೂ ಅಂತರ್ಜಲ ಇಲಾಖೆ ವತಿಯಿಂದ 50 ಲಕ್ಷ ರೂ. ವೆಚ್ಚದಲ್ಲಿ ಹಳ್ಳಕ್ಕೆ ಬಾಂದಾರ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ತಾಲೂಕಿನಲ್ಲಿ ವಿವಿಧ ಕಾಮಗಾರಿಗಳು ಭರದಿಂದ ಸಾಗಿವೆ.
ಈಗಾಗಲೇ ಅನೇಕ ಕಾಮಗಾರಿಗಳು ಟೆಂಡರ್ ಪ್ರಕ್ರಿಯೆಯಲ್ಲಿವೆ. ಇನ್ನೂ ಕ್ಷೇತ್ರದ ಶಾಶ್ವತ ಕಾಮಗಾರಿಗಳು ತರಲು ಪ್ರಯತ್ನ ಮಾಡುತ್ತೇನೆ. ಕೆಲಸಗಾರನಿಗೆ ಅಧಿಕಾರ ಮುಖ್ಯವಲ್ಲ. ಉತ್ತಮ ಆಡಳಿತ ಮುಖ್ಯ. ತಮ್ಮ ಅಧಿಕಾರ ಅವಧಿಯಲ್ಲಿ ರೂಪಿತವಾದ ಎಲ್ಲ ಕಾಮಗಾರಿಗಳು ಯೋಗ್ಯತಾ ರೀತಿಯಲ್ಲಿ ನಡೆದರೆ ಸಂತೃಪ್ತಿಯಾಗುತ್ತದೆ ಎಂದರು.
ಕ್ಷೇತ್ರದ ಅಭಿವೃದ್ಧಿಗೆ ಇನ್ನೂ ಹತ್ತು ಹಲವಾರು ಯೋಜನೆಗಳ ಕನಸನ್ನು ಹೊತ್ತುಕೊಂಡಿದ್ದೇನೆ. ಸರ್ಕಾರ ಮಟ್ಟದಲ್ಲಿ ಹೋರಾಟ ಮಾಡಿ ಮುಖ್ಯಮಂತ್ರಿ ಜೊತೆ ಚರ್ಚಿಸಿ ಅಭಿವೃದ್ಧಿಗೆ ಅನುದಾನ ತರುತ್ತೇನೆ. ಕ್ಷೇತ್ರದ ಜನತೆ ಕಾಮಗಾರಿಗಳಿಗೆ ಎಲ್ಲ ರೀತಿಯ ಸಹಕಾರ ನೀಡಬೇಕು ಎಂದರು.
ನಿವೃತ್ತ ನೌಕರರ ಸಂಘದ ಅಧ್ಯಕ್ಷ ವಿ.ಬಿ. ಕುರಡೆ ಮಾತನಾಡಿ, ಸಿಂದಗಿ ಕ್ಷೇತ್ರದ ಅಚ್ಚಳಿಯದೇ ಉಳಿಯುವ ಕಾಮಗಾರಿ ಕೈಗೊಂಡ ಕೀರ್ತಿ ಶಾಸಕ ಎಂ.ಸಿ. ಮನಗೂಳಿ ಅವರಿಗೆ ಸಲ್ಲುತ್ತದೆ. ಕೆಲಸ ಮಾಡುವ ಇಚ್ಛಾಶಕ್ತಿ ಇದ್ದವರು ಮಾತ್ರ ಇಷ್ಟೊಂದು ದೊಡ್ಡ ಮಟ್ಟದ ಅನುದಾನ ತರಲು ಸಾಧ್ಯ ಎಂದರು.
ಬಸಯ್ಯ ಹಿರೇಮಠ, ಶ್ರೀಶೈಲ ಕುಂಬಾರ, ಭೀಮಣ್ಣ ಇಂಚಗೇರಿ, ರಾಮಪ್ಪ ಯಳಮೇಲಿ, ಸಿದ್ರಾಮಯ್ಯ ಹಿರೇಮಠ, ಪ್ರಸನ್ನಕುಮಾರ ಜೇರಟಗಿ, ಶರಣಯ್ಯ ಹಿರೇಮಠ, ಬಿ.ವೈ. ಬಿರಾದಾರ, ಶಂಕ್ರಗೌಡ ಬಿರಾದಾರ, ಶಿವು ಏವೂರ, ಮಲ್ಲೇಶಿ ಬದ್ನಾಳ, ಸಿದ್ದು ಏವೂರ, ಗುತ್ತಿಗೇದಾರ ಆರ್.ಎಂ. ದೇವರನಾವದಗಿ, ಶರಣಪ್ಪ ಪೂಜಾರಿ, ಚಂದ್ರೇಶಖರ ನಾಟೀಕರ, ಹಣಮಂತ ಹೂಗಾರ, ಶಿವಯ್ಯ ಸಾಲಿಮಠ, ಮಲ್ಲನಗೌಡ ಪಾಟೀಲ ಇದ್ದರು.