Advertisement
1996ರಲ್ಲಿ ಅಸ್ತಿತ್ವಕ್ಕೆ ಬಂದ ಸಿಂದಗಿ ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆಗೆ 2017-18ನೇ ವರ್ಷ ವಾರ್ಷಿಕ 2 ಕೋಟಿ ರೂ. ಬಂದರೆ 2017-18ರಲ್ಲಿ ಬರಗಾಲದ ನಿಮಿತ್ತ ಕೇವಲ 48 ಲಕ್ಷ ರೂ. ಆದಾಯ ಬಂದಿದೆ. ಆದರೆ ಅಭಿವೃದ್ಧಿ ಮಾತ್ರ ಶೂನ್ಯವಾಗಿದೆ. ಮಾರುಕಟ್ಟೆಯ ಆಸ್ತಿಗಳು ಪ್ರತಿ ವರ್ಷ ಹಾಳಾಗುತ್ತ ಹೊರಟಿವೆ. ಕೃಷಿ ಉತ್ಪನ್ನ ಮಾರುಟಕಟ್ಟೆಗೆ ಪರ ಊರಿನಿಂದ ಬಂದ ರೈತರಿಗೆ ತಂಗಲು ರೈತ ಭವನ ಮತ್ತು ಉಪಾಹಾರ ಗೃಹ ಪ್ರಾರಂಭದಿಂದಲೂ ಇದೇ ಆದರೆ ಅದು ರೈತರಿಗೆ ಉಪಯೋಗವಾಗಿಲ್ಲ. ರೈತ ಭವನ ಋತುಮಾನಕ್ಕೆ ತಕ್ಕಂತೆ ಬದಲಾಗುತ್ತದೆ. ತೊಗರಿ ಖರೀದಿ ಸಮಯ ಬಂದಾಗ ತೊಗರಿ ಸಂಗ್ರಹ ಗೋಡಾವನ್ನಾಗಿ ಪರಿವರ್ತನೆಯಾಗುತ್ತದೆ. ಇನ್ನುಳಿದ ಸಂದರ್ಭದಲ್ಲಿ ಭವನಕ್ಕೆ ಕೀಲಿ ಹಾಕುತ್ತಾರೆ. ಏಕೆಂದರೆ ಅಲ್ಲಿ ವಾಸ ಮಾಡಲಿಕ್ಕೂ ಯೋಗ್ಯ ವಾತಾವರಣವಿಲ್ಲ. ಹೀಗಾದಲ್ಲಿ ರೈತರು ಹೇಗೆ ರೈತ ಭವನ ಉಪಯೋಗಿಸುತ್ತಾರೆ?
Related Articles
Advertisement
ಕೃಷಿ ಉತ್ಪನ್ನ ಮಾಟುಕಟ್ಟೆಯವರು ಪುರಸಭೆಗೆ ತೆರೆಗೆ ತುಂಬಬೇಕು ಎಂದು ನೋಟಿಸ್ ಕೋಡುತ್ತಾರೆ. ಆದರೆ ಕೃಷಿ ಉತ್ಪನ್ನ ಮಾರುಕಟ್ಟೆಯ ಅಭಿವೃದ್ಧಿ ಮತ್ತು ನಿರ್ವಹಣೆ ಕಾರ್ಯದಲ್ಲಿ ಪುರಸಭೆ ಕೆಲಸ ಶೂನ್ಯವಿದೆ. ಆದರೂ ತೆರಿಗೆ ಕಟ್ಟಬೇಕು ಎಂದು ಹೇಳುತ್ತಾರೆ. 2008-08ರಲ್ಲಿ 69.75 ಸಾವಿರ, 2018-19 ರಲ್ಲಿ 9 ಲಕ್ಷ ರೂ. ಹೆಚ್ಚು ತೆರಿಗೆ ಕಟ್ಟಿದ್ದಾರೆ. ಆದರೆ ಪುರಸಭೆಯವರು ಯಾವುದೇ ಅಭಿವೃದ್ಧಿ ಕೆಲಸ ಮಾಡುವುದಿರಲಿ ಸ್ವಚ್ಛತೆ ಮಾಡಿಲ್ಲ ಎಂದು ಅಧಿಕಾರಿಗಳು ದೂರುತ್ತಾರೆ.
ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ 62 ನಿವೇಶನಗಳಿಗೆ ಈಗಾಗಲೆ ಎಲ್ಲವನ್ನೂ ಹಂಚಿಕೆ ಮಾಡಲಾಗಿದೆ. ಆದರೆ ಈ ಮಾರುಕಟ್ಟೆಯಲ್ಲಿ ಕೃಷಿ ಉತ್ಪನ್ನಗಳಿಗೆ ಸಂಬಂಧಿಸಿದ ವ್ಯಾಪಾರ ಮಾಡುವವರ ಸಂಖ್ಯೆ ಕಡಿಮೆಯಿದೆ. ಇಲ್ಲಿ ರಾಜಕೀಯ ಪಕ್ಷಗಳ ಕಚೇರಿಗಳಿಗೆ, ಜಿಮ್ (ವ್ಯಾಯಾಮ ಶಾಲೆ) ಇದೆ. ಈ ಕುರಿತು ಅಧಿಕಾರಿಗಳಿಗೆ ಕೇಳಿದಾಗೊಮ್ಮೆ ಇಲ್ಲಿ ಕೃಷಿ ಉತ್ಪನ್ನ ಮಾರಾಟ ಮಾಡುವ ಸಂಖ್ಯೆ ಕಡಿಮೆಯಿದೆ. ಈ ಕುರಿತು ಮೇಲಧಿಕಾರಿಗಳಿಗೆ ತಿಳಿಸಲಾಗಿದೆ. ಅವರಿಗೆ ನೋಟಿಸ್ ನೀಡಲಾಗುವುದು ಎಂದು ಉತ್ತರ ನೀಡುವುದು ಸಾಮಾನ್ಯವಾಗಿದೆ.