Advertisement
ತಾಲೂಕಿನ ಅಲ್ಲಾಪುರ ಮತ್ತು ನೇಮತಾಬಾದ್ ಗ್ರಾಮದ ಜಮೀನುಗಳಿಗೆ ಭೇಟಿ ನೀಡಿದ ಸಚಿವರು, ಮಳೆಯಿಂದಾಗಿ ಸೋಯಾಬಿನ್ ಮತ್ತು ತೊಗರಿ ಬೆಳೆಗಳು ತೀವ್ರ ನಲುಗಿರುವುದನ್ನು ಖುದ್ದು ನೋಡಿ, ಹಾನಿಯ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ಬೆಳೆಹಾನಿ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ರೈತರಿಗೆ ಧೈರ್ಯ ತುಂಬಿದರು.
ಎಂದು ರೈತರು ತಿಳಿಸಿದರು. ಪ್ರಾಥಮಿಕ ವರದಿ ಪ್ರಕಾರ ಅಲ್ಲಾಪುರ ಗ್ರಾಮದಲ್ಲಿ 225 ಹೆಕ್ಟೇರ್ ವಿಸ್ತೀರ್ಣ ಪ್ರದೇಶದಲ್ಲಿ ಮತ್ತು ನೇಮತಾಬಾದ್ ಗ್ರಾಮದಲ್ಲಿ ಒಟ್ಟು 340 ಹೆಕ್ಟೇರ್ ವಿಸ್ತೀರ್ಣ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿರುವುದಾಗಿ ಇದೇ ವೇಳೆ ಜಿಲ್ಲಾಧಿಕಾರಿ ರಾಮಚಂದ್ರನ್ ಆರ್ ಅವರು ಸಚಿವರಿಗೆ ಮಾಹಿತಿ ನೀಡಿದರು. ಹಿಂದಿನ ವರ್ಷದ ಬೆಳೆ ವಿಮೆ ಪರಿಹಾರ ಹಣ ಸಿಕ್ಕಿರುವುದಿಲ್ಲ ಎಂದು ರೈತರು ತಿಳಿಸಿದರು.
Related Articles
Advertisement
ಕೌಠಾ ಸೇತುವೆಗೂ ಭೇಟಿ: ನಂತರ ಔರಾದ ತಾಲೂಕಿನ ಕೌಠಾ (ಬಿ) ಸೇತುವೆಗೆ ಭೇಟಿ ನೀಡಿ, ವಿಪರೀತ ಮಳೆಯಿಂದಾಗಿ ನೀರು ಸೇತುವೆ ಮೇಲಿನ ರಸ್ತೆ ಅಂಚಿನವರೆಗೆ ತಲುಪಿ ಹರಿಯುತ್ತಿದ್ದ ನೀರಿನ ಸೆಳವನ್ನು ವೀಕ್ಷಣೆ ನಡೆಸಿದರು. ಮೇಲಿನ ನದಿಗಳಿಂದ ನೀರು ಹರಿ ಬಿಟ್ಟಿರುವುದರಿಂದ ನದಿ ಆಸುಪಾಸಿನ ಜಮೀನಿಗೆ ನೀರು ನುಗ್ಗಿ ಕೌಠಾ ವ್ಯಾಪ್ತಿಯಲ್ಲಿ ಅಂದಾಜು 1500 ಹೆಕ್ಟೇರ್‌ನಲ್ಲಿ ಇದ್ದ ಬೆಳೆ ಸಂಪೂರ್ಣ ನೀರು ಪಾಲಾಗಿದೆ ಎಂದು ಸಚಿವರಿಗೆ ಸ್ಥಳೀಯ ಅಧಿ ಕಾರಿಗಳು ಮಾಹಿತಿ ನೀಡಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಪ್ರಭು ಚವ್ಹಾಣ, ಮಹಾರಾಷ್ಟ್ರದ ಧನೇಗಾಂವ್ ಡ್ಯಾಮನಿಂದ ಮತ್ತು ಮಾಂಜ್ರಾ ನದಿಯಿಂದ ನೀರು ಬಿಟ್ಟಿರುವುದರಿಂದ ಸಂಗಮದಿಂದ ಕಂದಗೂಳ ತನಕ ಪೂರ್ಣ ಪ್ರಮಾಣದಲ್ಲಿ ಬೆಳೆ ಹಾನಿಯಾಗಿದೆ. ಬೀದರ ಜಿಲ್ಲೆಯಲ್ಲಿ ಇದುವರೆಗೆ ಅಂದಾಜು 54,000 ಹೆಕ್ಟೇರ್ ಪ್ರದೇಶದಲ್ಲಿನ ಬೆಳೆ ಹಾನಿಯಾಗಿರುವ ಬಗ್ಗೆ ಅಂದಾಜಿಸಿ ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ಮಾಹಿತಿ ನೀಡಲಾಗಿದೆ. ಕೃಷಿ, ತೋಟಗಾರಿಕಾ ಇಲಾಖೆಯಿಂದ ಬೆಳೆಹಾನಿ ಸಮೀಕ್ಷೆ ಪ್ರಕ್ರಿಯೆ ಜಿಲ್ಲೆಯಲ್ಲಿ ಮುಂದುವರೆದಿದೆ ಎಂದರು. ಈ ವೇಳೆ ಸಹಾಯಕ ಆಯುಕ್ತೆ ಗರೀಮಾ ಪನ್ವಾರ, ತಹಶೀಲ್ದಾರ ಶಕೀಲ್, ಕೃಷಿ ಜಂಟಿ ನಿರ್ದೇಶಕಿ ತಾರಾಮಣಿ ಜಿ.ಎಚ್., ಪಶು ಪಾಲನಾ ಇಲಾಖೆಯ ಉಪ ನಿರ್ದೇಶಕ ರವಿಕುಮಾರ ಬೂರೆ ಹಾಗೂ ಇನ್ನಿತರರು ಇದ್ದರು.