Advertisement
ಕೋವಿಡ್, ಪ್ರಕೃತಿ ವಿಕೋಪ ಮೊದಲಾದ ಸಮಸ್ಯೆ ಮತ್ತು ಸವಾಲುಗಳ ವರ್ಷ ಇದಾಗಿದ್ದು, ಎಲ್ಲವನ್ನು ಸರಕಾರ ಸಮರ್ಥವಾಗಿ ನಿಭಾಯಿಸುತ್ತಿದೆ. ಜತೆಗೆ ಜಿಲ್ಲೆಯ ಸಮಗ್ರ ಅಭಿವೃದ್ಧಿ ಹಾಗೂ ಜನಕಲ್ಯಾಣಕ್ಕೆ ಸಾಕಷ್ಟು ಕಾರ್ಯಕ್ರಮಗಳನ್ನು ಕೈಗೊಂಡಿದೆ ಎಂದು ಅವರು ತಿಳಿಸಿದರು.
ಮಡಿಕೇರಿಯಲ್ಲಿರುವ ಇತಿಹಾಸ ಪ್ರಸಿದ್ಧ ಹಳೇ ಕೋಟೆಯನ್ನು ಸಂರಕ್ಷಿಸಲು ಸರಕಾರದಿಂದ 10.76 ಕೋಟಿ ರೂ.ಗಳನ್ನು ಭಾರತೀಯ ಪುರಾತತ್ವ ಇಲಾಖೆಗೆ ಬಿಡುಗಡೆ ಮಾಡಲಾಗಿದೆ ಎಂದರು. 14.98 ಕೋ.ರೂ. ಪರಿಹಾರ
2019ರ ಪ್ರಾಕೃತಿಕ ವಿಕೋಪದಿಂದ ಮನೆಗಳನ್ನು ಕಳೆೆದುಕೊಂಡ, ಹಾನಿಗೊಳಗಾದ ಒಟ್ಟು 2,416 ಮನೆಗಳಿಗೆ 14.98 ಕೋಟಿ ರೂ.ಗಳ ಪರಿಹಾರ ವನ್ನು ಬಿಡುಗಡೆ ಮಾಡಲಾಗಿದೆ. 2018ರ ವಿಕೋಪಕ್ಕೆ ಸಂಬಂಧಿಸಿದಂತೆ ಜಂಬೂರಿನಲ್ಲಿ 383, ಮದೆನಾಡಿನಲ್ಲಿ 80 ಸುಸಜ್ಜಿತ ಮನೆಗಳನ್ನು ನಿರ್ಮಿಸಿ ಸಂತ್ರಸ್ತರಿಗೆ ಹಸ್ತಾಂತರಿಸಲಾಗಿದೆ.