Advertisement

ಐಪಿಎಲ್‌ನಿಂದ 3500 ಕೋಟಿ ರೂ. ತೆರಿಗೆ ಪಾವತಿ

06:55 AM Feb 10, 2018 | Team Udayavani |

ಮುಂಬೈ: ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಬಿಸಿಸಿಐಗೆ ಚಿನ್ನದ ಮೊಟ್ಟೆ ಇಡುವ ಕೋಳಿಯಾಗಿದೆ. ಹಾಗೇ ಸರ್ಕಾರಕ್ಕೂ ದೊಡ್ಡ ಮೊತ್ತದ ತೆರಿಗೆ ಪಾವತಿಯಾಗುತ್ತಿದೆ. ಮೂಲಗಳ ಪ್ರಕಾರ ಕಳೆದ 10 ಐಪಿಎಲ್‌ ಆವೃತ್ತಿಯಿಂದ ಬಿಸಿಸಿಐ 3500 ಕೋಟಿ ರೂ. ಹಣವನ್ನು ಸರ್ಕಾರಕ್ಕೆ ತೆರಿಗೆಯಾಗಿ ಪಾವತಿಸಿದೆ. ಅಂದರೆ ಪ್ರತಿ ಐಪಿಎಲ್‌ನಿಂದ ಸರಾಸರಿ 350 ಕೋಟಿ ರೂ. ತೆರಿಗೆ ನೀಡಿದೆ.

Advertisement

ಇಲ್ಲಿಯವರೆಗೆ ಐಪಿಎಲ್‌ನಿಂದ ಬಿಸಿಸಿಐ 12 ಸಾವಿರ ಕೋಟಿ ರೂ.ಗಿಂತ ಅದಿಕ ಹಣಗಳಿಸಿದೆ ಎನ್ನಲಾಗಿದೆ. ಆದರೆ ಭಾರತದಲ್ಲಿ ನಡೆಯುತ್ತಿರುವ ಏಕದಿನ, ಟೆಸ್ಟ್‌, ಟಿ20 ಸರಣಿಗಳಲ್ಲಿ ಐಪಿಎಲ್‌ನಲ್ಲಿ ಬರುವಷ್ಟು ಹಣ ಹರಿದುಬರುತ್ತಿಲ್ಲ.
ಐಪಿಎಲ್‌ 11ನೇ ಆವೃತ್ತಿ ಏಪ್ರಿಲ್‌ನಲ್ಲಿ ಆರಂಭವಾಗಲಿದೆ. ಈ ಬಾರಿ ಮತ್ತೂಷ್ಟು ರಂಗೇರುವ ಸಾಧ್ಯತೆ ಇದೆ. ಒಟ್ಟಿನಲ್ಲಿ ಬಿಸಿಸಿಐಗೆ ಐಪಿಎಲ್‌ ಚಿನ್ನದ ಮೊಟ್ಟೆ ಇಡುವ ಕೋಳಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next