Advertisement

ಅಂಗವಿಕಲರ ಬಸ್‌ ಪಾಸ್‌ ನಿಯಮ ಸರಳೀಕರಿಸಿ

12:33 PM Feb 05, 2022 | Team Udayavani |

ಚಿತ್ತಾಪುರ: ಅಂಗವಿಕಲರ ಬಸ್‌ ಪಾಸ್‌ ನವೀಕರಣ ವೇಳೆ ಹಳೆ ಪಾಸ್‌ ಪಡೆದು ಹೊಸ ಪಾಸ್‌ ನೀಡುವಂತೆ ನಿಯಮ ಸರಳೀಕರಣ ಮಾಡಬೇಕು ಎಂದು ತಾಲೂಕು ದೈಹಿಕ ಮತ್ತು ಮಾನಸಿಕ ಅಂಗವಿಕಲರ ವಿವಿದೊದ್ಧೇಶ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮಹ್ಮದ್‌ ಇಬ್ರಾಹಿಂ ಒತ್ತಾಯಿಸಿದರು.

Advertisement

ಈ ಕುರಿತು ಮುಖ್ಯಮಂತ್ರಿಗೆ ಬರೆದ ಮನವಿ ಪತ್ರವನ್ನು ಶಿರಸ್ತೇದಾರ ಅಶ್ವತ್ಥ್ ನಾರಾಯಣ ಅವರಿಗೆ ಸಲ್ಲಿಸಿ ಮಾತನಾಡಿದ ಅವರು, ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಂಗವಿಕಲರು ವಾಸ ಮಾಡುವ ಸ್ಥಳದಿಂದ 100 ಕಿ.ಮೀ ವರೆಗೆ ಉಚಿತವಾಗಿ ಬಸ್‌ನಲ್ಲಿ ಸಂಚರಿಸಲು ಪ್ರತಿವರ್ಷ ಜನವರಿಯಲ್ಲಿ ಬಸ್‌ ಪಾಸ್‌ ನೀಡುತ್ತದೆ. ಡಿಸೆಂಬರ್‌ನಲ್ಲಿ ಪಾಸ್‌ ಕೊನೆಗೊಳ್ಳುತ್ತದೆ. ಆದರೆ ಇದುವರೆಗೆ ಕೇವಲ ಶೇ.10ರಷ್ಟು ಅಂಗವಿಕಲರಿಗೆ ಮಾತ್ರ ಬಸ್‌ ಪಾಸ್‌ ನೀಡಲಾಗಿದೆ. ಅನೇಕ ಅಂಗವಿಕಲರು ಬಸ್‌ ಪಾಸ್‌ಗಾಗಿ ಅಲೆದಾಡುತ್ತಿದ್ದಾರೆ ಎಂದರು.

ಹಳೆ ಪಾಸ್‌ ನೋಡಿ ನವೀಕರಣಗೊಳಿಸಿ ಹೊಸ ಪಾಸ್‌ ನೀಡುವ ವ್ಯವಸ್ಥೆಯಿದೆ. ಅಂಗವಿಕಲರು ಆರೋಗ್ಯ ಇಲಾಖೆ ವೈದ್ಯರು ತಪಾಸಣೆ ಮಾಡಿ, ನೀಡಿರುವ ಗುರುತಿನ ಚೀಟಿ ನೋಡಿ ಬಸ್‌ ಪಾಸ್‌ ನೀಡಲಾಗುತ್ತಿತ್ತು. ಆದರೆ ಈ ಬಾರಿ ಅರ್ಜಿ ಸಲ್ಲಿಸಲು ಯುಡಿಐಡಿ ಗುರುತಿನ ಚೀಟಿ ಕಡ್ಡಾಯವೆಂದು ಸಾರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಅಂಗವಿಕಲರು ಅರ್ಜಿ ಸಲ್ಲಿಸಲು ಬಸ್‌ ನಿಲ್ದಾಣವಿರುವ ನಗರ, ಪಟ್ಟಣಗಳಿಗೆ ಅಲೆದಾಡಲು ಹಣದ ಖರ್ಚಿನ ಜತೆಗೆ ಮಾನಸಿಕ ಹಿಂಸೆಯಾಗುತ್ತಿದೆ. ಆದ್ದರಿಂದ ನಿಯಮ ಸರಳೀಕರಣಗೊಳಿಸಿ ಅಂಗವಿಕಲರಿಗೆ ಕೂಡಲೇ ಬಸ್‌ ಪಾಸ್‌ ನೀಡಬೇಕು. ಪಾಸ್‌ ನೀಡುವ ಸಮಯ ಮಾರ್ಚ್‌ ತಿಂಗಳ ಕೊನೆ ವರೆಗೆ ವಿಸ್ತರಿಸಬೇಕು ಎಂದು ಒತ್ತಾಯಿಸಿದರು.

ಮುಖಂಡರಾದ ಮಹೇಶ ಜಾಯಿ, ಭಾಗಣ್ಣ ಧನಶೆಟ್ಟಿ, ಶರಬಣ್ಣ ಸನ್ನತಿ, ನಾಗಪ್ಪ ಅಳ್ಳೋಳ್ಳಿ, ಮಲ್ಲೇಶಿ ಹುಂಡೇಕಾರ, ಸಾಬಣ್ಣ ದೊಡ್ಮನಿ ಹಾಗೂ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next