Advertisement
ಪಟ್ಟಣದ ಗಿರಿಯಮ್ಮ ವೃತ್ತದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ 75ನೇ ಸ್ವಾತಂತ್ರೋತ್ಸವ ಅಮೃತ ಮಹೋತ್ಸವ ಅಂಗವಾಗಿ ಆಯೋಜಿಸಿದ್ದ “ಸಾಲ ಸಂಪರ್ಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ದೇಶದ ಆರ್ಥಿಕತೆ ಅಭಿವೃದ್ಧಿಯಲ್ಲಿ ಬ್ಯಾಂಕುಗಳ ಪಾತ್ರ ಮಹತ್ವದಾಗಿದೆ. ಗ್ರಾಮೀಣ ಪ್ರದೇಶದ ಕಟ್ಟಕಡೆಯ ವ್ಯಕ್ತಿಗೂ ಹಣಕಾಸು ಸೇವೆಗಳನ್ನು ದೊರಕಿಸುವ ಮೂಲಕ ದೇಶದ ಆರ್ಥಿಕ ಸ್ಥಿತಿ ವೃದ್ಧಿ ಆಗುತ್ತದೆ.
Related Articles
Advertisement
ಸಾಕ್ಷರತೆಗೆ ಕೈಜೋಡಿಸಿ: ಕೆನರಾ ಬ್ಯಾಂಕಿನ ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕಿ ಪಿ.ಮಾಲಿನಿ ಮಾತನಾಡಿ, “ದೇಶದ ಆರ್ಥಿಕತೆ ವೃದ್ಧಿಗೆ ಸರ್ಕಾರ ನೀಡಿರುವ ಪ್ರತಿಯೊಂದು ಯೋಜನೆಗಳಲ್ಲಿಯೂ ಸಾರ್ವಜನಿಕರು ಭಾಗಿಯಾಗಿ ಅದರ ಪ್ರಯೋಜನ ಪಡೆದುಕೊಳ್ಳಿ. ನಿಮಗೆ ತಿಳಿದಿರುವ ಮಾಹಿತಿಯನ್ನು ಎಲ್ಲರೊಂದಿಗೆ ಹಂಚಿಕೊಂಡು ಬ್ಯಾಂಕಿಂಗ್ ಸಾಕ್ಷರತೆಗೆ ಕೈಜೋಡಿಸಿ ಎಂದರು.
ಕನ್ನಡದಲ್ಲಿ ಮಾಹಿತಿ ನೀಡಿ: ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗ್ರಾಹಕರು, ಸ್ಥಳೀಯರು ವೇದಿಕೆ ಮೇಲೆ ಭಾಷಣ ಮಾಡುತ್ತಿದ್ದ ಬ್ಯಾಂಕಿನ ಅಧಿಕಾರಿಗಳು ಕನ್ನಡದಲ್ಲಿ ಮಾಹಿತಿ ನೀಡಬೇಕು. ನಿಮ್ಮ ಮಾತುಗಳು ಅರ್ಥವಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಾವು ಜೀವಿಸುತ್ತಿರುವುದು ಕರ್ನಾಟಕದಲ್ಲಿ, ಕನ್ನಡ ಭಾಷೆಯಲ್ಲಿ ನಮಗೆ ಸೇವೆ ನೀಡಿ, ಹಿಂದಿ, ಇಂಗ್ಲಿಷ್ ಭಾಷೆಯಲ್ಲಿ ಭಾಷಣ ಮಾಡಿದರೇ ಈ ಕಾರ್ಯಕ್ರಮ ವಿಫಲವಾಗುತ್ತದೆ ಎಂದು ಗದ್ದಲ ಸೃಷ್ಟಿಸಿದರು. ನಂತರ ಕನ್ನಡದಲ್ಲಿ ಅನುವಾದ ಮಾಡಿದರು. ಜಿಲ್ಲಾ ವೈದ್ಯಾಧಿಕಾರಿ ಡಾ. ತಿಪ್ಪೇಸ್ವಾಮಿ, ಬ್ಯಾಂಕ್ ಅಧಿಕಾರಿ ಲತಾ ಕುರೂಪ್, ರಾಜಣ್ಣ, ಶೈಲಜಾ ಹಾಗೂ ಮತ್ತಿತರರು ಇದ್ದರು.