Advertisement

ನೀರಿನ ಉಳಿತಾಯಕ್ಕೆ ಸರಳ ತಂತ್ರಗಳು

12:02 AM Aug 17, 2019 | mahesh |

ಮಳೆಗಾಲದಲ್ಲಿ ಧಾರಾಕಾರ ಸುರಿಯುವ ಮಳೆ ವರುಷಕ್ಕೆ ಬೇಕಾದಷ್ಟು ನೀರನ್ನು ನೀಡುತ್ತದೆ. ಆದರೆ ಬೇಸಗೆ ಬಂದಾಗ ಇಡೀ ವಿಶ್ವವೇ ನೀರಿನ ಸಮಸ್ಯೆಯಿಂದ ತತ್ತರಿಸಿ ಹೋಗುತ್ತದೆ. ನೀರಿನ ಉಳಿತಾಯದ ಕುರಿತು ಅದೆಷ್ಟೇ ಅರಿವು ಮೂಡಿಸಿದರೂ ನೀರಿಗಾಗಿ ಪರದಾಡುವ ಸ್ಥಿತಿ ಮಾತ್ರ ಹಾಗೆಯೇ ಇದೆ. ಪ್ರತಿಯೊಬ್ಬ ವ್ಯಕ್ತಿಯೂ ನೀರಿನ ಉಳಿತಾಯಕ್ಕೆ ಮನಸ್ಸು ಮಾಡಿದರೆ ಭವಿಷ್ಯದಲ್ಲಿ ನೀರಿಗಾಗಿ ನಡೆಯಬಹುದಾದ ಯುದ್ಧವನ್ನು ತಡೆಗಟ್ಟಲು ಸಾಧ್ಯ. ನೀರಿನ ಉಳಿತಾಯ ಹಾಗೂ ಮಿತ ಬಳಕೆ ಪ್ರತಿ ನಾಗರಿಕನ ಕರ್ತವ್ಯ.

Advertisement

ಮನೆಗಳಲ್ಲಿ ನಾವು ದಿನನಿತ್ಯದ ಬಳಕೆಗೆ ಲೀಟರ್‌ಗಟ್ಟಲೆ ನೀರನ್ನು ಬಳಸುತ್ತೇವೆ. ಆದರೆ ಅಷ್ಟು ನೀರಿನ ಆವಶ್ಯಕತೆ ಇದೆಯೇ? ಇರುವ ನೀರನ್ನು ಹೇಗೆ ಮಿತವಾಗಿ ಬಳಸಬಹುದು? ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು.

ಮಳೆ ನೀರು ಸಂಗ್ರಹ ಮಾಡಿ
ಮಳೆ ನೀರಿನ ಸಂಗ್ರಹ ಮಾಡುವುದರಿಂದ ಮನೆಯ ಬಳಕೆಗೆ ಮಳೆ ನೀರನ್ನು ಬಳಕೆ ಮಾಡಬಹುದು. ಟ್ಯಾಂಕ್‌ಗಳಲ್ಲಿ ಮಳೆ ನೀರನ್ನು ಸಂಗ್ರಹಿಸಿಡಿ ಮತ್ತು ಅದನ್ನು ಬೇಸಗೆ ಕಾಲದಲ್ಲಿ ಗಿಡಗಳಿಗೆ, ದಿನನಿತ್ಯದ ಬಳಕೆಗೆ ಬಳಸಬಹದು.

ಸರಳ ಟಿಪ್ಸ್‌:

1 ಬ್ರೆಶ್‌ ಮಾಡುವಾಗ, ಪಾತ್ರೆ ತೊಳೆಯುವಾಗ ನಳ್ಳಿ ಆನ್‌ ಮಾಡಿಟ್ಟುಕೊಳ್ಳುವ ಅಭ್ಯಾಸ ಹೆಚ್ಚಿನವರಿಗೆ ಇದೆ. ಈ ಅಭ್ಯಾಸವನ್ನು ನಿಲ್ಲಿಸಿದಲ್ಲಿ ನೀರಿನ ಉಳಿತಾಯ ಸಾಧ್ಯ.

Advertisement

2 ಮನೆಗಳಲ್ಲಿ ಲೀಕೆಜ್‌ ಇರುವ ಪೈಪ್‌ಗ್ಳನ್ನು, ನಳ್ಳಿಗಳನ್ನು ತತ್‌ಕ್ಷಣ ಸರಿಪಡಿಸಿಕೊಳ್ಳುವುದು ಅಗತ್ಯ.

3 ವೇಸ್ಟ್‌ ನೀರನ್ನು ಬಳಕೆ ಮಾಡಬಹುದಾದ ಸಾಧ್ಯತೆಗಳನ್ನು ಕಂಡುಕೊಳ್ಳಬೇಕು.

4 ವಾಶಿಂಗ್‌ ಮೆಶಿನ್‌ ಆಯ್ಕೆ ಮಾಡುವಾಗ ಹೆಚ್ಚು ದಕ್ಷತೆ ಇರುವ ಮೆಶಿನ್‌ಗಳನ್ನು ಖರೀದಿ ಮಾಡಿ. ಇಲ್ಲದೇ ಇದ್ದರೆ ವಾಶಿಂಗ್‌ ಮೆಶಿನ್‌ಗಾಗಿ ಹೆಚ್ಚು ನೀರು ಬಳಕೆಯಾಗುತ್ತದೆ.

5 ಮನೆಗಳಲ್ಲಿ ಶವರ್‌ ಬಳಕೆ ಕಡಿಮೆಗೊಳಿಸಿದರೆ ನೀರಿನ ಉಳಿತಾಯ ಸಾಧ್ಯ.

6 ಗಾರ್ಡನ್‌ಗೆ ಪೈಪ್‌ ಮೂಲಕ ನೀರು ಹಾಕುವ ಬದಲು ಕ್ಯಾನ್‌ಗಳನ್ನು ಬಳಸಿ. ಇದರಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಉಳಿಕೆಯಾಗುತ್ತದೆ.

7 ಡ್ಯುವೆಲ್ ಫ್ಲಶ್‌ ಟಾಯ್ಲೆಟ್ ಬಳಸಿ. ಮನೆಗಳಲ್ಲಿ ಹೆಚ್ಚು ನೀರು ವ್ಯಯವಾಗುವುದು ಫ್ಲಶ್‌ಗೆ. ಆದ್ದರಿಂದ ಡ್ಯುವೆಲ್ ಫ್ಲಶ್‌ಗಳ ಬಳಕೆ ಮಾಡಿ.

8 ವಾಹನಗಳನ್ನು ತೊಳೆಯುವಾಗ ನೀರನ್ನು ಮಿತವಾಗಿ ಬಳಸಿ. ವಾಹನ ತೊಳೆದ ನೀರು ಪೋಲಾಗದಂತೆ ಹೂವಿನ ಗಿಡಗಳಿಗೆ ಸೇರುವಂತೆ ಮಾಡಿದರೆ ಉತ್ತಮ.

 

•ರಂಜಿನಿ ಮಿತ್ತಡ್ಕ

Advertisement

Udayavani is now on Telegram. Click here to join our channel and stay updated with the latest news.

Next