Advertisement
ನನ್ನನ್ನು ಭೇಟಿಯಾಗುವ ಅನೇಕ ಯುವಕರು, ಯಾವ ಕಂಪೆನಿಯಲ್ಲಿ ಹೂಡಿಕೆ ಮಾಡಿದರೆ ಲಾಭವಾಗುತ್ತದೆ ಎಂದು ಸಲಹೆ ಕೇಳುತ್ತಾರೆ. ಅವರು ಹಾಗೆ ಕೇಳಿದ ತತ್‌ಕ್ಷಣ ನಾನು ಅವರಿಗೆ ಹೇಳುವುದಿಷ್ಟೆ- ಮೊದಲು ನಿಮಗೆ ಹೂಡಿಕೆಯಲ್ಲಿ ನಿಜಕ್ಕೂ ಆಸಕ್ತಿಯಿದೆಯೇ ಎನ್ನುವುದು ಖಾತ್ರಿಮಾಡಿಕೊಳ್ಳಿ. ಅನಂತರ ಆ ಬಗ್ಗೆ ಸಾಧ್ಯವಾದಷ್ಟೂ ತಿಳಿದುಕೊಳ್ಳಿ. ಅನಂತರ ಹೂಡಿಕೆ ಮಾಡಿ. ಎಲ್ಲರೂ ಮಾಡುತ್ತಿದ್ದಾರೆ ಎಂದು ನೀವೂ ಮಾಡಲು ಹೋಗಬೇಡಿ.
Related Articles
Advertisement
ಒಂದೆಡೆ ಇರಲಿ ಗಮನಒಂದು ವಿಷಯದತ್ತ ಗಮನಹರಿಸಿ. ನಮ್ಮಲ್ಲಿ ಎಲ್ಲರಿಗೂ ಹಲವು ರೀತಿಯ ಸೃಜನಶೀಲತೆಗಳು, ಕೌಶಲಗಳು ಇರುತ್ತವೆ. ಆದರೆ ನಾವು ಒಂದು ವಿಷಯದತ್ತ ಹೆಚ್ಚು ಗಮನಹರಿಸಬೇಕು. ಒಬ್ಬ ವ್ಯಕ್ತಿಯಲ್ಲಿ ಒಳ್ಳೆಯ ಕ್ರೀಡಾಪಟು ಆಗುವ, ಗಾಯಕ ನಾಗುವ, ಉದ್ಯಮಿಯಾಗುವ ಅಥವಾ ಡ್ಯಾನ್ಸರ್ ಆಗುವ ಕೌಶಲಗಳಿರಬಹುದು. ಆದರೆ ಆತ ಯಾವುದಾ ದರೊಂದನ್ನೇ ಆಯ್ಕೆ ಮಾಡಿಕೊಳ್ಳಬೇಕು. ಉಳಿದದ್ದನ್ನು ತ್ಯಾಗ ಮಾಡಲೇಬೇಕಾಗುತ್ತದೆ. ಎಲ್ಲವನ್ನೂ ಮಾಡುತ್ತೇನೆ ಎಂದು ಹೊರಟರೇ ಯಾವುದೂ ಆಗದೇ ಫಸ್ಟ್ರೇಟ್ ಆಗಬೇಕಾಗುತ್ತಷ್ಟೆ! ಈ ವಿಷಯವನ್ನು ಹಣದ ವಿಚಾರಕ್ಕೂ ಅನ್ವಯಿಸ ಬಹುದು. ಹಣವನ್ನು ಡೈವರ್ಸಿಫೈ ಮಾಡಬೇಕು. ಅಂದರೆ ಹತ್ತುಹಲವು ಕಡೆ ಹೂಡಬೇಕು ಎನ್ನುವ ಮಾತಿದೆ. ಆದರೆ ಈ ವಾದದ ಬಗ್ಗೆ ನನಗೆ ಚೂರು ಅಸಮಾಧಾನವಿದೆ. ಆದಾಗ್ಯೂ ನಮ್ಮ ಅಸೆಟ್ ಅನ್ನು ಮೂರ್ನಾಲ್ಕು ಕಡೆ ಹೂಡಿಕೆ ಮಾಡುವುದರಲ್ಲಿ ತಪ್ಪೇನೂ ಇಲ್ಲವಾದರೂ ಹಣವನ್ನು ಹತ್ತಾರು ಕಡೆಗಳಲ್ಲಿ ಹೂಡಿಕೆ ಮಾಡುತ್ತಾ ಹೋಗುವುದು ಸರಿಯಲ್ಲ. ಇದರರ್ಥ, ನಿಮಗೆ ನಿಮ್ಮ ಹಣ ಎಲ್ಲಿ ಬೆಳೆಯಬಲ್ಲದು ಎನ್ನುವ ಅರಿವಿಲ್ಲ ಎಂದಷ್ಟೇ ಆಗುತ್ತದೆ.
ಮನುಷ್ಯನಿಗೆ ಪ್ಲ್ರಾನ್ ಬಿ ಎನ್ನುವುದು ಇರಬೇಕು. ಆದರೆ ಪ್ಲ್ರಾನ್ ಸಿ, ಪ್ಲ್ರಾನ್ ಡಿ, ಪ್ಲ್ರಾನ್ ಇ ಇದ್ದರೆ, ಅಂದರೆ ಅತಿಯಾದ ಬ್ಯಾಕ್ ಅಪ್ ಪ್ಲ್ರಾನ್‌ಗಳು ಇವೆಯೆಂದರೆ ಆತನ ಮುಖ್ಯ ಪ್ಲ್ರಾನ್ ಗೆ ಬ್ಯಾಕ್ ಬೋನ್ ಇಲ್ಲ ಎಂದರ್ಥ. ಹೀಗೇ ಆಗುತ್ತಾ ಹೋದರೆ ಆತನ ಬದುಕು ಗೊಂದಲದ ಗೂಡಾಗುತ್ತದೆ ಎನ್ನುವ ಹಲವಾರು ಉದಾಹರಣೆಗಳನ್ನು ನಾನು ನೋಡಿದ್ದೇನೆ. ರಾತೋರಾತ್ರಿ ಯಶಸ್ಸು
ರಾತೋರಾತ್ರಿ ಯಶಸ್ಸು ಎನ್ನುವುದು ಅತ್ಯಂತ ಬಾಲಿಶ ಪರಿಕಲ್ಪನೆ. ಯಾವ ವ್ಯಕ್ತಿಯೂ ರಾತೋರಾತ್ರಿ ಯಶಸ್ವಿಯಾಗುವುದಿಲ್ಲ. ಯಶಸ್ಸಿಗಾಗಿ ಆತ ನೂರಾರು ರಾತ್ರಿ ನಿದ್ದೆಗೆಟ್ಟಿರುತ್ತಾನೆ. ಒಂದು ವಿಷಯದ ಮೇಲೆ ನಿಮ್ಮ ಗಮನ ಕೇಂದ್ರೀಕರಿಸಿ, ಅದರಲ್ಲಿ ಕೌಶಲ ವೃದ್ಧಿಸಿ ಕೊಳ್ಳುತ್ತಾ ಹೋದರೆ ಯಶಸ್ಸು ಖಂಡಿತ ಸಿಗುತ್ತದೆ (ನೀವು ಊಹಿಸಿದಷ್ಟು ದೊಡ್ಡದಾಗಿರಬೇಕು ಎಂದೇನೂ ಅಲ್ಲ). ಆದರೆ ಅದಕ್ಕಾಗಿ ತಾಳ್ಮೆ ಬಹಳ ಮುಖ್ಯ. ಪುಸ್ತಕಗಳನ್ನು ಓದಿ
ನೀವು ಯಾವುದೇ ಕ್ಷೇತ್ರದಲ್ಲಿರಿ, ನಿತ್ಯವೂ ಪುಸ್ತಕಗಳನ್ನು ಓದಿ. ನಾನು ಮೊದಲಿನಿಂದಲೂ ಹೇಳುತ್ತಾ ಬಂದಿದ್ದೇನೆ. ಪುಸ್ತಕಗಳಿಗಿರುವ ಶಕ್ತಿ ಟೆಲಿವಿಷನ್‌ಗೂ ಇಲ್ಲ, ಅಂತರ್ಜಾಲಕ್ಕೂ ಇಲ್ಲ. ನಾನು ಜೀವನದಲ್ಲಿ ನೋಡಿದ ಅತ್ಯಂತ ಯಶಸ್ವಿ ವ್ಯಕ್ತಿಗಳೆಲ್ಲರೂ ಓದಿನ ಹುಚ್ಚು ಇರುವವರು. ಅವರು ನಿರಂತರವಾಗಿ ಅಧ್ಯಯನದ ಮೂಲಕ ತಮ್ಮ ಜ್ಞಾನವನ್ನು ಶಾರ್ಪ್ ಹಾಗೂ ವಿಸ್ತಾರ ಮಾಡಿಕೊಳ್ಳುತ್ತಿರುತ್ತಾರೆ. ಇಲ್ಲ ಎನ್ನುವುದನ್ನು ಕಲಿಯಿರಿ
ಅನೇಕರು ಜೀವನದಲ್ಲಿ ಎಲ್ಲೂ ತಲುಪದಂಥ ಸ್ಥಿತಿಗೆ ತಲುಪಿದ್ದರೆ, ಅದಕ್ಕೆ ಅವರಲ್ಲಿನ ಈ ದೌರ್ಬಲ್ಯವೇ ಕಾರಣ. ಏಕೆಂದರೆ ಅನೇಕರಿಗೆ ಜೀವನದಲ್ಲಿ ಅತ್ಯಂತ ಸವಾಲಿನ ಸಂಗತಿ ಎಂದರೆ ಇಲ್ಲ-ಆಗಲ್ಲ ಎಂದು ಹೇಳುವುದಕ್ಕೆ ಬರದಿರುವುದು. ಎದುರಿನವರು ಏನನ್ನಾದರೂ ಕೇಳಿದಾಗ, ನಿಮ್ಮ ಬಳಿ ಸಮಯ ಇಲ್ಲವೆಂದರೆ, ಸಹಾಯ ಮಾಡಲು ಮನಸ್ಸು ಇಲ್ಲ ಎಂದರೆ ಧೈರ್ಯವಾಗಿ ಇಲ್ಲ ಎಂದು ಹೇಳಿಬಿಡಿ. ಹೂಂ ಎಂದು ಹೇಳಿ ಅನಂತರ ನೀವು ನಿಮ್ಮ ಅಮೂಲ್ಯ ಸಮಯವನ್ನು ಹಾಳುಮಾಡಿ ಕೊಳ್ಳಬೇಡಿ. ನೆನಪಿಡಿ, ಎಲ್ಲದಕ್ಕೂ ಹೂಂ ಎನ್ನುವವನು ತನ್ನ ಘನತೆಯನ್ನು ತಗ್ಗಿಸಿಕೊಳ್ಳುತ್ತಾ ಹೋಗುತ್ತಾ¤ನೆ. ನೋ ಎಂದು ಹೇಳುವ ಧೈರ್ಯವಂತನಿಗೆ ಜಗತ್ತಿನಲ್ಲಿ ಗೌರವ ಹೆಚ್ಚುತ್ತದೆ. ಕೌಶಲವನ್ನು ವೃದ್ಧಿಸಿಕೊಳ್ಳಿ
ಒಬ್ಬ ಮನುಷ್ಯನಿಗೆ ತಿನ್ನಲು ಮೀನು ಕೊಟ್ಟರೆ, ನೀವು ಒಂದೇ ದಿನ ಆತನ ಹೊಟ್ಟೆ ತುಂಬಿಸುತ್ತೀರಷ್ಟೇ. ಅದೇ, ಆತನಿಗೆ ಮೀನು ಹಿಡಿಯುವುದನ್ನು ಕಲಿಸಿಕೊಟ್ಟರೆ, ಜೀವನ ಪರ್ಯಂತ ಆತನ ಹೊಟ್ಟೆ ತುಂಬುತ್ತದೆ ಎನ್ನುವ ಮಾತಿದೆ. ಬದುಕಿನಲ್ಲಿ ಕೌಶಲ ಎನ್ನುವುದು ಎಷ್ಟು ಮುಖ್ಯ ಎನ್ನುವುದನ್ನು ಇದು ಸೂಚಿಸುತ್ತದೆ. ನೀವು ಯಾವುದೇ ಕ್ಷೇತ್ರದಲ್ಲಿರಿ, ದಿನಕ್ಕೆ ಎಷ್ಟು ಹೊತ್ತು ಆ ಕೆಲಸದಲ್ಲಿ ಶ್ರಮ ಹಾಕುತ್ತೀರಿ ಎನ್ನುವುದಕ್ಕಿಂತ ಮುಖ್ಯವಾಗಿ, ನೀವು ನಿತ್ಯವೂ ನಿಮ್ಮ ಕೌಶಲಗಳನ್ನು ಹೇಗೆ ಶಾರ್ಪ್ ಮಾಡಿಕೊಳ್ಳುತ್ತಾ ಹೋಗುತ್ತೀರಿ ಎನ್ನುವುದು ಮುಖ್ಯವಾಗುತ್ತದೆ. ಪ್ರತೀ ದಿನ ನಿಮ್ಮ ಕೌಶಲವನ್ನು ವೃದ್ಧಿಸುವಂಥ ಸಾಧ್ಯತೆಗಳನ್ನು ಹುಡುಕಿ, ಆಗ ನವ ಅವಕಾಶಗಳು ನಿಮ್ಮೆದುರು ತೆರೆದುಕೊಳ್ಳುತ್ತಾ ಹೋಗುತ್ತವೆ. ನಿಂತ ನೀರಾಗಬೇಡಿ. – ವಾರೆನ್ ಬಫೆಟ್, ಪ್ರಖ್ಯಾತ ಹೂಡಿಕೆದಾರ