Advertisement
ನಾಪತ್ತೆಯಾಗಿದ್ದ ಯುವಕಎಂಟು ವರ್ಷಗಳಿಂದ ಮೊಟ್ಟೆತ್ತಡ್ಕ ನಿವಾಸಿ ಲಲಿತಾ ನಾಯ್ಕ ಹಾಗೂ ಸಿಂಹವನ ಪಂಜಳ ನಿವಾಸಿ ಅಶೋಕ್ ಕುಮಾರ್ ಪ್ರೀತಿಸುತ್ತಿದ್ದರು. ಮದುವೆಗೆ ಹುಡುಗನ ಮನೆಯವರು ವಿರೋಧ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಹುಡುಗ ಮದುವೆಗೆ ನಿರಾಕರಿಸಿದ್ದು, ಒಂದು ವರ್ಷದಿಂದ ನಾಪತ್ತೆಯಾಗಿದ್ದ. ನೊಂದ ಯುವತಿ ದಲಿತ್ ಸೇವಾ ಸಮಿತಿಗೆ ದೂರು ನೀಡಿದ್ದರು.
ನಾಪತ್ತೆಯಾಗಿದ್ದ ಹುಡುಗನನ್ನು ಪತ್ತೆ ಹಚ್ಚಿದ ದಲಿತ್ ಸೇವಾ ಸಮಿತಿಯವರು ಆತನ ಮನವೊಲಿಸಿ ಸರಳವಾಗಿ ವಿವಾಹ ನೆರವೇರಿಸಿಕೊಟ್ಟಿದ್ದಾರೆ. ಇದು ದಲಿತ್ ಸೇವಾ ಸಮಿತಿ ವತಿಯಿಂದ ನಡೆದ 11ನೇ ವಿವಾಹವಾಗಿದೆ. ದಲಿತ್ ಸೇವಾ ಸಮಿತಿಯ ಪದಾಧಿಕಾರಿಗಳಾದ ರಾಜು ಹೊಸ್ಮಠ, ಜಿಲ್ಲಾ ಉಪಾಧ್ಯಕ್ಷ ಪ್ರಸಾದ್ ಬೊಳ್ಮಾರ್, ಧನಂಜಯ ಬಲ್ನಾಡ್, ಮೋಹನ ನಾಯ್ಕ, ಸಾಂತಪ್ಪ ನರಿಮೊಗರು, ಮನೋಹರ್ ಕೋಡಿಜಾಲ್, ಲೋಕಯ್ಯ ನಾಯ್ಕ, ಲೋಕೇಶ್ ತೆಂಕಿಲ, ಅಣ್ಣಪ್ಪ ಕಾರೆಕ್ಕಾಡು, ಕೇಶವ ಪಡೀಲ್, ವೇದಾಕ್ಷಿ ಕುಂಬುರ್ಗ ಉಪಸ್ಥಿತರಿದ್ದರು.