Advertisement
1. ಟೆಲಿಸ್ಕೋಪ್, ಮಿಲಿಟರಿ ಕಂಪಾಸ್, ಥರ್ಮಾಮೀಟರ್‌ನ ಸಂಶೋಧಕ ಗೆಲಿಲಿಯೋ ಗೆಲಿಲಿ ಇಟಲಿ ದೇಶದವನು.2. ಗೆಲಿಲಿಯೋನನ್ನು ಆಧುನಿಕ ವಿಜ್ಞಾನದ ಪಿತಾಮಹ ಎನ್ನುತ್ತಾರೆ.
3. ಗೆಲಿಲಿಯೋ ತಂದೆ ವಿನ್ಸೆಝೋ ಗೆಲಿಲಿ, ಪ್ರಸಿದ್ಧ ಸಂಗೀತಗಾರರಾಗಿದ್ದರು.
4. ಗುರುಗ್ರಹದ ನಾಲ್ಕು ಚಂದ್ರಗಳನ್ನು ಮೊದಲು ಗುರುತಿಸಿದ್ದು ಗೆಲಿಲಿಯೋ. ಅವುಗಳನ್ನು “ಗೆಲಿಲಿಯನ್ ಮೂನ್ಸ್’ ಎಂದೇ ಗುರುತಿಸಲಾಗುತ್ತದೆ.
5. ಅಪ್ಪನ ಆಸೆಯಂತೆ ಪೀಸಾ ವಿವಿಯಲ್ಲಿ, ವೈದ್ಯಕೀಯ ಶಾಸ್ತ್ರ ಓದುತ್ತಿದ್ದಾಗ ಗೆಲಿಲಿಯೋ, ಭೌತಶಾಸ್ತ್ರ ಮತ್ತು ಗಣಿತದಲ್ಲಿ ಹೆಚ್ಚಿನ ಆಸಕ್ತಿಯನ್ನು ಕಂಡುಕೊಂಡ.
6. ಜೀವಿತದ ಕೊನೆಯ ವರ್ಷಗಳಲ್ಲಿ ಗೆಲಿಲಿಯೋ ಕುರುಡನಾಗಿದ್ದ. ತನ್ನದೇ ಆವಿಷ್ಕಾರವಾದ ಟೆಲಿಸ್ಕೋಪ್‌ನಿಂದ ಸೂರ್ಯನನ್ನು ಬಹಳ ವರ್ಷಗಳ ಕಾಲ ನೋಡಿದ್ದುದೇ ಅಂಧತ್ವಕ್ಕೆ ಕಾರಣ ಎನ್ನುಲಾಗುತ್ತದೆ.
7. ರೋಮನ್ ಕ್ಯಾಥೋಲಿಕ್ ಚರ್ಚ್ ಜೊತೆಗೆ ವಿರೋಧ ಕಟ್ಟಿಕೊಂಡಿದ್ದ ಆತನನ್ನು ಎಂಟು ವರ್ಷಗಳ ಕಾಲ (1634-1642) ಗೃಹಬಂಧನದಲ್ಲಿ ಇಡಲಾಗಿತ್ತು. ಆಗ ಗೆಲಿಲಿಯೊ “ಟು ನ್ಯೂ ಸೈನ್ಸ್’ ಪುಸ್ತಕ ಬರೆದ.
8. ಪೋಪ್ ಹಾಗೂ ಚರ್ಚ್‌ಗಳ ಬಗ್ಗೆ ಗೆಲಿಲಿಯೋಗೆ ಭಿನ್ನಾಭಿಪ್ರಾಯ ಇದ್ದರೂ ಆತನ ಹೆಣ್ಣು ಮಕ್ಕಳಿಬ್ಬರೂ ನನ್ ಗಳಾದರು. (ಕ್ರೈಸ್ತ ಸನ್ಯಾಸಿನಿ)
9. ಭೂಮಿ ಸೂರ್ಯನ ಸುತ್ತ ಸುತ್ತುತ್ತದೆ ಎಂದ ವಿಜ್ಞಾನಿ ಕೋಪರ್ನಿಕಸ್‌ನ ಮಾತನ್ನು ಗೆಲಿಲಿಯೋ ಅನುಮೋದಿಸಿದ್ದ.
10. ಆಲ್ಬರ್ಟ್ ಐನ್‌ಸ್ಟೈನ್‌ನ ನೆಚ್ಚಿನ ವಿಜ್ಞಾನಿ ಗೆಲಿಲಿಯೋ ಆಗಿದ್ದ.