Advertisement

ಬಡವರಿಗಾಗಿ ಸರಳ ಗೃಹ: ಮೋದಿ

12:40 AM Jan 02, 2021 | Team Udayavani |

ನವದೆಹಲಿ: “ಸ್ವಂತ ಮನೆ ಹೊಂದುವುದು ಪ್ರತಿಯೊಬ್ಬರ ಕನಸು. ಆ ಕನಸನ್ನು ಕೇಂದ್ರ ಸರ್ಕಾರ, ಸರಳ ಗೃಹ ಯೋಜನೆ ಮೂಲಕ ಸಾಕಾರಗೊಳಿಸಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

Advertisement

“ಸರಳ ಗೃಹ ಯೋಜನೆ’ಗೆ ವಿಡಿಯೊ ಕಾನ್ಫರೆನ್ಸ್‌ ಮೂಲಕ ಶುಕ್ರವಾರ ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಿ, “ಶ್ರಮಪಟ್ಟು ದುಡಿಯುವ ಶ್ರೀಸಾಮಾನ್ಯನಿಗೆ ಸ್ವಂತ ಮನೆ ನಿರ್ಮಿಸುವ ಕುರಿತು 6 ವರ್ಷಗಳಿಂದಲೇ ಯೋಜನೆ ಸಿದ್ಧಪಡಿಸಿದ್ದೆವು’ ಎಂದು ತಿಳಿಸಿದ್ದಾರೆ.

12 ತಿಂಗಳಲ್ಲಿ ಸಾವಿರ ಮನೆ!: “ಕೇವಲ 12 ತಿಂಗಳಲ್ಲಿ 1 ಸಾವಿರ ಮನೆ ನಿರ್ಮಿಸುವ ಯೋಜನೆ ನಮ್ಮ ಮುಂದಿದೆ. ಈ ಪ್ರಕಾರ, ಪ್ರತಿದಿನ 2.5ರಿಂದ 3 ಮನೆಗಳ ಕಾಮಗಾರಿ ಪೂರ್ಣಗೊಳ್ಳಲಿದೆ. ಮುಂದಿನ ವರ್ಷದ ಗಣರಾಜ್ಯೋತ್ಸವದೊಳಗೆ ಯೋಜನೆ ಪೂರ್ಣಗೊಳ್ಳುವ ಗುರಿ ಇಟ್ಟುಕೊಂಡಿದ್ದೇವೆ’ ಎಂದು ತಿಳಿಸಿದರು.

“ದೇಶದ 12 ನಗರಗಳಲ್ಲಿ ಸಾವಿರ ಮನೆಗಳು ತಲೆಯೆತ್ತಲಿವೆ. ಈ 6 ಯೋಜನೆಗಳೂ ದೇಶದಲ್ಲಿನ ಗೃಹನಿರ್ಮಾಣಕ್ಕೆ ದಿಕ್ಸೂಚಿಯಾಗಲಿವೆ. ಬಡ ಮತ್ತು ಮಧ್ಯಮ ವರ್ಗದವರಿಗೆ ಮನೆ ನಿರ್ಮಿಸಿಕೊಡುವುದೇ ಸರ್ಕಾರದ ಮುಖ್ಯ ಉದ್ದೇಶವಾಗಿದೆ’ ಎಂದು ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next