ಚಿಂತಾಮಣಿ: ಕೋವಿಡ್ ಕಾರಣದಿಂದ ಗಣೇಶ ಹಬ್ಬವನ್ನು ಸರಳವಾಗಿ ಆಚರಣೆ ಮಾಡಬೇಕು ಎಂದು ತಹಶೀಲ್ದಾರ್ ಡಿ. ಹನುಮಂತರಾಯಪ್ಪ ತಿಳಿಸಿದರು.
ಈ ಸಂಬಂಧ ತಾಲೂಕು ಕಚೇರಿಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಕೋವಿಡ್ ಜಗತ್ತನ್ನು ಕಾಡುತ್ತಿದೆ. ಇದನ್ನು ನಿಯಂತ್ರಿಸುವ ಸಲುವಾಗಿ ಹಾಗೂ ಧಾರ್ಮಿಕ ಆಚರಣೆಗೂ ಧಕ್ಕೆ ಬಾರದಂತೆ ಸರಳವಾಗಿ ಹಬ್ಬ ಆಚರಣೆ ಮಾಡಲು ಅವಕಾಶವನ್ನುಕಲ್ಪಿಸಿಕೊಡಲಾಗಿದೆ. ಈ ನಿಟ್ಟಿನಲ್ಲಿ ಸಾಮೂ ಹಿಕ ಗಣೇಶೋತ್ಸವಗಳಲ್ಲಿ 4 ಅಡಿ ಮೀರದಂತೆ, ಮನೆಗಳಲ್ಲಿ 2 ಅಡಿ ಮೀರದಂತೆ ಗಣಪತಿ ಪ್ರತಿಷ್ಠಾಪಿಸಬೇಕಿದೆ ಎಂದರು.
ಅಲ್ಲದೆ, ಗಣಪತಿ ಪ್ರತಿಷ್ಠಾಪನೆಗೆ ಪೊಲೀಸ್ ಅನುಮತಿ ಕಡ್ಡಾಯವಾಗಿದೆ. ಕೇವಲ ಒಂದು ದಿನ ಮಾತ್ರ ಪ್ರತಿಷ್ಠಾಪಿಸಬೇಕು, ಸಾಮೂಹಿಕ ವಿಸರ್ಜನೆಗೆ ಅವಕಾಶವಿಲ್ಲ, ಡಿಜೆ ಮತ್ತಿತರೆ ವಿಜೃಂಭಣೆಯ ಆಚರಣೆಗೆ ಅವಕಾಶವಿಲ್ಲ ಎಂದು ತಿಳಿಸಿದರು. ನಗರ ಠಾಣೆಯ ಸಿಐ ಆನಂದ್ ಕುಮಾರ್ ಮಾತನಾಡಿ, ಗಣಪತಿ ಪ್ರತಿ ಷ್ಠಾಪನೆಗೆ ಸ್ಥಳೀಯ ನಗರ ಸಭೆ, ಬೆಸ್ಕಾಂ ಮತ್ತು ಪೊಲೀಸ್ ಠಾಣೆ ಅನುಮತಿ ಯನ್ನು ಕಡ್ಡಾಯವಾಗಿ ಪಡೆದುಕೊಳ್ಳ ಬೇಕು. ಯಾವುದೆ ರೀತಿಯ ಮನ ರಂಜನಾ ಕಾರ್ಯ ಕ್ರಮಗಳಿಗೆ ಅನುಮತಿ ಇರುವುದಿಲ್ಲ. ಮುಖ್ಯವಾಗಿ ಗಣಪತಿ ಪ್ರತಿಷ್ಠಾಪನೆಗೆ ಪೂರ್ವಾನುಮತಿ ಕಡ್ಡಾಯ, ಯಾವುದೇ ಅಹಿತಕರ ಘಟನೆ ಗಳಿಗೆ ಅವಕಾಶ ಇರುವುದಿಲ್ಲ ಎಂದು ತಿಳಿಸಿದರು. ಶಿರಸ್ತೇದಾರ್ ಶೋಭಾ, ಪೌರಾಯುಕ್ತ ಉಮಾಶಂಕರ್, ಗೋಪಾಲಕೃಷ್ಣ ಉಪಸ್ಥಿತರಿದ್ದರು.
ಕೋವಿಡ್ ಚಿಂತಾಮಣಿಯಲ್ಲಿ ಗಣೇಶ ಮೂರ್ತಿಗಿಲ್ಲ ಬೇಡಿಕೆ : ಕೋವಿಡ್ ಹಿನ್ನೆಲೆಯಲ್ಲಿ ಸರ್ಕಾರದ ಹಲವು ಷರತ್ತುಗಳಿಂದ ಈ ಬಾರಿ ನಗರದಲ್ಲಿ ಗೌರಿ ಗಣೇಶ ಮೂರ್ತಿ ಗಳಿಗೆ ಬೇಡಿಕೆ ಕಡಿಮೆ ಆಗಿದೆ. ಇದರಿಂದ ತಯಾರಕರು, ಮಾರಾಟಗಾರರು ಕಂಗಾಲಾಗಿದ್ದಾರೆ. ನಗರ ಹಾಗೂ ತಾಲೂಕಿನಲ್ಲಿ ಪ್ರತಿ ವರ್ಷ ಗಣೇಶನ ಹಬ್ಬವನ್ನು ಸಂಭ್ರಮ ದಿಂದ ಆಚರಣೆ ಮಾಡುತ್ತಿದ್ದರು. ಆದರೆ, ಈ ಬಾರಿ ಕೋವಿಡ್ ಹಿನ್ನೆಲೆಯಲ್ಲಿ ಗಣೇಶನ ಮೂರ್ತಿಗಳ ಪೂಜಿಸಿ, ವಿಸರ್ಜನೆ ಮಾಡಲು ಹಲವು ಕಟ್ಟು ನಿಟ್ಟಿನ ಷರತ್ತು ಗಳನ್ನು ವಿಧಿಸಲಾಗಿದೆ. ಈ ಹಿನ್ನೆಲೆಯಲ್ಲಿ ಜನತೆ ಗೌರಿ ಗಣೇಶನ ಹಬ್ಬವನ್ನು ಸರಳವಾಗಿ ಆಚರಣೆ ಮಾಡು ವುದರ ಜೊತೆಗೆ, ಗಣೇಶನ ಮೂರ್ತಿ ಗಳನ್ನು ಕೂರಿಸಲು ಹಿಂದೇಟು ಹಾಕುತ್ತಿ ದ್ದಾರೆ. ಈ ಕಾರಣದಿಂದಾಗಿ ಮಾರುಕಟ್ಟೆಗೆ ಚಿಕ್ಕ ಗಣೇಶನ ಮೂರ್ತಿಗಳು ಮಾರಾಟಕ್ಕೆ ಇಟ್ಟಿದ್ದರೂ ಕೇಳುವವರ ಸಂಖ್ಯೆ ಕಡಿಮೆ ಇದೆ. ಇನ್ನು ಗಣಪನ ಮೂರ್ತಿ ಮಾರಾಟ ಗಾರರಿಗೂ ಹಾಕಿದ ಬಂಡವಾಳ ಬಾರದೇ ಕಂಗಾಲಾಗಿದ್ದಾರೆ.