Advertisement

ಸರಳ ದಸರಾ ಆಚರಣೆ: ಸೋಮಣ್ಣ ಸಲಹೆ

01:09 PM Oct 05, 2020 | Suhan S |

ಮಡಿಕೇರಿ ಅ. 4: ಕೋವಿಡ್‌- 19 ಹಿನ್ನೆಲೆ ಸರಳ ಹಾಗೂ ಸಾಂಪ್ರದಾಯಿಕವಾಗಿ ಮಡಿಕೇರಿ ಮತ್ತು ಗೋಣಿಕೊಪ್ಪ ದಸರಾ ಆಚರಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಮನವಿ ಮಾಡಿದ್ದಾರೆ.

Advertisement

ಮಡಿಕೇರಿಯಲ್ಲಿ ದಸರಾ ಸಮಿತಿ ಪದಾಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಭೆ ನಡೆಸಿದ ಅವರು ಪ್ರಸ್ತುತ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು, ಸೂಕ್ಷ್ಮತೆಯಿಂದ ಪ್ರತಿಯೊಬ್ಬರೂ ಕಾರ್ಯ ನಿರ್ವಹಿಸ ಬೇಕಿದೆ. ಸಂಪ್ರದಾಯ ಸಂಬಂಧಿಸಿದಂತೆ ಯಾವುದೇ ರೀತಿಯ ಅಪಚಾರ ಅಥವಾ ಲೋಪ ಉಂಟಾಗದಂತೆ ದಸರಾ ಆಚರಿಸಬೇಕು ಎಂದರು.

ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ ಮಡಿಕೇರಿ ದಸರಾ, ಮೈಸೂರು ದಸರಾದಂತೆ ವಿಜೃಂಭ ಣೆಯಿಂದ ನಡೆಯುತ್ತದೆ. ನಾಡ ಹಬ್ಬವಾಗಿ ಜಿಲ್ಲೆಯಲ್ಲಿ ಆಚರಿಸು ತ್ತಿದ್ದೆವು. ಆದರೆ ಈ ಬಾರಿ ಕೋವಿಡ್‌- 19 ಹಿನ್ನೆಲೆಯಲ್ಲಿ ದಸರಾ ಆಚರಣೆಯನ್ನು ಸಾಂಪ್ರದಾಯಿಕವಾಗಿ ಆಚರಿಸು ವಂತಾಗಲಿ ಎಂದರು. ಕರಗ ಉತ್ಸವಕ್ಕೆ   ಧಕ್ಕೆ ಆಗದಂತೆ ಶಾಸ್ತ್ರೋಕ್ತವಾಗಿ ನಡೆಯ ಬೇಕು. ದಸರಾದಂದು ಪಿಕ್‌ಅಪ್‌ ಜೀಪ್‌ ಬಳಸಿ ಕಳಶ ತೆಗೆದುಕೊಂಡು ಹೋಗುವಂತಾಗಲಿ ಎಂದರು.

ಶಾಸಕ ಅಪ್ಪಚ್ಚು ರಂಜನ್‌ ಮಾತನಾಡಿ, ಕೋವಿಡ್‌-19 ಹಿನ್ನೆಯಲ್ಲಿ ದಸರಾ ಆಚರಣೆ  ಸಾಂಪ್ರದಾಯಿಕ ಆಚರಣೆಗೆ ಮಾತ್ರವೇ ಸೀಮಿತವಾಗಲಿ.  ಈ ಸಂದರ್ಭ 144 ಸೆಕ್ಷನ್‌ ಜಾರಿ ಮಾಡಿ ದರೆ ಒಳಿತು  ಎಂದರು. ವಿಧಾನ ಪರಿಷತ್‌ ಸದಸ್ಯರಾದ ಎಂ.ಪಿ. ಸುನಿಲ್‌ ಸುಬ್ರ ಮಣಿ, ವೀಣಾ ಅಚ್ಚಯ್ಯ, ಜಿ.ಪಂ. ಅಧ್ಯಕ್ಷ ಬಿ.ಎ.ಹರೀಶ್‌, ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್‌, ಸಂಸದ ಪ್ರತಾಪ್‌ ಸಿಂಹ, ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಭನ್ವರ್‌ಸಿಂಗ್‌ ಮೀನಾ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next