ಚಿಕ್ಕಬಳ್ಳಾಪುರ: ಜಗತ್ತಿನ ಕಲ್ಯಾಣಕ್ಕಾಗಿ ಅವತರಿಸಿದ ಕೊನೆಯ ಪೈಗಂಬರ್ ಮೊಹ್ಮದ್(ಸಅಸ) ಅವರ ಹುಟ್ಟು ಹಬ್ಬವನ್ನು ಚಿಕ್ಕಬಳ್ಳಾಪುರ ಜಿಲ್ಲಾದ್ಯಂತ ಮುಸ್ಲಿಂ ಸಮುದಾಯದವರು ಸರಳವಾಗಿ ಆಚರಿಸಿದರು.
ರಾಜ್ಯದಲ್ಲಿ ಕೋವಿಡ್ ಸೋಂಕು ನಿಯಂತ್ರಿಸುವಸಲುವಾಗಿ ಸರ್ಕಾರ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಲು ಮತ್ತು ಮೆರವಣಿಗೆ ನಡೆಸಲು ಅವಕಾಶ ನಿರಾಕರಿಸಿದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ನೀಡಿರುವ ನಿರ್ದೇಶನ ಪಾಲಿಸುವ ಮೂಲಕ ಪ್ರವಾದಿಮೊಹ್ಮದ್ ಪೈಗಂಬರ್ ಅವರ ಹುಟ್ಟುಹಬ್ಬ ಈದ್ ಮಿಲಾದ್ ಉಲ್ ನಬೀ(ಸಅಸ) ಶ್ರದ್ಧಾಭಕ್ತಿಯಿಂದ ಮನೆ ಮತ್ತು ಮಸೀದಿಗಳಲ್ಲಿ ಆಚರಿಸಿದರು.
ಸಂಪ್ರದಾಯದಂತೆ ಜಿಲ್ಲಾದ್ಯಂತ ನಗರ ಪ್ರದೇಶ ಗಳಲ್ಲಿ ಹಸಿರು ಬಣ್ಣದ ಧ್ವಜಗಳೊಂದಿಗೆ ಮತ್ತು ವಾಹನಗಳನ್ನು ಶೃಂಗರಿಸಿಕೊಂಡು ಮೆರವಣಿಗೆ ನಡೆಸಿ ಬಳಿಕ ಈದ್ಗಾ ಮೈದಾನದಲ್ಲಿ ಸಾಮೂಹಿಕ ವಾಗಿ ಪ್ರಾರ್ಥನೆ ಸಲ್ಲಿಸುವ ಮೂಲಕ ಈದ್ ಮಿಲಾದ್ ಹಬ್ಬವನ್ನು ಆಚರಿಸುತ್ತಿದ್ದರು. ಆದರೆ ಈ ವರ್ಷ ಕೋವಿಡ್ ಆತಂಕದಿಂದ ಎಲ್ಲಾ ಆಚರಣೆ ಗಳಿಗೆ ಬ್ರೇಕ್ ಬಿದ್ದಿದೆ. ಮೆರವಣಿಗೆ ಮತ್ತು ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಲು ನಿಬಂಧಿಸಿ ದ್ದರಿಂದ ಮನೆ ಮತ್ತು ಮಸೀದಿಗಳಲ್ಲಿ
ಪ್ರಾರ್ಥನೆ ಸಲ್ಲಿಸಿದರು.
ಬ್ಯಾನರ್, ದೀಪಾಲಂಕಾರ: ಈದ್ ಮಿಲಾದ್ ಉಲ್ ನಬೀ ಅಂಗವಾಗಿ ಮಸೀದಿಗಳಿಗೆ ವಿದ್ಯುತ್ ದೀಪಾಲಂಕಾರ ಮಾಡಿ ಕಂಗೊಳಿಸಲಾಗಿದೆ. ನಗರದ ಪ್ರಮುಖ ಬೀದಿಗಳನ್ನು ಬಂಟಿಂಗ್ಸ್ ಮತ್ತು ಬ್ಯಾನರ್‌ಗಳಿಂದ ಶೃಂಗರಿಸಲಾಗಿದೆ. ಸಮಾಜದ ಯುವಕರು ತಮ್ಮ ತಮ್ಮ ವಾಹನಗಳಿಗೆ ಹಸಿರು ಬಣ್ಣದ ಧ್ವಜಗಳಿಂದ ಶೃಂಗಾರ ಮಾಡಿಕೊಂಡಿದ್ದಾರೆ.
ಇನ್ನೂ ಕೆಲವರು ಆಟೋ ಮತ್ತು ಕಾರುಗಳನ್ನು ಅಲಂಕರಿಸಿದ್ದಾರೆ. ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿ ಸಲು ಬರುವ ಮುಸ್ಲಿಂ ಸಮಾಜದವರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸೂಚನೆ ನೀಡಿ ಮಸೀದಿಯ ಹೊರಭಾಗದಲ್ಲಿ ಸ್ಯಾನಿಟೈಸರ್ ವ್ಯವಸ್ಥೆ ಮಾಡಿದ್ದು ವಿಶೇಷವಾಗಿತ್ತು.
ಜಿಲ್ಲೆಯ ಶಿಡ್ಲಘಟ್ಟ ನಗರದ ಆಮೀರಿಯಾ ಮಿಲಾದ್ ಸಮಿತಿ ಸದಸ್ಯರು ಅಮೀರ್ ದರ್ಗಾ ಬಳಿ ಮದೀನಾ ಮುನವರಾದ ಗುಮ್ಮಟದ ಮಾದರಿಯ ಸ್ತಬ್ದಚಿತ್ರ ಸಿದ್ಧಗೊಳಿಸಿದ್ದರು. ಯುವಕರು ಅದರ ಮುಂದೆ ನಿಂತು ಫೋಟೊ ತೆಗೆದುಕೊಳ್ಳು ತ್ತಿದ್ದು ವಿಶೇಷವಾಗಿತ್ತು. ಈ ಸಮಿತಿಯ ಸದಸ್ಯರು ಪ್ರವಾದಿ ಅವರ ಹೆಸರಿನಲ್ಲಿ ವಿಶೇಷ ಸೇವಾ ಕಾರ್ಯ ನಡೆಸಿ ಸಿಹಿ ಹಂಚಿಕೆ ಮಾಡಿದರು.