ಸುಪ್ರೀಂಕೋರ್ಟ್ ಫೆಬ್ರವರಿಯಲ್ಲಿ ನೀಡಿರುವ ಆದೇಶದನ್ವಯ ಕೇಂದ್ರ ಸರಕಾರವು ಸಾರ್ವಜನಿಕರಿಗೆ ಈ ಸೂಚನೆ ನೀಡಿದೆ ಎಂದು ಮೂಲಗಳು ತಿಳಿಸಿವೆ. ಆಧಾರ್ ಹಾಗೂ ಮೊಬೈಲ್ ನಂಬರ್ ಸಂಯೋಜನೆ ಮಾಡಿಕೊಳ್ಳುವ (ಲಿಂಕ್) ಪ್ರಕ್ರಿಯೆಗೆ 2018ರ ಫೆಬ್ರವರಿಯ ಗಡುವು ವಿಧಿಸಲಾಗಿದೆ. ಲಿಂಕ್ ಆಗದೇ ಇದ್ದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಖಂಡತುಂಡವಾಗಿ ಹೇಳಿದೆ. ಕ್ರಿಮಿನಲ್, ವಂಚನೆ ಹಾಗೂ ಭಯೋತ್ಪಾದನಾ ಚಟುವಟಿಕೆಗಳ ಆರೋಪಿಗಳನ್ನು ಪತ್ತೆ ಹಚ್ಚಲು ಸುಲಭವಾಗುವಂತೆ ಈ ಕ್ರಮ ಕೈಗೊಳ್ಳುವಂತೆ ಸುಪ್ರೀಂ ಕೋರ್ಟ್ ಆದೇಶಿಸಿತ್ತು.
Advertisement
ಸುಪ್ರೀಂನ ಈ ಆದೇಶವನ್ನಾಧರಿಸಿ ಗ್ರಾಹಕರಿಗೆ ಈ ಕುರಿತು ಸೂಚನೆ ನೀಡುವಂತೆ ಕೇಂದ್ರ ಸರಕಾರ ಈಗಾಗಲೇ ಟೆಲಿಕಾಂ ಕಂಪೆನಿಗಳಿಗೆ ನಿರ್ದೇಶಿಸಿದೆ. ಇ-ಮೇಲ್, ಮೆಸೇಜ್ ಅಥವಾ ಜಾಹೀರಾತುಗಳನ್ನು ನೀಡುವ ಮೂಲಕ ಗ್ರಾಹಕರಿಗೆ ಮಾಹಿತಿ ನೀಡಿ ಎಂದಿದೆ.