ಶಿರಸಿ: ಭಾರತೀಯ ಅಥ್ಲೇಟಿಕ್ ಫೇಡರೇಶನ್ ಆಶ್ರಯದಲ್ಲಿ ಭಾನುವಾರ ತಮಿಳುನಾಡಿನ ತಿರುವನ್ನಮಲದಲ್ಲಿ ನಡೆದ 21 ನೇ ರಾಷ್ಟ್ರೀಯ ಅಥ್ಲೇಟಿಕ್ ಕ್ರೀಡಾಕೂಟದಲ್ಲಿ ಶಿರಸಿಯ ರಕ್ಷಿತ್ ರವೀಂದ್ರ ನಾಯ್ಕ 400 ಮೀ ಹರ್ಡಲ್ಸ್ ನಲ್ಲಿ ಬೆಳ್ಳಿಪದಕ ವಿಜೇತರಾಗಿದ್ದಾರೆ.
400 ಮೀ.ಹರ್ಡಲ್ಸ್ ಅನ್ನು 52.51 ಸೆಕೆಂಡ್ ನಲ್ಲಿ ಪೂರ್ತಿ ಗೊಳಿಸುವ ಮೂಲಕ ನಲ್ಲಿ ರಕ್ಷಿತ್ ಸಾಧನೆ ಮಾಡಿದ್ದಾನೆ.
ರಕ್ಷಿತ್ ಬೆಂಗಳೂರಿನಲ್ಲಿ ಕೇಂದ್ರ ಸರಕಾರದ ಅಧೀನದ ರಾಷ್ಟ್ರೀಯ ಕ್ರೀಡಾ ಪ್ರಾಧಿಕಾರದಲ್ಲಿ ಅಂತರಾಷ್ಟ್ರೀಯ ತರಬೇತುದಾರರಾದ ಅಶ್ವಿನಿ ಅಕ್ಕುಂಜಿ ಅವರಲ್ಲಿ ತರಬೇತಿ ಪಡೆದುಕೊಳ್ಳುತ್ತಿದ್ದಾನೆ.
ಈ ಹಿಂದೆಯೂ ರಾಜ್ಯ ಮತ್ತು ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಬಹುಮಾನ ಪಡೆದು ಗಮನ ಸೆಳೆದಿದ್ದ ರಕ್ಷಿತ್ ಪ್ರಸ್ತುತ ಬೆಂಗಳೂರಿನ ಪ್ರತಿಷ್ಠಿತ ಕೆಎಲ್ ಇ ವಾಣಿಜ್ಯ ಮಹಾ ವಿದ್ಯಾಲಯದಲ್ಲಿ ಬಿಕಾಂ ಪ್ರಥಮ ವರ್ಷ ಓದುತ್ತಿದ್ದಾನೆ. ಈತ ಅರಣ್ಯ ಅತಿಕ್ರಮಣದಾರರ ಪರ ಹೋರಾಟಗಾರ ಏ.ರವೀಂದ್ರ ನಾಯ್ಕ, ಉಪನ್ಯಾಸಕಿ ಸವಿತಾ ನಾಯ್ಕ ಅವರ ಪುತ್ರ.
ಇದನ್ನೂ ಓದಿ: ರಾಜಸ್ಥಾನ CM ʻರಾವಣʼ ಎಂದಿದ್ದ ಕೇಂದ್ರ ಸಚಿವನ ವಿರುದ್ಧ FIR..!