Advertisement
ಹೊಸ ಜಿಲ್ಲೆಯ ಆಡಳಿತ ಚುಕ್ಕಾಣಿ ಹಿಡಿದದ್ದು ಮಹಿಳಾ ಸಾರಥಿಗಳು ಎಂದರೆ ಅದೊಂದು ವಿಶೇಷವೇ ಸರಿ. ಹೊಸ ಜಿಲ್ಲೆ ರೂಪುಗೊಂಡು ಅದನ್ನು ಮುನ್ನಡೆಸುವುದು ಸಾಮಾನ್ಯ ವಿಷಯವಲ್ಲ. ಅಂಥ ಸಮಯದಲ್ಲಿ ಆಡಳಿತಾತ್ಮಕ ಮತ್ತು ಕಾನೂನು ಸುವ್ಯವಸ್ಥೆಯ ಸವಾಲನ್ನು ಸಮರ್ಥವಾಗಿ ಮುನ್ನಡೆಸಿದವರು ಅಂದಿನ ಜಿಲ್ಲಾಧಿಕಾರಿಯಗಿದ್ದ ಡಾ| ಕಲ್ಪನಾ ಗೋಪಾಲನ್ ಮತ್ತು ಸವಿತಾ ಹಂಡೆ.
Related Articles
Advertisement
ದಂಧೆಕೋರರಿಗೆ ಬಿಸಿಮುಟ್ಟಿಸಿದ್ದ ಎಸ್‌ಪಿ
1990ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿದ್ದ ಸವಿತಾ ಹಂಡೆ ಅವರು ಮಹಾರಾಷ್ಟ್ರ ಮೂಲದವರು. ಕರ್ನಾಟಕ ಕೇಡರ್‌ನ ಐಪಿಎಸ್ ಅಧಿಕಾರಿಯಾಗಿ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸೇವೆ ಸಲ್ಲಿಸಿದ್ದರು. ಉಡುಪಿ ಜಿಲೆಯಲ್ಲಿ ಅವರು ಎಸ್‌ಪಿ ಆದ ಮೇಲೆ ಜನಸ್ನೇಹಿ ಪೊಲೀಸ್ ವ್ಯವಸ್ಥೆ ರೂಪಿಸಲು ಶ್ರಮಿಸಿದರು. ಜಿಲ್ಲೆಯಲ್ಲಿ ಕ್ರೈಂ ರೇಟ್ ಕಡಿಮೆ ಇದ್ದರೂ ಜೂಜಾಟ, ಮಟ್ಕಾ ಸಹಿತ ಕೆಲವು ಅಕ್ರಮ ಚಟುವಟಿಕೆಗಳು ಹೆಚ್ಚಿದ್ದವು. ಮುಂಬಯಿ ಭೂಗತ ಜಗತ್ತು ಮತ್ತು ಉಡುಪಿ ಸಂಪರ್ಕವಿರುವ ಹಲವು ಅಕ್ರಮ ಚಟುವಟಿಕೆಗಳ ವಿರುದ್ದ ಕಠಿನ ಕ್ರಮ ತೆಗೆದುಕೊಂಡಿದ್ದರು. ಜಿಲ್ಲೆಯ ಕುಖ್ಯಾತ ಭೂಗತ ಪಾತಕಿಯನ್ನು ಮನೆಗೆ ನುಗ್ಗಿ ಅರೆಸ್ಟ್ ಮಾಡಿದ್ದ ಅವರ ಧೈರ್ಯಕ್ಕೆ ಜನತೆ ಬೆರಗಾಗಿದ್ದರು. ಮಟ್ಕಾ ದಂಧೆ ಹಾವಳಿಗೆ ವಿಶೇಷ ಕಾರ್ಯಾಚರಣೆ ಮೂಲಕ ಬಿಸಿ ಮುಟ್ಟಿಸಿದ್ದ ಅವರು ಅಕ್ರಮ ದಂಧೆಕೋರರಿಗೆ ಸಿಂಹಿಣಿಯಾಗಿದ್ದರು. ಅನಂತರ ಜಿಲ್ಲೆಯಿಂದ ವರ್ಗಾವಣೆಗೊಂಡ ಅವರು ಕಾಡುಗಳ್ಳ ವೀರಪ್ಪನ್ ಸೆರೆ ಹಿಡಿ ಯುವ ಮಹತ್ವದ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. 2000 ಇಸವಿಯಲ್ಲಿ ಕೇಂದ್ರ ಸೇವೆಗೆ ನಿಯೋಜನೆಗೊಂಡು ಪ್ರಸ್ತುತ ಪಾಕಿಸ್ಥಾನದ ಕಾಬುಲ್‌ನಲ್ಲಿ ವಿಶ್ವಸಂಸ್ಥೆ ಭದ್ರತಾ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.