Advertisement
ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಬಂದ ಲಾಭವನ್ನು ಉತ್ಪಾದಕರಿಗೆ ಬೋನಸ್ ಆಗಿ ಪ್ರತಿ ವರ್ಷ ಹಂಚಿಕೆ ಮಾಡಲಾಗುತ್ತದೆ. ಅದೇ ರೀತಿಯಲ್ಲೇ ಕೋಡಿಮೋಳೆ ಹಾಲು ಸಂಘದಲ್ಲೂ ಪ್ರತಿ ವರ್ಷ ಬೋನಸ್ ನೀಡಲಾಗಿದೆ. ಅದರ ಜೊತೆಗೆ ಬೆಳ್ಳಿ ಹಬ್ಬದ ಸವಿ ನೆನಪಿಗಾಗಿ ತನ್ನ ಹಾಲು ಉತ್ಪಾದಕರಿಗೆ ಉಡುಗೊರೆಗಳ ಸರಮಾಲೆಯನ್ನೇ ನೀಡಿದೆ. ಕೋಡಿಮೋಳೆ ಡೇರಿಯು ಸ್ಥಾಪನೆ ಆದದ್ದು 1992ರ ಆ.22 ರಂದು. ಇದರ ಸ್ಥಾಪಕ ಅಧ್ಯಕ್ಷ ಕೋಡಿಮೋಳೆ ರಾಜಶೇಖರ್. ಡೇರಿ 25 ವರ್ಷ ಪೂರೈಸುತ್ತಿರುವ ಈ ಸಂದರ್ಭದಲ್ಲೂ ಅದೇ ರಾಜಶೇಖರ್ ಅಧ್ಯಕ್ಷರಾಗಿದ್ದಾರೆ. ಅವರ ಪರಿಶ್ರಮ, ಪ್ರಾಮಾಣಿಕತೆಯಿಂದ ಡೇರಿ ಅಭಿವೃದ್ಧಿ ಹೊಂದಿದೆ.
ಬೆಳ್ಳಿ ಹಬ್ಬದ ಅಂಗವಾಗಿ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಸದ ಆರ್. ಧ್ರುವನಾರಾಯಣ ಹಾಲು ಉತ್ಪಾದಕ ಸದಸ್ಯರಿಗೆ ಬೆಳ್ಳಿ ಲೋಟ, ಸೀರೆ, ಪಂಚೆ ಏರ್ ಬ್ಯಾಗ್, ಸ್ಟಿಲ್ ಬಕೆಟ್, ಪಶು ಆಹಾರ, ಖನಿಜ ಮಿಶ್ರಣ,
ನೆಕ್ಕು ಬಿಲ್ಲೆ ಹಾಗೂ ನೂತನ ಕ್ಯಾಲೆಂಡರನ್ನು ವಿತರಿಸಿದರು.
Related Articles
Advertisement
ಶಾಸಕ ಸಿ.ಪುಟ್ಟರಂಗಶೆಟ್ಟಿ ಮಾತನಾಡಿ, ಕೋಡಿ ಮೋಳೆ ಸಂಘದ ಸಾಧನೆ ನಿಜಕ್ಕೂ ಶ್ಲಾಘನೀಯ. ಇದಕ್ಕೆ ಪೂರಕವೆಂಬಂತೆ ತಮ್ಮ ಸರ್ಕಾರ ಮೈಸೂರು ಹಾಲು ಒಕ್ಕೂಟದಲ್ಲಿದ್ದ ಚಾ.ನಗರ ಹಾಲು ಒಕ್ಕೂಟವನ್ನು ಪ್ರತ್ಯೇಕಗೊಳಿಸಿ, ಕುದೇರಿನಲ್ಲಿ ನೂತನ ಒಕ್ಕೂಟ ಸ್ಥಾಪಿಸಿದೆ. ಇದು ಜಿಲ್ಲೆಯ ಹಾಲು ಉತ್ಪಾದಕರಿಗೆ ಸಹಾಯಕವಾಗಿದೆ ಎಂದರು.
ಹಾಲು ಒಕ್ಕೂಟದ ಅಧ್ಯಕ್ಷ ಕೋಡಿಮೋಳೆ ರಾಜಶೇಖರ್ ಮಾತನಾಡಿ, ಬೆಳ್ಳಿ ಹಬ್ಬದ ಸಂಭ್ರಮವನ್ನು ಅರ್ಥಪೂರ್ಣಗೊಳಿಸಲು ಉತ್ಪಾದಕರಿಗೆ ವಿವಿಧ ಉಡುಗೊರೆಗಳನ್ನು ನೀಡಲಾಗುತ್ತಿದೆ. ಇದು ಎಲ್ಲಾ ಆಡಳಿತ ಮಂಡಳಿ ಸದಸ್ಯರ ಶ್ರಮದಿಂದ ಸಾಧ್ಯವಾಗಿದೆ. ಸಂಘದ ಬೆಳವಣಿಗೆಯಲ್ಲಿ ಮುಖ್ಯ ಪಾತ್ರ ವಹಿಸಿದ ಉತ್ಪಾದಕರನ್ನು ಪ್ರೋತ್ಸಾಹಿಸುವುದು ತಮ್ಮ ಕರ್ತವ್ಯ ಎಂದರು.ಮುಂದಿನ ದಿನಗಳಲ್ಲಿ ಗ್ರಾಮಗಳಿಗೆ ಸಾಮೂಹಿಕ ಶೌಚಾಲಯ ನಿರ್ಮಾಣ, ಸದಸ್ಯರಿಗೆ ಆರೋಗ್ಯ ತಪಾಸಣಾ ಶಿಬಿರಗಳು, ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸುವುದು, ರಾಸುಗಳನ್ನು ವಿಮಾ ಯೋಜನೆಗೆ ಒಳಪಡಿಸಿ ಸಂಘದಿಂದ ಪೋ›ತ್ಸಾಹ ಧನ ನೀಡುವುದು ಸೇರಿದಂತೆ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು ಎಂದರು.
ಈ ಕಾರ್ಯಕ್ರಮದಲ್ಲಿ ಚಾಮುಲ್ ಅಧ್ಯಕ್ಷ ಗುರುಮಲ್ಲಪ್ಪ, ವ್ಯವಸ್ಥಾಪಕ ನಿದೇರ್ಶಕ ಜಯಕುಮಾರ್, ತಾಪಂ ಸದಸ್ಯ ಮಹದೇವಶೆಟ್ಟಿ, ಗ್ರಾಪಂ ಅದ್ಯಕ್ಷ ಸಿದ್ದಪ್ಪಾಜಿ, ಉಪಾದ್ಯಕ್ಷ ನಾಗನಾಯ್ಕ, ಸಂಘದ ನಿರ್ದೇಶಕರಾದ ಎಂ.ಎಸ್.ರವಿಶಂಕರ್, ಕೆ.ಆರ್.ಬಸವರಾಜು, ಪ್ರಮೋದಾ ಶಂಕರಮೂರ್ತಿ, ಮುಖಂಡರಾದ ಗೋವಿಂದಶೆಟ್ಟಿ ಹಾಗೂ ಸದಸ್ಯರು ಭಾಗವಹಿಸಿದ್ದರು. ರಾಜ್ಯದಲ್ಲೇ ಮೊದಲು ಇಡೀ ರಾಜ್ಯದಲ್ಲಿ 12 ಸಾವಿರ ಹಾಲು ಉತ್ಪಾದಕರ ಸಹಕಾರ ಸಂಘಗಳಿವೆ. ರಾಜ್ಯದಲ್ಲಿ ಇಷ್ಟೊಂದು ಪ್ರಮಾಣದ ಕೊಡುಗೆ ನೀಡುತ್ತಿರುವುದು ತಮ್ಮ ಸಂಘ ಮಾತ್ರ ಎಂದು ಡೇರಿ ರಾಜಶೇಖರ್ ಹೇಳಿದರು. ಸದಸ್ಯರಿಗೆ ಈಗ ಎರಡು ಬೆಳ್ಳಿ ಲೋಟ, ಒಂದು ಸೀರೆ ಮತ್ತು ಕಣ, ಪಂಚೆ ಶರ್ಟು ಟವೆಲ್, ಸ್ಟೀಲ್ ಬಕೆಟ್, ಟ್ರಾವೆಲ್ ಬ್ಯಾಗ್, 50 ಕೆಜಿ ಪಶು ಆಹಾರ, ನೆಕ್ಕು ಬಿಲ್ಲೆ, ಖನಿಜ ಮಿಶ್ರಣ, ಈ ವರ್ಷದ ಕ್ಯಾಲೆಂಡರ್ ಅನ್ನು ಕೊಡುಗೆಯಾಗಿ ನೀಡುತ್ತಿದ್ದು, ಇದಕ್ಕೆ ತಲಾ 9 ಸಾವಿರ ರೂ. ವೆಚ್ಚವಾಗಿದೆ. ಒಟ್ಟು 220 ಸದಸ್ಯರಿಗೆ ನೀಡಲಾಗುತ್ತಿದೆ ಎಂದು ಉದಯವಾಣಿಗೆ ತಿಳಿಸಿದರು.